ಮಂಗಳೂರು : ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ವತಿಯಿಂದ ಮಂಗಳೂರಿನ ರಾಷ್ಟ್ರೀಯ ಆಯುಷ್ ಮಿಷನ್ ಸಂಯುಕ್ತ ಆಯುಷ್ ಆಸ್ಪತ್ರೆಯನ್ನು ಸೆ.25ರ ಶನಿವಾರ ನಗರದ ವೆನ್‍ಲಾಕ್ ಆಯುಷ್ ಆಸ್ಪತ್ರೆಯ ಆವರಣದಲ್ಲಿ ಕೇಂದ್ರ ಸರಕಾರದ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವರು ಮತ್ತು ಆಯುಷ್ ಸಚಿವರಾದ ಸರ್ಬಾನಂದ ಸೋನೋವಾಲ್ ಅವರು ಲೋಕಾರ್ಪಣೆ ಮಾಡಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದರು.
ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್, ಮೆಯರ್ ಪ್ರೇಮಾನಂದ ಶೆಟ್ಟಿ ವಿವಿಧ ನಿಗಮಗಳ ಅಧ್ಯಕ್ಷರುಗಳಾದ ಸಂತೋಷ್ ಕುಮಾರ್ ಬೋಳಿಯಾರ್, ರವೀಂದ್ರ ಶೆಟ್ಟಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಡಿಎಚ್ಒ ಡಾ. ಕಿಶೋರ್, ಜಿಲ್ಲಾ ಆಯುಷ್ ಅಧಿಕಾರಿ ಮಹಮದ್ ಇಕ್ಬಾಲ್, ಮೆಡಿಕಲ್ ಅಧಿಕಾರಿಗಳು,ಜನಪ್ರತಿನಿಧಿಗಳು, ಗಣ್ಯರು ಹಾಜರಿದ್ದರು.
ರಾಷ್ಟ್ರೀಯ ಆಯುಷ್ ಮಿಷನ್ ಆಸ್ಪತ್ರೆಯ ವಿಶೇಷತೆಗಳು
ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿಯಲ್ಲಿ 2016 ರಲ್ಲಿ ವೆನ್ ಲಾಕ್ ಆಸ್ಪತ್ರೆ ಆವರಣದಲ್ಲಿ 5 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಮಂಜೂರಾಗಿ 2020ರಲ್ಲಿ ಕಾಮಗಾರಿ ಪೂರ್ಣಗೊಂಡಿರುತ್ತದೆ. ಕೋವಿಡ್ ಸಾಂಕ್ರಮಿಕದಿಂದಾಗಿ ಆಸ್ಪತ್ರೆ ಉದ್ಘಾಟನೆ ಮಾಡಲು ಸಾಧ್ಯವಾಗಿರಲಿಲ್ಲ, ಕೋವಿಡ್ ಮಾನದಂಡಗಳನ್ನು ಪಾಲಿಸಿ ಈಗ ಆಸ್ಪತ್ರೆಯನ್ನು ಉದ್ಘಾಟನೆಗೊಳ್ಳಲಿದ್ದು, ಹೊರರೋಗಿ ವಿಭಾಗವು ಕಾರ್ಯಾರಂಭಗೊಳ್ಳಲಿದೆ. ಆಯುಷ್‌ನ ಎಲ್ಲಾ ಪದ್ಧತಿಗಳ ( ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹೋಮಿಯೋಪತಿ) ವಿಶೇಷ ಚಿಕಿತ್ಸಾ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಎಲ್ಲಾ ಆಯುಷ್ ಪದ್ಧತಿಗಳು ಹಾಗೂ ಆರೋಪತಿ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿರುವ ದೇಶದ ಮೊತ್ತಮೊದಲ ಆಸ್ಪತ್ರೆ ಇದಾಗಿದೆ.
ಈ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಪಂಚಕರ್ಮ, ಜಪ, ಕಾರಸವ ಅಭ್ಯಂಗ ಮುಂತಾದ ಎಲ್ಲಾ ಚಿಕಿತ್ಸೆಗಳು ಲಭ್ಯವಾಗಲಿವೆ. ನ್ಯಾಚುರೋಪತಿ ಪದ್ಧತಿಯ ಜಲಚಿಕಿತ್ಸೆ, ಆಕ್ಯೂಪಂಚರ್, ಆಕ್ಯುಪ್ರೆಶರ್, ಕಲರ್‌ಥೆರಪಿ ಪಿಸಿಯೋಥೆರಪಿ ಮುಂತಾದ ಚಿಕಿತ್ಸೆಗಳು ಹಾಗೂ ಯುನಾನಿ ಚಿಕಿತ್ಸಾ ಪದ್ಧತಿಯಲ್ಲಿ ಫಲಕ, ಹಿಜಾಮ (ಗಜೆಮಿನಲ್ ಥೆರಪಿ) ಮುಂತಾದ ಆಯುಷ್ ಚಿಕಿತ್ಸಾ ಪದ್ಧತಿ ಲಭ್ಯವಾಗಲಿವೆ.
ಹೊರರೋಗಿ ಚಿಕಿತ್ಸಾ ವಿಭಾಗಗಳು ಕಾರ್ಯಾರಂಭ ಮಾಡಲಿವೆ.
9 ಕೋಟಿ ಅಂದಾಜು ವೆಚ್ಚದಲ್ಲಿ ಅತ್ತೆ ನಿರ್ಮಾಣವಾಗಿದ್ದು, ತಳಮಹಡಿಯಲ್ಲಿ ಹೊರರೋಗಿ ವಿಭಾಗ, ಫಾರ್ಮಸಿ, ಪ್ರಯೋಗಾಲಯ, ಚಲಚಿಕಿತ್ಸಾ
ಮೊದಲನೆ ಮಹಡಿಯಲ್ಲಿ ಆಡಳಿತ ವಿಭಾಗ,ಎರಡನೇ ಮಹಡಿಯಲ್ಲಿ 20 ಹಾಸಿಗೆಗಳ ಜನರಲ್ ವಾರ್ಡ್ ಹಾಗೂ 5 ಸ್ಪೆಷಲ್ ವಾರ್ಡ್ ಮತ್ತು ಪಂಚಕರ್ಮ ಆಯುಷ್ ಥೆರಪಿ ಸೌಲಭ್ಯವಿರುವ ಮಹಿಳಾ ವಿಭಾಗ • ಮೂರನೇ ಮಹಡಿಯಲ್ಲಿ 20 ಹಾಸಿಗೆಗಳ ಜನರಲ್ ವಾರ್ಡ್ ಹಾಗೂ 5 ಸ್ಪೆಷಲ್ ವಾರ್ಡ್ ಹಾಗೂ ಮಾಡ್ಯುಲರ್ ಓಟ ಸೌಲಭ್ಯಗಳಿವೆ.
ಇದರ ಜೊತೆಗೆ ಡಯಟ್ ಕಿಚನ್, ಪದ್ಯಾಹಾರ ವಿಭಾಗ ಸ್ಪೆಷಾಲಿಟಿ ಕ್ಲಿನಿಕ್ ಸೌಲಭ್ಯಗಳಿವೆ.
ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖಾ ವತಿಯಿಂದ ಪ್ರಾರಂಭಿಸಲಾದ ಮಕ್ಕಳಿಲ್ಲದ ದಂಪತಿಗಳಿಗೆ ಸೃಷ್ಟಿ ಯೋಜನೆ
ಅಪೌಷ್ಟಿಕತೆ ನಿವಾರಣೆಗಾಗಿ ಪ್ರಾರಂಭಿಸಲಾದ “ಸಮೃದ್ಧಿ ಮಕ್ಕಳ ಮಾನಸಿಕ ಬೆಳವಣಿಗೆಗೆ “ಮಾನನಮಿತ್ರ ಯೋಜನೆಗಳು ಲಭ್ಯವಾಗಲಿವೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಆಯುಷ್ ಇಲಾಖೆಯು ಮನವಿ ಮಾಡಿದೆ.