ಉಡುಪಿ: ಗ್ರಾಹಕರ ಬೇಡಿಕೆಗೆ ತಕ್ಕಂತಹ ಉತ್ಪನ್ನಗಳನ್ನು ಒದಗಿಸಿದಾಗ ಮಾರಾಟ ವೃದ್ಧಿಯಾಗಲಿದೆ. ಗ್ರಾಹಕರಿಗೆ ನಗುಮೊಗದ ಸೇವೆಯೊಂದಿಗೆ ಉತ್ಕೃಷ್ಣ ಗುಣಮಟ್ಟದ ವಸ್ತು ವೈವಿಧ್ಯಗಳನ್ನು ನೀಡಿದಾಗ ಸಂಸ್ಥೆ ಇನ್ನಷ್ಟು ಬೆಳೆಯಲಿದೆ ಎಂದು ಟಾಟಾ ಸನ್ಸ್ ಲಿ.ನ ನಿರ್ದೇಶಕ ಭಾಸ್ಕರ ಭಟ್ ಹೇಳಿದರು.
ಅವರು ಗುರುವಾರ (ಫೆ.09)ನಗರದ ಕೆ.ಎಂ. ಮಾರ್ಗದ ಮೈತ್ರಿ ಕಾಂಪ್ಲೆಕ್ಸ್ ಎದುರಿನ ಸಿಪಿಸಿ ಪ್ಲಾಜಾ ಕಟ್ಟಡದಲ್ಲಿ ನವೀಕೃತಗೊಂಡ ಶೋರೂಮ್‌ನಲ್ಲಿ ಟೈಟಾನ್ ವರ್ಲ್ಡ್ ಮತ್ತು ಹೀಲಿಯೋಸ್ ದಿ ವಾಚ್ ಸ್ಟೋರ್‌ನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಎಂಡಿ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ನಿರಂತರತೆಯನ್ನು ಕಾಯ್ದುಕೊಂಡು ಸಾಗುತ್ತಿರುವ ಸಮಯದ ಜತೆ ಜತೆಗೆ ನಾವು ಸಾಗಿದಾಗ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯ. ಕಾಲಕ್ಕೆ ಸರಿಯಾಗಿ ನಡೆದುಕೊಂಡರೆ ಸ್ವಂತ ಅಭಿವೃದ್ಧಿಯೊಂದಿಗೆ ಸ್ಪರ್ಧಾತ್ಮಕ ಯುಗದಲ್ಲಿ ಮುನ್ನಡೆಯಬಹುದು ಎಂದರು.
ನೈನಾ ಫ್ಯಾನ್ಸಿಯ ಮಾಲಕ ಮೊಹಮ್ಮದ್ ಮೌಲಾ, ಸಾಯಿರಾಧಾ ಸಮೂಹ ಸಂಸ್ಥೆಯ ಎಂಡಿ ಮನೋಹರ ಎಸ್. ಶೆಟ್ಟಿ, ಪ್ರಸಾದ್ ನೇತ್ರಾಲಯ ಕಣ್ಣಿನ ಸಮೂಹ ಆಸ್ಪತ್ರೆಗಳ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಕೂಡ್ಲು ಶುಭ ಹಾರೈಸಿದರು.
ಸಂಸ್ಥೆಯ ಪಾಲುದಾರರಾದ ಗ್ರೆಟ್ಟಾ ಮ್ಯಾಕ್ಸಿಮ್ ಸ್ಟೀಫನ್ ಸಲ್ದಾನ, ಲಿಯೋನ್ ಸಲ್ದಾನ, ಆನೆಲ್ ಸಲ್ದಾನ, ಟೈಟಾನ್ ಕಂಪೆನಿಯ ರೀಜನಲ್ ಬಿಸಿನೆಸ್ ಮ್ಯಾನೇಜರ್ ರೇವತಿ ರಂಗನ್, ಏರಿಯಾ ಬಿಸಿನೆಸ್ ಮ್ಯಾನೇಜರ್ ಸಂದೇಶ್ ಪೈ, ಟ್ರೈನರ್‌ಗಳಾದ ಚೇತನ್, ಅನೂಪ್, ಸ್ಟೋರ್ ಮ್ಯಾನೇಜರ್ ರಾಜೇಶ್, ವಿಶುವಲ್ ಮರ್ಚಂಟೈಸರ್ ಹರೀಶ್ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.
ಉದ್ಘಾಟನೆ ಆಫರ್:
ಉದ್ಘಾಟನೆ ಪ್ರಯುಕ್ತ ಟೈಟಾನ್ ಶೋರೂಮ್ ನಲ್ಲಿ ಫೆ. 12ರ ತನಕ ಶೇ. 10 ವಿಶೇಷ ರಿಯಾಯಿತಿ ದೊರಕಲಿದೆ. ಮಳಿಗೆಯಲ್ಲಿ ಸ್ಮಾರ್ಟ್ ವಾಚ್, ವೈರ್‌ಲೆಸ್ ಆಡಿಯೋ, ವಾಲ್ ಕ್ಲಾಕ್, ಫ್ರಾಗ್ರ್ಯಾನ್ಸಸ್, ಇಂಟರ್‌ನ್ಯಾಶನಲ್ ಬ್ರಾಂಡ್ ವಾಚ್‌ಗಳಲ್ಲದೆ ಪ್ರೀಮಿಯಂ ವಾಚ್‌ಗಳು ದೊರೆಯಲಿವೆ. ಟೈಟಾನ್, ನೆಬುಲಾ, ಎಡ್ಜ್, ಸ್ಕೈಲಿಸ್, ರಾಗ, ಸ್ಕಿನ್, ಫಾಸ್ಟ್ರಾéಕ್, ಸೊನಾಟ, ಸೀಕೋ, ಫೊಸ್ಸಿಲ್, ಅರ್ಮಾನಿ ಎಕ್ಸ್‌ಚೇಂಜ್, ಗೆಸ್, ಸಿಟಿಜನ್, ಅಮೇಝ್ಫಿಟ್ ಮೊಡೆಲ್‌ಗಳು ಲಭ್ಯವಿರಲಿವೆ ಎಂದು ಸಂಸ್ಥೆಯ ಎಂಡಿ ಮ್ಯಾಕ್ಸಿಮ್ ಸ್ಟೀಫನ್ ಸಲ್ದಾನ ತಿಳಿಸಿದರು.