Advertisement

Ayodhya: ಶ್ರೀರಾಮ ಮಂದಿರ ಉದ್ಘಾಟನೆ ಭಾರತದ ದೊಡ್ಡ ಹಬ್ಬ: ಎಚ್‌ಡಿಕೆ

12:19 AM Jan 12, 2024 | Team Udayavani |

ಚಿಕ್ಕಮಗಳೂರು: ರಾಮಮಂದಿರ ಉದ್ಘಾಟನೆ ಭಾರತದ ಹಬ್ಬ. ಕಾಂಗ್ರೆಸ್‌ನವರು ಯಾಕೆ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಅವರೇ ಹೇಳಬೇಕು. ಅದು ಅವರ ಪಕ್ಷದ ನಿರ್ಧಾರ. ಅದಕ್ಕೂ, ನನಗೂ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮಮಂದಿರ ಆಗಬೇಕು ಎನ್ನುವುದು ದೇಶದ ಜನರ ನಿರೀಕ್ಷೆ. ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂಕೋರ್ಟ್‌ ತೆರೆ ಎಳೆದಿದೆ. ರಾಮಮಂದಿರ ಉದ್ಘಾಟನೆ ಭಾರತದ ಹಬ್ಬವಾಗಿದ್ದು, ರಾಮಮಂದಿರ ನಿಜವಾದ ರಾಮರಾಜ್ಯದ ಕನಸು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವರ್ಚಸ್ಸು ಇದೆ. ರಾಮಮಂದಿರ ಉದ್ಘಾಟನೆ ಮುಂಚೂಣಿಯಲ್ಲಿದೆ. ದೇಶದ ಜನ ಸ್ಥಿರ ಸರಕಾರದ ಅಪೇಕ್ಷೆಯಲ್ಲಿದ್ದಾರೆ ಎಂದರು.

ಹಿಂದಿನ ಕಾಂಗ್ರೆಸ್‌ ಜತೆಗಿನ ಮೈತ್ರಿಗೂ ಈಗಿನ ಬಿಜೆಪಿ ಜತೆಗಿನ ಮೈತ್ರಿಗೂ ಭಾರೀ ವ್ಯತ್ಯಾಸವಿದೆ. ಎರಡು ದಿನಗಳ ಕಾಲ ಮಂಡ್ಯ ಮಾತ್ರವಲ್ಲ ರಾಜ್ಯ ರಾಜಕೀಯ ಮತ್ತು ಎಲ್ಲಾ ಜಿಲ್ಲೆಗಳ ರಾಜಕೀಯದ ಬಗ್ಗೆ ಚರ್ಚೆ ಮಾಡಲಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಶಕ್ತಿ ಏನೆಂದು ಗೊತ್ತಿದೆ. ಎರಡೂ ರಾಜಕೀಯ ಪಕ್ಷಗಳ ಬಿರುಸಿನ ರಾಜಕೀಯ ಬೆಂಗಳೂರಿನಿಂದ ದಿಲ್ಲಿಗೆ ತಲುಪಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next