Advertisement

Parliament ಇಂದು ಪ್ರೇರಣ ಸ್ಥಳ ಉದ್ಘಾಟನೆ; ವಿಪಕ್ಷ ವಿರೋಧ

01:28 AM Jun 16, 2024 | Team Udayavani |

ಹೊಸದಿಲ್ಲಿ: ನವ ಸಂಸತ್‌ ಸಂಕೀರ್ಣ ದಲ್ಲಿ ರವಿವಾರ ಮಹಾತ್ಮಾ ಗಾಂಧೀಜಿ, ಡಾ| ಅಂಬೇಡ್ಕರ್‌ ಸಹಿತ ಪ್ರಮುಖರ ಪ್ರತಿಮೆಗಳಿರುವ ಪ್ರೇರಣ ಸ್ಥಳ ಉದ್ಘಾಟನೆಗೊಳ್ಳಲಿದೆ ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ. ಉಪ ರಾಷ್ಟ್ರತಿ ಜಗದೀಪ್‌ ಧನ್ಕರ್‌ ಇದನ್ನು ಲೋಕಾ ರ್ಪಣೆಗೊಳಿಸಲಿದ್ದಾರೆ.

Advertisement

ಈ ಬಗ್ಗೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಸಂಸತ್ತನ್ನು ಪ್ರಜಾಪ್ರಭುತ್ವ ರಹಿತಗೊಳಿಸುವ ಪ್ರಯತ್ನ. ಕೇಂದ್ರ ಸರಕಾರ ತಳಮಳದಿಂದ ಇಂಥ ಕ್ರಮ ಕೈಗೊಂಡಿದೆ ಎಂದು ವಿಪಕ್ಷಗಳು ದೂಷಿಸಿವೆ. ಮುಂದಿನ ವಾರದಿಂದ ಅಧಿವೇಶನ ಆರಂಭವಾಗಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಈ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದು, ಪ್ರತಿಮೆ ಗಳ ಸ್ಥಳಾಂತರ ಹಾಗೂ ಆ ಸ್ಥಳಕ್ಕೆ ಭವ್ಯವಾದ ಹೆಸರಿಡುವ ಈ ಸಂಪೂರ್ಣ ಯೋಜನೆಯ ಹಿಂದಿನ ಉದ್ದೇಶವೇ ಸಂಸತ್ತಿನ ಎದುರು ಗಾಂಧಿ ಮತ್ತು ಅಂಬೇಡ್ಕರ್‌ ಪ್ರತಿಮೆಗಳನ್ನು ಇಲ್ಲ ದಂತಾಗಿಸುವುದು ಎಂದು ಆರೋಪಿಸಿದ್ದಾರೆ.

ಕೇಂದ್ರದ ಸಮರ್ಥನೆ
ವಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿರುವ ಕೇಂದ್ರ ಸರಕಾರವು ಸಂಸತ್‌ ಭವನದ ವೀಕ್ಷಣೆಗೆ ಬರುವವರಿಗೆ ದೇಶಕ್ಕಾಗಿ ಹೋರಾಟ ನಡೆಸಿದ ಪ್ರಮುಖರ ಪ್ರತಿಮೆಗಳು ಸದ್ಯ ಒಂದೇ ಕಡೆ ನೋಡಲು ಸಿಗುವುದಿಲ್ಲ. ಹೊಸ ಕ್ರಮದಿಂದ ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ಪ್ರಮುಖ ನಾಯಕರ ಪ್ರತಿಮೆಗಳು ನೋಡಲು ಸಿಗುತ್ತವೆ ಎಂದು ಹೇಳಿಕೊಂಡಿದೆ.

ನೂತನ ಸಂಸತ್‌ ಸಂಕೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ಪ್ರೇರಣ ಸ್ಥಳ
ಪ್ರೇರಣೆ ನೀಡುವ ವ್ಯಕ್ತಿಗಳ ಪ್ರತಿಮೆ ಇರುವ ಹಿನ್ನೆಲೆಯಲ್ಲಿ ಪ್ರೇರಣ ಸ್ಥಳ ಹೆಸರು
ಎಲ್ಲ ನಾಯಕರ ಜೀವನ, ಕೊಡುಗೆ ಬಗ್ಗೆ ತಂತ್ರಜ್ಞಾನದ ಮೂಲಕ ಮಾಹಿತಿ
ಒಂದೇ ಸ್ಥಳದಲ್ಲಿ ಎಲ್ಲ ಪ್ರತಿಮಗಳ ವೀಕ್ಷಣೆಗೆ ಸಂದರ್ಶಕರಿಗೆ ಅನುಕೂಲ

Advertisement
Advertisement

Udayavani is now on Telegram. Click here to join our channel and stay updated with the latest news.

Next