Advertisement

ST ಗೆ ಕೋಳಿ ಬೆಸ್ತ ಸಮಾಜ ಸೇರಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ: ಸಂಸದೆ ಪ್ರಿಯಂಕಾ

06:24 PM Jun 16, 2024 | Team Udayavani |

ಬೆಳಗಾವಿ: ಕೋಳಿ ಬೆಸ್ತ ಸಮಾಜವನ್ನು ಎಸ್ ಟಿ ವರ್ಗಕ್ಕೆ ಸೇರಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದ್ದಾರೆ.

Advertisement

ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಕೋಳಿ ಬೆಸ್ತ ಸಮಾಜ ಜಿಲ್ಲಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ತಂದೆ ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕೂಡ ಕೋಳಿ- ಬೆಸ್ತ ಸಮಾಜವನ್ನು ಎಸ್ಟಿ ಸಮಾಜಕ್ಕೆ ಸೇರಿಸಬೇಕೆಂಬ ನಿಲುವು ಹೊಂದಿದ್ದಾರೆ.ಅದರಂತೆ ನಾನು ಕೂಡ ಸದಾ ನಿಮ್ಮ ಸಮಾಜದ ಪ್ರಗತಿಯನ್ನು ಬಯಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ 45 ದಿನಗಳ ನನ್ನ ಪ್ರಚಾರ ಸಭೆಯಲ್ಲಿ ಮಹಿಳೆಯರು ನನ್ನ ಬಳಿ ಸಾಕಷ್ಟು ಮನವಿಗಳನ್ನು ಸಲ್ಲಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಹಿಳೆಯರ ಅಭಿಪ್ರಾಯದಂತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕೆಂಬುದು ನನ್ನ ಆಶಯ.ಈ ಚುನಾವಣೆಯಲ್ಲಿ ದೇಶದಲ್ಲಿ 30 ಕ್ಕಿಂತ ಕಡಿಮೆ ವಯಸ್ಸಿನವರು ನನ್ನನ್ನು ಸೇರಿ ಐದು ಜನ ಮಹಿಳೆಯರು ಸಂಸತ್ತಿನಲ್ಲಿ ಕಾಲಿಟ್ಟಿದ್ದು ಖುಷಿಯ ಸಂಗತಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next