Advertisement

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

01:18 AM Jun 17, 2024 | Team Udayavani |

ಹೊಸದಿಲ್ಲಿ: ವಿಪಕ್ಷಗಳ ಆಕ್ರೋಶಗಳ ನಡುವೆ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಸಂಸತ್‌ ಭವನದ ಆವರಣದಲ್ಲಿ “ಪ್ರೇರಣಾ ಸ್ಥಳ’ವನ್ನು ರವಿವಾರ ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಅವರು ಈ ಸ್ಥಳಕ್ಕೆ ಬರಲು ನಿಜಕ್ಕೂ ಪ್ರೇರಣೆಯಾಗುತ್ತದೆ ಎಂದಿದ್ದಾರೆ. ಯಾವುದೇ ಧಾರ್ಮಿಕ ಸ್ಥಳಕ್ಕೆ ಇದು ಕಡಿಮೆಯಾಗಿಲ್ಲ ಎಂದು ಧನ್ಕರ್‌ ಹೇಳಿಕೊಂಡಿದಾರೆ.

Advertisement

ಮಹಾತ್ಮಾ ಗಾಂಧಿ ಪ್ರತಿಮೆಗೆ ಧನ್ಕರ್‌ ಜತೆಗೆ 17ನೇ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಕೇಂದ್ರ ಸಚಿವ ಕಿರಣ್‌ ರಿಜಿಜು, ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ನಾರಾಯಣ್‌ ಸಿಂಗ್‌, ಕೇಂದ್ರ ಸಚಿವರಾದ ಅಶ್ವಿ‌ನಿ ವೈಷ್ಣವ್‌, ಅರ್ಜುನ್‌ ರಾಮ್‌ ಮೆಘಾÌಲ್‌ ಹಾಗೂ ಎಲ್‌.ಮುರುಗನ್‌ ಗೌರವ ಸಲ್ಲಿಸಿದರು. ಕೇಂದ್ರ ಸರಕಾರವು ಸಂಸತ್‌ ಭವನದ ಆವರಣದೊಳಗೆ ಒಂದೊಂದು ಭಾಗದಲ್ಲಿದ್ದ ಪ್ರತಿಮೆಗಳನ್ನು ಪ್ರೇರಣಾ ಸ್ಥಳದಲ್ಲಿ ಒಂದೆಡೆ ಇರಿಸಿದೆ.

ಎಲ್ಲರ ಜತೆ ಚರ್ಚಿಸಿದ್ದೇವೆ: ಓಂ ಬಿರ್ಲಾ
ಮಹಾತ್ಮಾ ಗಾಂಧಿ ಸೇರಿದಂತೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ತೆರವುಗೊಳಿಸಲಾಗಿಲ್ಲ. ಅವುಗಳ ಸ್ಥಳಗಳನ್ನು ಬದಲಿಸಲಾಗಿದೆ ಎಂದು 17ನೇ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಾರೆ. ಈ ತೀರ್ಮಾನ ಕೈಗೊಳ್ಳುವ ಮೊದಲು ಪ್ರಮುಖ ನಾಯಕರ ಜತೆಗೆ ಚರ್ಚಿಲಾಗಿತ್ತು ಎಂದಿದ್ದಾರೆ.

ಪ್ರೇರಣಾ ಸ್ಥಳವನ್ನು ನಿರ್ಮಿಸುವ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಏಕಪಕ್ಷೀಯವಾಗಿ ತೆಗೆದುಕೊಂಡಿದೆ. ಗಾಂಧಿ, ಅಂಬೇಡ್ಕರ್‌ ಪ್ರತಿಮೆಗಳು ಇರಬಾರದೆಂಬುದು ಬಿಜೆಪಿಯ ಉದ್ದೇಶವಾಗಿತ್ತು. ಇದು ಶಾಂತಿಯುತ, ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವ ಹೋರಾಟಗಳು ನಡೆಯುವ ಸಾಂಪ್ರದಾಯಿಕ ಸ್ಥಳವಾಗಿತ್ತು.
ಜೈರಾಂ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next