Advertisement

Arundhati Roy ವಿರುದ್ಧ ಕೇಸು: ಬಿಜೆಪಿ ವಿರುದ್ಧ ವಿಪಕ್ಷಗಳ ಟೀಕೆ

12:33 AM Jun 16, 2024 | Team Udayavani |

ಹೊಸದಿಲ್ಲಿ: ಲೇಖಕಿ ಅರುಂಧತಿ ರಾಯ್‌ ಹಾಗೂ ಪ್ರೊ| ಶೇಖ್‌ ಶೌಕಾತ್‌ ಹುಸೈನ್‌ ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ(ತಡೆ)ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಲು ದಿಲ್ಲಿಯ ಲೆಫ್ಟಿನೆಂಟ್‌ ಗರ್ವನರ್‌ ವಿ.ಕೆ.ಸಕ್ಸೇನಾ ಅನು ಮತಿ ನೀಡಿದ್ದಾರೆ. 2010ರಲ್ಲಿ ಹೊಸದಿಲ್ಲಿ ಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ದೊರೆಯುತ್ತಿದ್ದಂತೆಯೇ ಅರುಂಧತಿ ಹಾಗೂ ಶೌಕಾತ್‌ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ.

Advertisement

ವಾಕ್ಸಮರ: ಈ ಬೆಳವಣಿಗೆ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಕರ್ನಾಟಕದ ಕಾಂಗ್ರೆಸ್‌ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌ ಟ್ವೀಟ್‌ ಮಾಡಿ, “ಭಿನ್ನ ಅಭಿಪ್ರಾಯ ಹೊಂದುವುದನ್ನು ಹತ್ತಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದು ದಿನವೂ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ತಿರುಗೇಟು ನೀಡಿದ ಬಿಜೆಪಿಯ ಶೆಹಜಾದ್‌ ಪೂನಾ ವಾಲಾ “ಲೆಫ್ಟಿನೆಂಟ್‌ ಗವರ್ನರ್‌ ನೀಡಿರುವ ಆದೇಶದಿಂದ ಕಾಂಗ್ರೆಸ್‌ ಬುಡವೇಕೆ ಅಲುಗಾಡುತ್ತಿದೆ? ಈ ಹಿಂದೆ ಕಾಂಗ್ರೆಸ್‌ ಎಸ್‌ಡಿಪಿಐನಿಂದ ಸಹಕಾರ ಪಡೆಯುತ್ತಿತ್ತು. ಈಗ ಪ್ರತ್ಯೇಕತಾವಾದಿಗಳ ಸಹಕಾರ ಪಡೆ ಯಲು ಮುಂದಾಗಿದೆ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next