Advertisement
ಈ ಬಗ್ಗೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಸಂಸತ್ತನ್ನು ಪ್ರಜಾಪ್ರಭುತ್ವ ರಹಿತಗೊಳಿಸುವ ಪ್ರಯತ್ನ. ಕೇಂದ್ರ ಸರಕಾರ ತಳಮಳದಿಂದ ಇಂಥ ಕ್ರಮ ಕೈಗೊಂಡಿದೆ ಎಂದು ವಿಪಕ್ಷಗಳು ದೂಷಿಸಿವೆ. ಮುಂದಿನ ವಾರದಿಂದ ಅಧಿವೇಶನ ಆರಂಭವಾಗಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ವಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿರುವ ಕೇಂದ್ರ ಸರಕಾರವು ಸಂಸತ್ ಭವನದ ವೀಕ್ಷಣೆಗೆ ಬರುವವರಿಗೆ ದೇಶಕ್ಕಾಗಿ ಹೋರಾಟ ನಡೆಸಿದ ಪ್ರಮುಖರ ಪ್ರತಿಮೆಗಳು ಸದ್ಯ ಒಂದೇ ಕಡೆ ನೋಡಲು ಸಿಗುವುದಿಲ್ಲ. ಹೊಸ ಕ್ರಮದಿಂದ ಪ್ರವಾಸಿಗರಿಗೆ ಒಂದೇ ಸ್ಥಳದಲ್ಲಿ ಪ್ರಮುಖ ನಾಯಕರ ಪ್ರತಿಮೆಗಳು ನೋಡಲು ಸಿಗುತ್ತವೆ ಎಂದು ಹೇಳಿಕೊಂಡಿದೆ.
Related Articles
ಪ್ರೇರಣೆ ನೀಡುವ ವ್ಯಕ್ತಿಗಳ ಪ್ರತಿಮೆ ಇರುವ ಹಿನ್ನೆಲೆಯಲ್ಲಿ ಪ್ರೇರಣ ಸ್ಥಳ ಹೆಸರು
ಎಲ್ಲ ನಾಯಕರ ಜೀವನ, ಕೊಡುಗೆ ಬಗ್ಗೆ ತಂತ್ರಜ್ಞಾನದ ಮೂಲಕ ಮಾಹಿತಿ
ಒಂದೇ ಸ್ಥಳದಲ್ಲಿ ಎಲ್ಲ ಪ್ರತಿಮಗಳ ವೀಕ್ಷಣೆಗೆ ಸಂದರ್ಶಕರಿಗೆ ಅನುಕೂಲ
Advertisement