Advertisement

Padubidri ಫಾರ್ಚೂನ್‌ ಸೇಫ್ಟಿ ಗ್ಲಾಸ್‌ ನ ನೂತನ ಘಟಕ “ಇನ್ಸುಲೇಟೆಡ್‌ ಗ್ಲಾಸ್‌’ ಉದ್ಘಾಟನೆ  

06:49 PM Nov 20, 2023 | Team Udayavani |

ಉಡುಪಿ: ಶ್ರೀ ದೇವಿ ಗ್ಲಾಸ್‌ ಹೌಸ್‌ ಸಂಸ್ಥೆಯ ಪಡುಬಿದ್ರಿ ನಂದಿಕೂರು ಇಂಡಸ್ಟ್ರೀಯಲ್‌ ಏರಿಯಾದಲ್ಲಿರುವ ಫಾರ್ಚೂನ್‌ ಸೇಫ್ಟಿ ಗ್ಲಾಸ್‌ನ ನೂತನ ಘಟಕ “ಇನ್ಸುಲೇಟೆಡ್‌ ಗ್ಲಾಸ್‌’ (ಡಿಜಿಯು) ಉದ್ಘಾಟನೆ ಸೋಮವಾರ ನಡೆಯಿತು.

Advertisement

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದೀಪ ಪ್ರಜ್ವಲಿಸಿ ಮಾತನಾಡಿ, ಬದುಕಿನಲ್ಲಿ ನಿರಂತರ ಪರಿಶ್ರಮ ಮತ್ತು ಪ್ರಾಮಾಣಿಕ ದುಡಿಮೆಯಿಂದ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬಹುದು. ಯಾವಾತ ತನ್ನ ಬದುಕಿನ ಜತೆಗೆ ಹತ್ತು ಮಂದಿಯ ಬದುಕಿಗೆ ಸಹಕಾರಿಯಾಗುತ್ತಾನೋ ಅದು ಮಾತ್ರ ನಿಜವಾದ ಬದುಕು ಎನಿಸಲಿದೆ.

ಬದುಕಿಗಾಗಿ ಆಯ್ದುಕೊಂಡ ಉದ್ಯಮದ ಮೂಲಕ ನೂರಾರು ಮಂದಿಗೆ ಉದ್ಯೋಗ ನೀಡಿ ಅವರಿಗೆ ಆಸರೆಯಾಗಿ ನಡೆಸುವ ಬದುಕು ಸಾರ್ಥಕವಾಗಲಿದೆ. ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದುವುದರೊಂದಿಗೆ ಸಾವಿರಾರು ಜನರ ಬದುಕಿಗೆ ದಾರಿದೀಪವಾಗಿ ಮೇಲ್ಮಟ್ಟಕ್ಕೆ ಏರಲಿ ಎಂದು ಆಶೀರ್ವಚನ ನೀಡಿದರು.

ಉದ್ಘಾಟಿಸಿದ ಮಾಂಡವಿ ಬಿಲ್ಡರ್ ಆ್ಯಂಡ್‌ ಡೆವಲಪರ್ನ ಆಡಳಿತ ನಿರ್ದೇಶಕ ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌ ಅವರು, ಉದ್ಯಮದ ಮೂಲಕ ಉತ್ತಮ ಗುಣಮಟ್ಟದ ಸೇವೆ ನೀಡಿದಾಗ ಇನ್ನಷ್ಟು ಗ್ರಾಹಕರನ್ನು ಸಂಪಾದಿಸಲು ಸಾಧ್ಯವಿದೆ. ಯಾವುದೇ ಸೇವೆಯನ್ನು ಸಮಯಕ್ಕೆ ಸರಿಯಾಗಿ ನೀಡಿದಾಗ ಅದಕ್ಕೆ ಮೌಲ್ಯ ದೊರೆಯುತ್ತದೆ. ಆದುದರಿಂದ ಸಮಯದ ಬದ್ಧತೆಯೊಂದಿಗೆ ಸಾಮಾಜಿಕ ಕಳಕಳಿ, ಸತ್ಯ, ನಿಷ್ಠೆ, ಕಠಿನ ಪರಿಶ್ರಮದಿಂದ ವ್ಯವಹಾರ ನಡೆಸಿದಾಗ ಉದ್ಯಮ ಸರ್ವತೋಮುಖವಾಗಿ ಬೆಳೆದು ಸಮಾಜಮುಖಿಯಾಗಲಿದೆ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಶನಲ್‌ ಕೌನ್ಸಿಲ್‌ ಸದಸ್ಯ ಕುಮಾರಚಂದ್ರ ಮಾತನಾಡಿ, ಉತ್ಪಾದನ ಸಾಮಗ್ರಿಗಳಿಗೆ ಉತ್ತಮ ಮಾರುಕಟ್ಟೆ ದೊರಕಿದರೆ ಉದ್ಯಮ ಯಶಸ್ಸಿನ ಪಥದೆಡೆಗೆ ಸಾಗಲಿದೆ. ಗುಣಮಟ್ಟದ ಉತ್ಪನ್ನಗಳಿಗೆ ಸದಾ ಬೇಡಿಕೆ ಲಭಿಸಲಿದೆ ಎಂದರು.

Advertisement

ಉಡುಪಿ ಎ.ಜಿ.ಅಸೋಸಿಯೇಟ್ಸ್‌ನ ಎಂ. ಗೋಪಾಲ ಭಟ್‌, ಆರ್ಕಿಟೆಕ್ಟ್ ಯೋಗೀಶ್ಚಂದ್ರಧರ, ಮಂಗಳೂರು ಕ್ರೆಡೈ ಅಧ್ಯಕ್ಷ ವಿನೋದ್‌ ಎ.ಆರ್‌.ಪಿಂಟೋ, ಮಂಗಳೂರು ಎಸಿಸಿಇ (ಐ)ನ ವಿಜಯವಿಷ್ಣು ಮಯ್ಯ, ಮಂಗಳೂರು ನಾರ್ದರ್ನ್ ಸ್ಕೈ ಪ್ರಾಪರ್ಟೀಸ್‌ ಪ್ರೈ.ಲಿ.ನ ನಿರ್ದೇಶಕಿ ಕ್ರಿತಿನ್‌ ಅಮೀನ್‌, ಉಡುಪಿ ಎಸಿಇ ಟೆಕ್ನೋ ಕ್ರಾಫ್ಟ್ನ ಆರ್ಕಿಟೆಕ್ಟ್ ರಮಣಿ ಹಂದೆ, ಸೈಂಟ್‌ ಗೋಬಿನ್‌ ಗ್ಲಾಸ್‌ ಇಂಡಿಯಾ ಪ್ರೈ.ಲಿ.ನ ಜಯಕುಮಾರ್‌ ಶುಭ ಹಾರೈಸಿದರು.
ಉಡುಪಿ ಉಜ್ವಲ್‌ ಡೆವಲಪರ್ನ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ. ಶೆಟ್ಟಿ, ಸಂಸ್ಥೆಯ ಮಾಲಕರಾದ ಸುರೇಶ್‌ ನಾಯ್ಕ ಪರ್ಕಳ, ಸುಮನಾ ಸುರೇಶ್‌ ನಾಯ್ಕ, ಹಿತೈಷಿಗಳು, ಗ್ರಾಹಕರು, ಸಿಬಂದಿ ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ಉಮೇಶ್‌, ಗೋಪಾಲಕೃಷ್ಣ ಅವರನ್ನು ಸಂಸ್ಥೆಯ ವತಿಯಿಂದ ಶ್ರೀಪಾದರು ಸಮ್ಮಾನಿಸಿದರು. ಉದ್ಘಾಟನೆ ಪ್ರಯುಕ್ತ ಟಫ‌ನ್‌ ಗ್ಲಾಸ್‌ನ ಗಟ್ಟಿತನ ಪರೀಕ್ಷೆಗೆ ಕ್ರಿಕೆಟ್‌ ಹಾರ್ಡ್‌ ಬಾಲ್‌ ಮೂಲಕ ಗ್ಲಾಸ್‌ಗೆ ಬೌಲಿಂಗ್‌ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು.  ಸಂಸ್ಥೆಯಲ್ಲಿ ತಯಾರಿಸಲ್ಪಡುವ ಹೀಟ್‌ ಸ್ಟ್ರೆಂಥನ್‌ ಗ್ಲಾಸ್‌, ಲ್ಯಾಮಿನೇಟೆಡ್‌ ಗ್ಲಾಸ್‌, ಬೆಂಡ್‌ ಗ್ಲಾಸ್‌, ಸ್ಮಾರ್ಟ್‌ ಗ್ಲಾಸ್‌ಗಳ ಪ್ರದರ್ಶನ ನಡೆಯಿತು.

ಸಂಸ್ಥೆಯ ಬ್ಯುಸಿನೆಟ್‌ ಹೆಡ್‌ ಧನುಷ್‌ ಎಸ್‌.ಪಿ. ಪ್ರಾಸ್ತಾವಿಕ ಮಾತನಾಡಿದರು. ವಾಸುದೇವ ಭಟ್‌ ಪೆರಂಪಳ್ಳಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಪಾಡಿಗಾರು ಲಕ್ಷ್ಮಿನಾರಾಯಣ ಉಪಾಧ್ಯ ಕಾರ್ಯಕ್ರಮ ಸಂಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next