Advertisement

ಬಸವಕಲ್ಯಾಣದಲ್ಲಿ ಮಾದರಿ ಅನುಭವ ಮಂಟಪ ಉದ್ಘಾಟನೆ

05:49 PM Jul 30, 2022 | Team Udayavani |

ಬಸವಕಲ್ಯಾಣ: ನಗರದ ಹೊರವಲಯದಲ್ಲಿರುವ ಡಾ| ಜಯದೇವಿತಾಯಿ ಲಿಗಾಡೆ ಸಮಾಧಿ ಸ್ಥಳದ ಹತ್ತಿರ ಸಿದ್ಧಪಡಿಸಿದ ಮಾದರಿ ಅನುಭವ ಮಂಟಪವನ್ನು ಶುಕ್ರವಾರ ಶಾಸಕ ಶರಣು ಸಲಗರ ವಿವಿಧ ಪೂಜ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು.

Advertisement

ಇದಕ್ಕೂ ಮುನ್ನ ಅನುಭವ ಮಂಟಪದ ಸಂಚಾಲಕ ಶಿವಾನಂದ ದೇವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿವಿಧ ಪೂಜ್ಯರು, ಬಿಡಿಪಿಸಿ ಪದಾ ಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಬಸವಾಭಿಮಾನಿಗಳು ಭಾಗವಹಿಸಿದ್ದರು.

ನಂತರ ಮಾತನಾಡಿದ ಶಾಸಕ ಶರಣು ಸಲಗರ, ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರ 612 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲು ಮುಂದಾಗಿದ್ದು ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಈ ನೂತನ ಅನುಭವ ಮಂಟಪ ಬಸವಾಭಿಮಾನಿಗಳಿಗೆ ಮಾದರಿಯಾಗಲಿದೆ ಎಂದರು.ಮುಂದಿನ ದಿನಗಳಲ್ಲಿ ನಿತ್ಯ ಸಾವಿರಾರು ಜನರು ಕಲ್ಯಾಣ ನೋಡಲು ಆಗಮಿಸುತ್ತಾರೆ.

ಈಗಾಗಲೇ ನಮ್ಮ ಸಂಸತ್ತು ಭವನಕ್ಕೆ ಯಾವ ಮಾದರಿ ಕಲ್ಲುಗಳನ್ನು ಬಳಸಿ ಕಟ್ಟಲಾಗುತ್ತಿದೆಯೋ ಅದೇ ಮಾದರಿ ಕಲ್ಲುಗಳನ್ನು ನೂತನ ಅನುಭವ ಮಂಟಪಕ್ಕೆ ಬಳಸಿದರೆ ಉತ್ತಮ. ಸಂಸತ್ತು ಭವನ ಕಟ್ಟುತ್ತಿರುವವರನ್ನು ಒಂದು ಬಾರಿ ಭೇಟಿಯಾಗಿ ಅವರಿಂದ ಸಲಹೆ ಪಡೆಯುವಂತೆ ಒತ್ತಾಯಿಸಿದರು.

ಅನುಭವ ಮಂಟಪ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಮಾತನಾಡಿ, ನೂತನ ಅನುಭವ ಮಂಟಪ ಯಾವ ರೀತಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಮಾದರಿ ತಯಾರಿಸಲಾಗಿದೆ. ಭಕ್ತರು ಇದನ್ನು ಬೆಳಗ್ಗೆಯಿಂದ ಸಂಜೆವರೆಗೆ ವೀಕ್ಷಿಸಬಹುದಾಗಿದೆ ಎಂದರು. ಹುಲಸೂರನ ಡಾ| ಶಿವಾನಂದ ಸ್ವಾಮೀಜಿ, ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು, ಹರಳಯ್ಯ ಗವಿಯ ಡಾ| ಗಂಗಾಂಬಿಕಾ ಅಕ್ಕ ಮಾತನಾಡಿದರು.

Advertisement

ಹಾರಕೂಡನ ಡಾ| ಚನ್ನವೀರ ಶಿವಾಚಾರ್ಯರು, ಬಸವ ಮಹಾಮನೆಯ ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಬೇಲೂರನ ಉರಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬಸವರಾಜ ಧನ್ನೂರ, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್‌ ಸಾವಿತ್ರಿ ಸಲಗರ, ಬಿಕೆಡಿಬಿ ತಹಶೀಲ್ದಾರ್‌ ಮೋಸಿನ್‌, ಬಿಡಿಎ ಅಧ್ಯಕ್ಷ ರಾಜಕುಮಾರ ಬಿರಾದಾರ ಸಿರಗಾಪೂರ, ಬಿಡಿಪಿಸಿ ಅಧ್ಯಕ್ಷ ಅನೀಲ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿ ಬಸವರಾಜ ಬಾಲಕಿಲೆ, ಕೋಶಾಧ್ಯಕ್ಷ ಸುಭಾಷ ಹೊಳಕುಂದೆ, ನಿರ್ದೇಶಕ ಬಸ್ಸು ಕೋರಕೆ, ಡಾ|ಮಹೇಶ ಪಾಟೀಲ, ಶಿವಕುಮಾರ ಬಿರಾದಾರ, ಅರವಿಂದ ಮುತ್ತೆ, ಸಿದ್ದು ಬಿರಾದಾರ, ಬಾಬಾಸಾಹೇಬ ಗಡ್ಡೆ, ಮಹಾದೇವಪ್ಪ ಇಜಾರೆ ಸೇರಿ ಗಣ್ಯರು, ಬಸವಾಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next