Advertisement

ಕದಂಬ ಸಸ್ಯ ಸಂತೆ ಉದ್ಘಾಟನೆ

07:11 AM Jun 11, 2020 | Suhan S |

ಶಿರಸಿ: ಕೃಷಿಯ ಜೀವ ವೈವಿಧ್ಯತೆ ಹೆಚ್ಚಿಸಬೇಕು. ಕೃಷಿ ಜೀವ ವೈವಿಧ್ಯ ಹೆಚ್ಚಳಕ್ಕೆ ಇಂಥ ಸಸ್ಯ ಸಂತೆ ಪೂರಕ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

Advertisement

ನಗರದ ಕದಂಬ ಮಾರ್ಕೆಟಿಂಗ್‌ ಸೌಹಾರ್ದ ಸಹಕಾರಿ ಸಂಘವು ಅರಣ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಆರಂಭಿಸಿರುವ ಸಸ್ಯ ಸಂತೆ ಉದ್ಘಾಟಿಸಿ ಅವರು ಮಾತನಾಡಿದರು. ಹಣ್ಣಿನ ಗಿಡಗಳು, ಸಾಂಬಾರ ಗಿಡಗಳನ್ನು ಬೆಳೆಸುವುದು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಜೀವ ವೈವಿಧ್ಯತೆ ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು. ಈಗಾಗಲೇ ಸಾವಯವ ಕೃಷಿಗೆ ಸಂಬಂಧಿಸಿ ಸಂಘ ರಚನೆಯಾಗಿದೆ. ಸಾವಯವ ಉತ್ಪನ್ನಗಳ ಮಾರಾಟ ನಡೆಯುತ್ತಿದೆ. ವಿವಿಧ ತಳಿಯ ಗಿಡಗಳನ್ನು ಬೆಳೆಸಿದ ರೈತರಿಗೆ ಆದ್ಯತೆ ಸಿಗಬೇಕು ಎಂಬ ಕಾರಣಕ್ಕೆ ಅವರನ್ನು ಗುರುತಿಸುವ ಕಾರ್ಯ ಇನ್ನಷ್ಟು ಆಗಬೇಕು ಎಂದರು.

ಕದಂಬ ಮಾರ್ಕೆಟಿಂಗ್‌ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಕೋಟೆಮನೆ, ಸಸ್ಯ ಸಂತೆಯಲ್ಲಿ 80ಕ್ಕೂ ಹೆಚ್ಚು ವಿಧದ ಗಿಡಗಳಿವೆ. ಔಷಧ ಸಸ್ಯಗಳು ಲಭ್ಯವಿದೆ. ಮುಂದಿನ ದಿನಗಳಲ್ಲಿ ಹೂವಿನ ಮೇಳ ಸಂಘಟಿಸಲಾಗುತ್ತದೆ. ಕದಂಬ ಮಾರ್ಕೆಟಿಂಗ್‌ ಸಂಸ್ಥೆ 3ಲಕ್ಷ ಹಲಸಿನಕಾಯಿ ಹಪ್ಪಳ, 2ಟನ್‌ ಹಲಸಿನ ಕಾಯಿ ಚಿಪ್ಸ್‌ ಖರೀದಿಸಿದೆ ಎಂದರು. ಡಿಎಫ್‌ಓ ಎಸ್‌.ಜಿ. ಹೆಗಡೆ, ಎಸಿಎಫ್‌ ರಘು, ಡಾ| ಮಂಜು, ಎಂ.ವಿ. ಹೆಗಡೆ ತಟ್ಟಿಕೈ, ಗುರುಪಾದ ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next