Advertisement

ಪ್ರಧಾನ ಕಚೇರಿ “ಸಹಕಾರ ಸಾನಿಧ್ಯ’ ಉದ್ಘಾಟನೆ

11:09 PM Jun 08, 2024 | Team Udayavani |

ತೆಕ್ಕಟ್ಟೆ: ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಬಿದ್ಕಲ್‌ಕಟ್ಟೆಯ ಪ್ರಧಾನ ಕಚೇರಿ “ಸಹಕಾರ ಸಾನಿಧ್ಯ’ ಕಟ್ಟಡವನ್ನು ಶನಿವಾರ ಎಸ್‌ಸಿಡಿಸಿಸಿ ಬ್ಯಾಂಕ್‌ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಉದ್ಘಾಟಿಸಿದರು.

Advertisement

ಸಹಕಾರಿ ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಲ್ಲ ಸಿಬಂದಿ ಇದ್ದು, ಜನರ ಅಗತ್ಯಗಳನ್ನು ಪೂರೈಸುತ್ತಿವೆ. ರೈತರಿಗೆ ಎಲ್ಲ ಸವಲತ್ತುಗಳನ್ನು ನೀಡುವುದಿದ್ದರೆ ಅದು ಸಹಕಾರ ಕ್ಷೇತ್ರ ಮಾತ್ರ. ಸಹಕಾರಿ ಕ್ಷೇತ್ರ ಕಲ್ಪವೃಕ್ಷ ಇದ್ದಂತೆ. ಶತಮಾನದ ಇತಿಹಾಸವಿರುವ ಗ್ರಾಮೀಣ ಭಾಗದ ಈ ಸಂಸ್ಥೆಯ ಪ್ರಧಾನ ಕಚೇರಿಯನ್ನು 1 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಸ್ಥೆಗೆ 10 ಲಕ್ಷ ರೂ. ನೆರವು ನೀಡುವುದಾಗಿ ರಾಜೇಂದ್ರ ಕುಮಾರ್‌ ಘೋಷಿಸಿದರು.

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಮಾತನಾಡಿ, ನಮ್ಮ ಎರಡು ಜಿಲ್ಲೆಯ ಸಹಕಾರಿ ಸಂಘಗಳ ಆರ್ಥಿಕ ವ್ಯವಸ್ಥೆ ಸದೃಢವಾಗಿವೆ. ಇಲ್ಲಿರುವ ಎಲ್ಲ ಸಹಕಾರಿ ಸಂಘಗಳ ಸದಸ್ಯರಿಗೆ ಅವರವರ ಶಕ್ತಿಗನುಸಾರವಾಗಿ 5 ಲಕ್ಷ ರೂ. ನಿಬಡ್ಡಿ ಸಾಲ ದೊರೆಯುವಂತಾಗಬೇಕು ಎಂದರು.

ಸಮ್ಮಾನ
ಡಾ| ರಾಜೇಂದ್ರ ಕುಮಾರ್‌ ಅವರನ್ನು ಕಿರಣ್‌ ಕುಮಾರ್‌ ಕೊಡ್ಗಿ ಸಮ್ಮಾನಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್‌ ಹೆಗ್ಡೆ, ಎಚ್‌. ದೀನಪಾಲ್‌ ಶೆಟ್ಟಿ, ಶಿವರಾಮ ಶೆಟ್ಟಿ ಕವಲ್‌ಕೊಡ್ಲು, ಮಾಜಿ ಸಿಇಒ ಶಂಕರ ನಾರಾಯಣ ಉಳ್ಳೂರ, ವಾಸುದೇವ ಭಟ್‌, ರತ್ನಾಕರ ಶೆಟ್ಟಿ, ಸುಬ್ರಾಯ ಅಡಿಗ, ಗೋವಿಂದ ತಿಂಗಳಾಯ, ಜಯಂತಿ ಸುಂದರ ಶೆಟ್ಟಿ, ಕಲ್ಪನಾ ಎನ್‌. ಭಂಡಾರಿ, ಸ್ಥಳದಾನಿ ಸಂತೋಷ್‌ ಕುಮಾರ್‌ ಶೆಟ್ಟಿ, ಎಂಜಿನಿಯರ್‌ ಪ್ರಶಾಂತ್‌ ಬಿ. ಹಾಗೂ ತಾರಾನಾಥ ಶಿವಾನಂದ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಭದ್ರತಾ ಕೊಠಡಿಯನ್ನು ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮೊಳಹಳ್ಳಿ ಶಿವರಾವ್‌ ಸಭಾಭವನವನ್ನು ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ನವೀಕೃತ ಶಿವರಾವ್‌ ಪ್ರತಿಮೆಯನ್ನು ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಗೋದಾಮನ್ನು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯಾ ಕೆ.ಆರ್‌., ಗಣಕಯಂತ್ರವನ್ನು ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ದಿನೇಶ್‌ ಹೆಗ್ಡೆ ಉದ್ಘಾಟಿಸಿದರು.

Advertisement

ಮೊಳಹಳ್ಳಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ಎಂ. ಮಹೇಶ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ರಾಜು ಪೂಜಾರಿ, ಭಾಸ್ಕರ್‌ ಕೋಟ್ಯಾನ್‌, ಅಶೋಕ್‌ ಕುಮಾರ್‌ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಜಯರಾಜ್‌ ರೈ, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್‌ ಕುಮಾರ್‌ ಎಸ್‌.ವಿ. ಕುಂದಾಪುರ ಪ್ರಾ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ತಾ| ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಎಚ್‌. ಹರಿಪ್ರಸಾದ್‌ ಶೆಟ್ಟಿ, ಮೊಳಹಳ್ಳಿ ವ್ಯ.ಸೇ.ಸ. ಸಂಘದ ಉಪಾಧ್ಯಕ್ಷ ಜಗನ್ನಾಥ ಶೆಟ್ಟಿ ಚಿಟ್ಟೆಬೈಲು, ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ. ಚಂದ್ರಶೇಖರ ಶೆಟ್ಟಿ ಹಾಗೂ ಹೊಂಬಾಡಿ – ಮಂಡಾಡಿ ಗ್ರಾ.ಪಂ. ಅಧ್ಯಕ್ಷ ಜಯಂತಿ ಶೆಟ್ಟಿ ಹಾಗೂ ಹಾರ್ದಳ್ಳಿ – ಮಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ದೀಪಾ ಆರ್‌. ಶೆಟ್ಟಿ ಹಾಗೂ ಸಿಇಒ ಪಾರ್ವತಿ ಎಂ., ನಿರ್ದೇಶಕ ಮಂಡಳಿ ಸದಸ್ಯರು, ವಲಯ ಮೇಲ್ವಿಚಾರಕ ಸಂದೀಪ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಅನುಷಾ ಸಮ್ಮಾನ ಪತ್ರ ವಾಚಿಸಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿ, ನಿರ್ದೇಶಕ ಎಚ್‌. ದೀನಪಾಲ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next