Advertisement
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯಿಂದ ಸುಮಾರು 4 ಕಿ.ಮೀ ದೂರದ ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲದ ಸಮೀಪ ನೈಸರ್ಗಿಕ ಹಸುರು ಕಾನನದ ನಡುವೆ ಈ ಕಲ್ಲು ನಿಂತಿದೆ.
ಇಲ್ಲಿನ ಸುತ್ತಮುತ್ತ ಶಿರಿಯಾರದ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನ, ಪಡುಮುಂಡು ಶ್ರೀ ಮಹಾಗಣಪತಿ ದೇವಸ್ಥಾನ, ಕಂಬಿಕಲ್ಲು (ಕಕ್ಕುಂಜೆ) ಶ್ರೀ ಮಹಾಗಣಪತಿ ದೇಗುಲ, ಬಿದ್ಕಲ್‌ಕಟ್ಟೆ
ಕೊಳನಕಲ್ಲು ಶ್ರೀ ವಿನಾಯಕ ದೇಗುಲಗಳು ಪ್ರಾಕೃತಿಕ ಸೊಬಗಿನ ನಡುವೆ ನಿಂತಿವೆ.
Related Articles
ಪುರಾಣ ಪ್ರಸಿದ್ಧ ಕಂಬಿಕಲ್ಲು (ಕಕ್ಕುಂಜೆ) ಶ್ರೀ ಮಹಾ ಗಣಪತಿ ದೇಗುಲಕ್ಕೂ ಈ ಶಿಲೆಗೆ ಅವಿನಾಭಾವ ಸಂಬಂಧಗಳಿವೆ. ದೇಗುಲಕ್ಕೆ ಆಗಮಿಸುವ ಭಕ್ತರು ಪ್ರಕೃತಿಯಲ್ಲಿ ಬೆರೆತಿರುವ ವಿಸ್ಮಯಕಾರಿ ಈ ಶಿಲೆಗೆ ನಮಿಸುತ್ತಾರೆ. ಹಿಂದೆ ಈ ಬೃಹದಾಕಾರದ ಬಂಡೆಯ ಮೇಲೆ 2 ವೃತ್ತಾಕಾರದ ಶಿಲೆಗಳಿದ್ದವು. ಯಾರೋ ಒಬ್ಬರು ಹಣದ ಆಸೆಗಾಗಿ ಒಂದು ಶಿಲೆಯನ್ನು ಒಡೆದು ಗಣಿಗಾರಿಕೆಗೆ ಮುಂದಾಗಿದ್ದರು. ಆಗ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ. ಹೀಗಾಗಿ ಗಣಿಗಾರಿಕೆ ನಿಲ್ಲಿಸಲಾಯಿತು ಎನ್ನಲಾಗುತ್ತಿದೆ.
Advertisement
ಗಣಿಗಾರಿಕೆ ನಿಂತಿದೆ…ಶತಮಾನಗಳ ಹಿಂದೆ ಬೃಹದಾಕಾರದ ಬಂಡೆಯ ಮೇಲೆ ದೇವರ ಕಣ್ಣಿನ ಗುಡ್ಡೆಯಂತಿದ್ದ ಎರಡು ಬಂಡೆಗಳಿದ್ದವು. ಇವುಗಳಲ್ಲಿ ಒಂದನ್ನು ಒಡೆಯಲು ಯತ್ನಿಸಿದಾಗ ಸಮಸ್ಯೆಗಳು ಕಾಣಿಸಿದವಂತೆ. ಹೀಗಾಗಿ ಆ ದಿನಗಳಿಂದ ಈ ದೇಗುಲದ ಸುತ್ತಮುತ್ತಲಿನ ಪರಿಸರದಲ್ಲಿ ಶಿಲೆಕಲ್ಲು ಗಣಿಗಾರಿಕೆ ಸಂಪೂರ್ಣ ನಿಂತಿದೆ. ಜಾರುವ ಸ್ಥಿತಿಯಲ್ಲಿರುವ ಈ ಶಿಲೆ ಯಾವುದೇ ಕಾಲದ ಹೊಡೆತಕ್ಕೆ ಜಗ್ಗದೇ ಸ್ಥಿರವಾಗಿ ನಿಂತಿರುವುದು ವಿಶೇಷ.
-ವೇ|ಮೂ| ಶ್ರೀಪತಿ ಭಟ್ ಕಕ್ಕುಂಜೆ, ಪ್ರಧಾನ ಅರ್ಚಕರು, ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲ -ಲೋಕೇಶ್ ಆಚಾರ್ಯ ತೆಕ್ಕಟ್ಟೆ