Advertisement

ಪ್ರಧಾನಿ ನರೇಂದ್ರ ಮೋದಿಯಿಂದ FM ಟ್ರಾನ್ಸ್‌ಮೀಟರ್ಸ್‌ ಉದ್ಘಾಟನೆ

12:27 AM Apr 28, 2023 | Team Udayavani |

ಹೊಸದಿಲ್ಲಿ: ಗಡಿಭಾಗದ ಪ್ರದೇಶಗಳು ಹಾಗೂ ಪ್ರಮುಖ ಜಿಲ್ಲೆಗಳಿಗೆ ರೇಡಿಯೊ ಸಂಪರ್ಕ ಕಲ್ಪಿಸುವ ಮಹತ್ತರ ಕ್ರಮದ ಭಾಗವಾಗಿ 18 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿರುವ 91 ಎಫ್ಎಂ ಟ್ರಾನ್ಸ್‌ಮೀಟರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ. ಬಿಹಾರ, ಝಾರ್ಖಂಡ್‌, ಒಡಿಶಾ, ಪ.ಬಂಗಾಲ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಕೇರಳ , ತೆಲಂಗಾಣ, ಛತ್ತೀಸ್‌ಗಢ, ಗುಜರಾತ್‌, ಮಧ್ಯ ಪ್ರದೇಶ, ಮಹಾರಾಷ್ಟ್ರ, ಲಡಾಖ್‌, ಅಂಡಮಾನ್‌-ನಿಕೋಬಾರ್‌ ದ್ವೀಪಗಳಲ್ಲಿನ 84 ಜಿಲ್ಲೆಗಳಲ್ಲಿ ಈಗಾಗಲೇ 91 ಹೊಸ 100 ವ್ಯಾಟ್‌ ಟ್ರಾನ್ಸ್‌ಮಿಟರ್‌ಗಳನ್ನು ಸ್ಥಾಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next