Advertisement

‘ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ’ಉದ್ಘಾಟನೆ

11:32 AM Nov 05, 2017 | Team Udayavani |

ಎಕ್ಕೂರು: ದೇಶದಲ್ಲಿ ಸುಮಾರು 3 ಲಕ್ಷ ಕೃಷಿ ಪರಿಕರ ಮಾರಾಟಗಾರರಿದ್ದಾರೆ. ಕೃಷಿ ಸಂಬಂಧಿಸಿ ಕೃಷಿ ಪರಿಕರ ಮಾರಾಟಗಾರರು ಸಮಗ್ರ ಜ್ಞಾನ ಹೊಂದಿದ್ದರೆ ಕೃಷಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಬೆಂಗಳೂರು ವಿವಿ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾದ ನೋಡಲ್‌ ಅಧಿಕಾರಿ ಡಾ| ಜಿ. ಆರ್‌. ಪೆನ್ನೋಬಳಿ ಸ್ವಾಮಿ ಹೇಳಿದರು.

Advertisement

ಮಂಗಳೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ರಸಗೊಬ್ಬರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ
ಉದ್ಘಾಟನೆ ಮಾಡಿ ಅವರು ಶನಿವಾರ ಮಾತನಾಡಿದರು.

ಕೃಷಿ ಪರಿಕರ ಮಾರಾಟಗಾರರು ಕೃಷಿ ಬಗ್ಗೆ ತಿಳಿದುಕೊಂಡರೆ ರೈತರಿಗೆ ಪೂರಕ. ರೈತರು ತಮ್ಮ ಕೃಷಿಗೆ ಬೇಕಾದ ಉತ್ತಮ
ಗುಣಮಟ್ಟದ ಕೀಟನಾಶಕ, ರಸಗೊಬ್ಬರ ಪಡೆಯಲು ಇದರಿಂದ ಸಾಧ್ಯವಾಗುತ್ತದೆ ಎಂದವರು ಹೇಳಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್‌. ಆರ್‌. ನಾಯಕ್‌ ಮಾತನಾಡಿ, ಜಿಲ್ಲೆಯಲ್ಲಿ 1.17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಇದೆ. 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆ, 21 ಸಾವಿರ ಹೆಕ್ಟೇರ್‌ ತೆಂಗು ಹಾಗೂ 32 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಬೆಳೆ ಬೆಳೆಯಲಾಗುತ್ತಿದೆ ಎಂದರು.

ಮೀನುಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ| ಎಂ. ಎನ್‌. ವೇಣುಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ
ಜಂಟಿ ನಿರ್ದೇಶಕ ಕೆಂಪೇಗೌಡ ಎಚ್‌. ಮುಖ್ಯ ಅತಿಥಿಯಾಗಿದ್ದರು. ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ| ಶಿವಕುಮಾರ್‌ ಮಗದ ಸ್ವಾಗತಿಸಿದರು.

Advertisement

ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್‌, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣ ಸಂಸ್ಥೆ ಹೈದರಾಬಾದ್‌ ಮತ್ತು ಸಮೇತಿ, ದಕ್ಷಿಣ ಕನ್ನಡ ಕೃಷಿ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಡಿಪ್ಲೋಮಾ ಕೋರ್ಸ್‌ ಹಮ್ಮಿಕೊಳ್ಳಲಾಗಿದೆ.

ಡಿಪ್ಲೊಮಾ ಕೋರ್ಸ್‌ ಅಗತ್ಯ
ದೇಶದಲ್ಲಿ ಶೇ. 18ರಷ್ಟು ರೈತರು ಕೃಷಿ ಪರಿಕರ ಮಾರಾಟಗಾರರಿಂದಲೇ ಬೀಜ, ಗೊಬ್ಬರದ ಮಾಹಿತಿ ಪಡೆಯುತ್ತಾರೆ. ಶೇ. 12ರಷ್ಟು ರೈತರು ಮಾಧ್ಯಮದ ಮೂಲಕ ತಿಳಿದುಕೊಳ್ಳುತ್ತಾರೆ. ಸರಕಾರಿ ಇಲಾಖೆಗಳಿಂದ ಮಾಹಿತಿ ಪಡೆಯುವ ರೈತರ ಸಂಖ್ಯೆ ಕೇವಲ ಶೇ. 4ರಷ್ಟು. ಈ ನಿಟ್ಟಿನಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೊಮಾ ಕೋರ್ಸ್‌ ಅಗತ್ಯವಾಗಿ ಬೇಕಾಗುತ್ತದೆ ಎಂದು ಡಾ| ಜಿ. ಆರ್‌. ಪೆನ್ನೋಬಳಿ ಸ್ವಾಮಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next