Advertisement

ನಗರದಲ್ಲಿ ಡಿಜಿಟಲ್‌ ತೆರಿಗೆ ಸಂಗ್ರಹ ಕೇಂದ್ರ ಉದ್ಘಾಟನೆ 

04:47 AM Mar 22, 2019 | |

ಮಹಾನಗರ: ಮಹಾನಗರ ಪಾಲಿಕೆ ಮತ್ತು ಐಸಿಐಸಿಐ ಬ್ಯಾಂಕ್‌ ಸಹಯೋಗದಲ್ಲಿ ಡಿಜಿಟಲ್‌ ತೆರಿಗೆ ಸಂಗ್ರಹ ಕೇಂದ್ರ ನಗರದಲ್ಲಿ ಉದ್ಘಾಟನೆಗೊಂಡಿದೆ. ಈ ವಿನೂತನ ವ್ಯವಸ್ಥೆ ಮೂಲಕ ನಗರದ ನಾಗರಿಕರು ಪಾಲಿಕೆ ತೆರಿಗೆಗಳನ್ನು ಪಾವತಿಸಬಹುದು. ಹೊಸ ಡಿಜಿಟಲ್‌ ತೆರಿಗೆ ಸಂಗ್ರಹ ಕೇಂದ್ರವನ್ನು ವೆಲೆನ್ಸಿಯಾದಲ್ಲಿರುವ ಮನಪಾ ವಾರ್ಡ್‌ ಕಚೇರಿಯಲ್ಲಿರುವ ಬ್ಯಾಂಕ್‌ನ ವಿಸ್ತರಣೆ ಕೌಂಟರ್‌ನಲ್ಲಿ ಆರಂಭಿಸಲಾಗಿದೆ. ಈ ನೂತನ ವ್ಯವಸ್ಥೆ ಮೂಲಕ ನಗರದ ತೆರಿಗೆ ಪಾವತಿದಾರರು 20ಕ್ಕೂ ಹೆಚ್ಚು ವಿಧದ ತೆರಿಗೆಗಳನ್ನು ಈ ಕೇಂದ್ರದಲ್ಲಿ ನಗದು ಮತ್ತು ಡಿಮ್ಯಾಂಡ್‌ ಡ್ರಾಫ್‌ ಮೂಲಕ ಮಾತ್ರವಲ್ಲದೇ ಡಿಜಿಟಲ್‌ ವಿಧಾನದ ಮೂಲಕ ಅಂದರೆ, ಡೆಬಿಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕವೂ ಪಾವತಿಸಬಹುದಾಗಿದೆ. ಈ ತೆರಿಗೆಗಳನ್ನು ಆಸ್ತಿ ತೆರಿಗೆ, ನೀರಿನ ಶುಲ್ಕ, ವಹಿವಾಟು ಲೈಸನ್ಸ್‌ ಶುಲ್ಕ ಮತ್ತಿತರ ತೆರಿಗೆಗಳನ್ನು ಪಾವತಿಸಬಹುದಾಗಿದೆ.

Advertisement

ಈ ವಿನೂತನ ಯೋಜನೆ ಮೂಲಕ, ಸಾಂಪ್ರದಾಯಿಕ ಪಾವತಿ ವಿಧಾನಗಳಾದ ನಗದು, ಚೆಕ್‌ ಮತ್ತು ಡಿಮ್ಯಾಂಡ್‌ ಡ್ರಾಫ್ಟ್‌ ಜತೆಗೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಡಿಜಿಟಲ್‌ ವಿಧಾನದಲ್ಲಿ ಪಾವತಿಸುವ ವ್ಯವಸ್ಥೆಯನ್ನು ರಾಜ್ಯದಲ್ಲಿ ಆರಂಭಿಸಿದ ಮೊಟ್ಟಮೊದಲ ಬ್ಯಾಂಕ್‌ ಎನಿಸಿಕೊಂಡಿದೆ.

ತೆರಿಗೆ ಸಂಗ್ರಹ ಪರಿಹಾರ ವ್ಯವಸ್ಥೆಯನ್ನು ಬ್ಯಾಂಕ್‌ ವಿಶೇಷವಾಗಿ ಇಲ್ಲಿಗೆ ಸಿದ್ಧಪಡಿಸಿದ್ದು, ಇದರಡಿ ಕೈಯಲ್ಲಿ ಹಿಡಿದುಕೊಳ್ಳಬಹುದಾದ, ಎಂಸಿಸಿ ಸರ್ವರ್‌ ಒಳಗೊಂಡ ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌)ಯಂತ್ರದೊಂದಿಗೆ ಸಮನ್ವಯಗೊಳಿಸಲಾಗಿದೆ. ಇದು ಸ್ವಯಂಚಾಲಿತವಾಗಿ ನಿರ್ದಿಷ್ಟ ಖಾತೆಗೆ ತೆರಳಿ, ತತ್‌ಕ್ಷಣವೇ ಹಣ ಸ್ವೀಕರಿಸುವ ಜತೆಗೆ ಪಾವತಿ ದತ್ತಾಂಶವನ್ನು ಪರಿಷ್ಕರಿಸುತ್ತದೆ. ಇದು ತೆರಿಗೆ ಪಾವತಿದಾರರ ಅನುಕೂಲ ಹೆಚ್ಚಿಸಲು ನೆರವಾಗಲಿದ್ದು, ಇ-ಚಾನಲ್‌ ಗಳನ್ನು ಸೃಷ್ಟಿಸಲು ಮತ್ತು ಎಂಸಿಸಿಗೆ ನೇರವಾತಿ ತೆರಿಗೆಗಳನ್ನು ಪಾವತಿಸಲು ವನ್‌ ಸ್ಟಾಪ್‌ ಪರಿಹಾರವಾಗಲಿದೆ ಎಂದು ಅವರು ಹೇಳಿದರು.

ಪಾಲಿಕೆಯ ಮಹಮ್ಮದ್‌ ನಝೀರ್‌ ಮಾತನಾಡಿ, ಇಂತಹ ವಿನೂತನ ಉಪಕ್ರಮವನ್ನು ಖಾಸಗಿ ವಲಯದ ಬ್ಯಾಂಕ್‌ ಕೈಗೆತ್ತಿಕೊಂಡಿರುವುದು ಉತ್ತಮ ವಿಚಾರ. ಎಲ್ಲ ಗ್ರಾಹಕರಿಗೆ ನೆರವಾಗುವ ಮೂಲಕ ಅವರ ಸಂತೃಪ್ತಿ ಹೆಚ್ಚಿಸಲು ಕಾರಣವಾಗಲಿದೆ ಎಂದರು.

ಮಹಾನಗರ ಪಾಲಿಕೆ ಜತೆ ಸಹಯೋಗ
ಬ್ಯಾಂಕಿನ ದಕ್ಷಿಣ ವಲಯ ವಿಭಾಗದ ಚಿಲ್ಲರೆ ವಹಿವಾಟು ವಿಭಾಗದ ಮುಖ್ಯಸ್ಥ ವಿರಾಲ್‌ ರುಪಾನಿ ಮಾತನಾಡಿ, ನಾಗರಿಕರಿಗೆ ನಮ್ಮ ಡಿಜಿಟಲ್‌ ಬ್ಯಾಂಕಿಂಗ್‌ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಜತೆ ಸಹಯೋಗ ಹೊಂದಲು ನಮಗೆ ಅತೀವ ಸಂತಸವಾಗುತ್ತಿದೆ. ಈ ಸೇವೆಯು ನಗರದ ಹತ್ತು ಲಕ್ಷ ತೆರಿಗೆ ಪಾವತಿದಾರರಿಗೆ ನೆರವಾಗಲಿದ್ದು, ಅವರು ಸುಲಭವಾಗಿ 20 ಬಗೆಯ ಪಾಲಿಕೆ ತೆರಿಗೆಗಳನ್ನು ತಮ್ಮ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಬಹುದಾಗಿದೆ ಎಂದರು.

Advertisement

ಪಾವತಿಸಬಹುದಾದ ತೆರಿಗೆಗಳ ಪಟ್ಟಿ
1. ಆಸ್ತಿ ತೆರಿಗೆ, 2. ನೀರಿನ ಶುಲ್ಕ, 3. ಉದ್ಯಮ ತೆರಿಗೆ, 4. ಸಕ್ರಮಗೊಳಿಸುವಿಕೆ/ದಂಡ/ ದಂಡಶುಲ್ಕಗಳು, 5. ಜಾಹಿರಾತು ತೆರಿಗೆ, 6. ಕಟ್ಟಡ ನಿರ್ಮಾಣ ಶುಲ್ಕ, 7. ಪ್ರಮಾಣಪತ್ರಗಳು ಮತ್ತು ಎಕ್ಸ್‌ಟ್ರಾಕ್ಟ್ ಗಳ ಶುಲ್ಕ, 8. ಖಾತಾ ಪ್ರತಿ ಶುಲ್ಕ, 9. ಖಾತಾ ವರ್ಗಾವಣೆ ಶುಲ್ಕ, 10. ಅಭಿವೃದ್ಧಿ ವೆಚ್ಚ ಮತ್ತು ಬೆಟರ್‌ವೆುಂಟ್‌ ಫೀ, 11. ಮಾರುಕಟ್ಟೆ ಶುಲ್ಕ, 12. ರಸ್ತೆ ಕತ್ತರಿಸುವಿಕೆ ಮತ್ತು ಪುನರ್‌ ನವೀಕರಣ ಶುಲ್ಕ, 13. ವ್ಯಾಪಾರ ಲೈಸನ್ಸ್‌, 14. ಬಾಡಿಗೆ ಸ್ವೀಕೃತಿ, 15. ಪಾರ್ಕಿಂಗ್‌ ಶುಲ್ಕ, 16. ಘನ ತ್ಯಾಜ್ಯ ನಿರ್ವಹಣೆ ಶುಲ್ಕ, 17. ನೋಂದಣಿ ಶುಲ್ಕ, 18. ಟೆಂಡರ್‌ ನಮೂನೆ ಮಾರಾಟ, 19. ಮಳಿಗೆಗಳ ಮತ್ತು ಗುಜರಿ ಮಾರಾಟ, 20. ನಗರ ಸ್ಥಳೀಯ ಸಂಸ್ಥೆಗಳ ವಸೂಲಾತಿ.

Advertisement

Udayavani is now on Telegram. Click here to join our channel and stay updated with the latest news.

Next