ಕಾಠ್ಮಂಡು: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಶೇರ್ ಬಹದೂರ್ ದೇವುಬಾ ಅವರು ಜಂಟಿಯಾಗಿ ಶನಿವಾರ (ಏಪ್ರಿಲ್ 02) ಭಾರತ -ನೇಪಾಳ ನಡುವಿನ ರೈಲು ಸಂಚಾರ ಮಾರ್ಗ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಇದನ್ನೂ ಓದಿ:ಅಂದು ನನ್ನ ಕ್ರಿಕೆಟ್ ಜೀವನದ ಅತ್ಯಮೂಲ್ಯ 35 ರನ್ ಗಳಿಸಿದ್ದೆ: ಕೊಹ್ಲಿ ವಿಶ್ವಕಪ್ ಮೆಲುಕು
ನೇಪಾಳ ಪ್ರಧಾನಿ ದೇವುಬಾ ನೇತೃತ್ವದ ಉನ್ನತ ಮಟ್ಟದ ನಿಯೋಗ ಶುಕ್ರವಾರ (ಏಪ್ರಿಲ್ 01) ಮೂರು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಿತ್ತು. ಭಾರತದ ಗಡಿಯಲ್ಲಿರುವ ಜಯನಗರ ಮತ್ತು ನೇಪಾಳದ ಬಿಜಾಲ್ ಪುರ್ ನಡುವೆ 1937ರಲ್ಲೇ ರೈಲು ಸಂಚಾರ ಆರಂಭವಾಗಿತ್ತು. ಆದರೆ 2001ರಲ್ಲಿ ಭಾರೀ ಭೂ ಕುಸಿತ ಸಂಭವಿಸಿದ ನಂತರ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ 21 ವರ್ಷಗಳ ಬಳಿಕ ಉಭಯ ದೇಶಗಳ ನಡುವೆ ರೈಲು ಸಂಚಾರ ಆರಂಭಗೊಂಡಂತಾಗಿದೆ.
ಪ್ರಧಾನಿ ದೇವುಬಾ ಅವರು ಭಾರತದ ಹಳೆಯ ಮಿತ್ರ. ಪ್ರಧಾನಿಯಾಗಿ ಅವರು ಭಾರತಕ್ಕೆ 5ನೇ ಬಾರಿ ಭೇಟಿ ನೀಡಿದಂತಾಗಿದೆ. ಭಾರತ-ನೇಪಾಳ ನಡುವಿನ ಸಂಬಂಧದ ಅಭಿವೃದ್ಧಿಯಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಭಾರತ, ನೇಪಾಳದ ನಡುವಿನ ಗೆಳೆತನ, ನಮ್ಮ ಜನರ ನಡುವಿನ ಗೆಳೆತನ ಜಗತ್ತಿನ ಬೇರೆ ಯಾವುದೇ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಉಭಯ ದೇಶಗಳ ನಾಗರಿಕತೆ, ಸಂಸ್ಕೃತಿ ಪುರಾತನ ಕಾಲದ ಜೊತೆ ಸಂಬಂಧ ಹೊಂದಿದೆ. ಉಭಯ ದೇಶಗಳು ಖುಷಿ, ದುಃಖಗಳಲ್ಲಿ ಸಮಾನ ಭಾಗಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪ್ರಮುಖ ಹೈಲೆಟ್ಸ್:
*ಪ್ರಧಾನಿ ಮೋದಿ ಮತ್ತು ನೇಪಾಳ ಪ್ರಧಾನಿ ದೇವುಬಾ ಬಿಹಾರ ಸಮೀಪದ ಜಯನಗರ ಹಾಗೂ ನೇಪಾಳ ಗಡಿ ಸಮೀಪದ ಕುರ್ತಾ ನಡುವಿನ 35 ಕಿಲೋ ಮೀಟರ್ ರೈಲು ಸಂಚಾರ ಮಾರ್ಗವನ್ನು ಉದ್ಘಾಟಿಸಿದರು.
*ನೇಪಾಳದ ಸೋಲು ವಿದ್ಯುತ್ ಪ್ರಸರಣ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ದೇವುಬಾ ಉದ್ಘಾಟಿಸಿದರು.
*ಪ್ರಧಾನಿ ಮೋದಿ ಹಾಗೂ ದೇವುಬಾ ನೇಪಾಳದಲ್ಲಿ ರುಪೇ ಪೇಮೆಂಟ್ ವ್ಯವಸ್ಥೆಗೆ ಚಾಲನೆ ನೀಡಿದರು.
* ರೈಲ್ವೆ, ಇಂಧನ ಸೇರಿದಂತೆ ಪ್ರಮುಖ ನಾಲ್ಕು ಕ್ಷೇತ್ರಗಳಲ್ಲಿನ ಒಪ್ಪಂದವನ್ನು ಭಾರತ ಮತ್ತು ನೇಪಾಳ ಅಂತಿಮಗೊಳಿಸಿದವು.