ಕೆಜಿಎಫ್: ಚಿನ್ನದ ಗಣಿ ಮುಚ್ಚಿದ ಮೇಲೆಪಾಳುಬಿದ್ದಿದ್ದ ಬಿಜಿಎಂಎಲ್ ಆಸ್ಪತ್ರೆಯನ್ನುಆರ್‌ಎಸ್‌ಎಸ್ ಮತ್ತು ಇತರ ಸ್ವಯಂಸೇವಕರು ಸ್ವತ್ಛಗೊಳಿಸಿದ್ದಾರೆ. ಈಗ 250ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆ ಆಗಿರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿಹೇಳಿದರು.
ಬಿಜಿಎಂಎಲ್ ಆಸ್ಪತ್ರೆಯ ಆವರಣದಲ್ಲಿ ಬಿಜಿಎಂಎಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟಪಟ್ಟು ಆಸ್ಪತ್ರೆಗೆ ಹೊಸ ರೂಪಕೊಟ್ಟ ಎಲ್ಲಾ ಸ್ವಯಂಸೇವಕರು ಅಭಿನಂದನೆಗೆಅರ್ಹರು. ಬುಧವಾರದಿಂದ ಕೋವಿಡ್ ಆಸ್ಪತ್ರೆ ಕಾರ್ಯರೂಪಕ್ಕೆಬರಲಿದೆ. ಕೋವಿಡ್ ರೋಗಿಗಳ ಹೊರೆತು ಇನ್ನಾರಿಗೂ ವಾರ್ಡ್‌ನೊಳಗೆ ಪ್ರವೇಶವಿಲ್ಲ ಎಂದು ಹೇಳಿದರು.
ಸರ್ಕಾರದಿಂದ ಇಬ್ಬರು ವೈದ್ಯರು ಮತ್ತುದಾದಿಯರು ಸೇವೆಗೆ ಬರುತ್ತಾರೆ. ಯಾರೇಸ್ವಯಂಪ್ರೇರಿತರಾಗಿ ಕೋವಿಡ್ ಸೋಂಕಿತರ ಸೇವೆ ಮಾಡಲು ಬಂದರೆಸ್ವಾಗತಿಸಲಾಗುವುದು. ಅವರಿಗೆಸರ್ಕಾರದಿಂದ ಗೌರವಧನ ಕೂಡಕೊಡುತ್ತೇವೆ. ಸಂಸದ ಎಸ್. ಮುನಿಸ್ವಾಮಿಮತ್ತು ತಂಡ ಆಸ್ಪತ್ರೆಯನ್ನು ಪುನರಾರಂಭ ಮಾಡಲು ಸಹಕಾರ ಮಾಡಿದ್ದಾರೆ. ಜನರನ್ನು ಆರೋಗ್ಯವಂತರಾಗಿ ಮಾಡಿಕಳಿಸಬೇಕಾಗಿದ್ದ ಆಸ್ಪತ್ರೆಗೆ ರಿಪೇರಿಮಾಡಿ ಲೋಕಾರ್ಪಣೆ ಮಾಡಿಸಿದ್ದಾರೆಎಂದು ತಿಳಿಸಿದರು.
ಮಂಗಳವಾರ ಪ್ರಧಾನಿ ವಿಡಿಯೋಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.ಅವರ ಸೂಚನೆಯಂತೆ ಕೋವಿಡ್ ಆಸ್ಪತ್ರೆಕೊರತೆಯನ್ನು ಕಡಿಮೆಮಾಡಲು ವಾಕ್‌ಇನ್ ಇಂಟರ್ ವ್ಯೂ ಮಾಡುತ್ತೇವೆ. ಎಷ್ಟುಜನ ಬರುತ್ತಾರೋ ಗೊತ್ತಿಲ್ಲ. ಕೆಲಸಕ್ಕೆಬಂದವರಿಗೆ ಕೂಡಲೇ ಅಪ್ರೂವ್ ಕೊಡುತ್ತೇವೆ ಎಂದು ಲಿಂಬಾವಳಿ ಹೇಳಿದರು.
ನಗರದಲ್ಲಿ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾಡಿದಟೀಕೆಯನ್ನು ಪ್ರಸ್ತಾಪಿಸಿದ ಅವರು,ರಾಜಕಾರಣಕ್ಕೆ ಬೇರೆ ಜಾಗ ಇದೆ. ಅಲ್ಲಿ ಆಟಆಡೋಣ ಎಂದು ಹೇಳಿದರು.
ಇಂದು ವರ್ಚುವಲ್: ಸಂಸದಎಸ್.ಮುನಿಸ್ವಾಮಿ ಮಾತನಾಡಿ,ಬುಧವಾರದಂದು ವರ್ಚುವಲ್ ಮೀಟ್‌ಮೂಲಕ ಕೇಂದ್ರ ಗಣಿ ಸಚಿವ ಪ್ರಹ್ಲಾದಜೋಷಿ, ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಬಿಜಿಎಂಎಲ್ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದುಹೇಳಿದರು.ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಪಂಮುಖ್ಯ ಕಾರ್ಯನಿರ್ವಹಣಾಧಿಕಾರಿನಾಗರಾಜ್, ತಹಶೀಲ್ದಾರ್ ಕೆ.ಎನ್.ಸುಜಾತಾ, ತಾಲೂಕು ವೈದ್ಯಾಧಿಕಾರಿಡಾ.ಸುನಿಲ್, ಬಿಜೆಪಿ ನಗರ ಅಧ್ಯಕ್ಷಕಮಲನಾಥನ್, ಗ್ರಾಮೀಣ ಅಧ್ಯಕ್ಷಜಯಪ್ರಕಾಶ್ ನಾಯ್ಡು, ಗಾಂಧಿ,ಪಾಂಡ್ಯನ್ ಮೊದಲಾದವರು ಇದ್ದರು.