Advertisement
ಪಟ್ಟಣದ ಕೊರಳ್ಳಿ ರಸ್ತೆಯಲ್ಲಿ ನಿರ್ಮಾಗೊಂಡ ಸಾಲು ಮರದ ತಿಮ್ಮಕ್ಕನ ವೃಕ್ಷೊàದಾನ್ಯವನ್ನು ಶುಕ್ರವಾರ ಲೋಕಾರ್ಪಣೆ ಕೈಗೊಂಡು ಅವರು ಮಾತನಾಡಿದರು.
Related Articles
Advertisement
ಕಲಬುರಗಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ| ಎಸ್.ವೆಂಕಟೇಶನ್ (ಐಎಫ್‌ಎಸ್) ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾಗಿದೆ. ಹೆಚ್ಚು ಗಿಡ, ಮರಗಳನ್ನು ಬೆಳೆಸಿದರೆ ಪರಿಸರದಲ್ಲಿ ಶುದ್ಧ ಗಾಳಿ, ಮಳೆ ಬರಲು ಅನುಕೂಲವಾಗುತ್ತದೆ ಎಂದರು.
ಕಲಬುರಗಿ ವೃತ್ತ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನ ವರ ಪ್ರಸ್ತಾವಿಕವಾಗಿ ಮಾತನಾಡಿದರು. ಡಿವೈಎಸ್‌ಪಿ ರವಿಂದ್ರ ಶಿರೂರ, ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ, ಅಮರ್ಜಾ ಎಇಇ ಗೌತಮ ಕಾಂಬಳೆ, ರೈತರಾದ ನಾಗರಾಜ ಶೇಗಜಿ, ಶರಣು ಪಾಟೀಲ ದೇವಂತಗಿ, ಸಾಮಾಜಿಕ ವಲಯ ಕಲಬುರಗಿ ಉಪ ಅರಣ್ಯಾಧಿಕಾರಿ ಎಂ.ಎಲ್. ಭಾವಿಕಟ್ಟಿ, ಚಂದ್ರಶೇಖರ ಹೆಮ್ಮಾ ಹಾಗೂ ನೆರೆಯ ಕಿತ್ತೂರುರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ, ಅರಣ್ಯ ಇಲಾಖೆಯ ಸಂಜು ಚವ್ಹಾಣ, ರಾಘವೇಂದ್ರ ಗಾಯಕವಾಡ, ವಿಜಯಕುಮಾರ, ಸಂತೋಷ, ಕಾಶಿನಾಥ ಕಲಶೆಟ್ಟಿ, ತುಕ್ಕಪ್ಪ ಹಾಗೂ ಮತ್ತಿತರರು ಇದ್ದರು.
ಇದೇ ವೇಳೆ ಅರಣ್ಯ ಕೃಷಿ ಕೈಗೊಂಡ ರೈತರಿಗೆ ತಲಾ 25ಸಾವಿರ ರೂ. ಪ್ರೋತ್ಸಾಹಧನದ ಚೆಕ್‌ನ್ನು ಶಾಸಕರು ವಿತರಿಸಿದರು. ಕಲಬುರಗಿ ಪ್ರಾದೇಶಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಸಂತೋಷ ಕುಮಾರ ನಿರೂಪಿಸಿದರು. ಆರ್‌ಎಫ್‌ಒ ಜಗನಾಥ ಕೋರಳ್ಳಿ ವಂದಿಸಿದರು. ಕಲಾವಿದ ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ ಸಂಗೀತ ನಡೆಸಿಕೊಟ್ಟರು. ಪಿಟಿಲು ವಾದಕ ಭದ್ರಿನಾಥ ಮುಡಬಿ ಸಂಗೀತ ತಂಡದಿಂದ ವಿದ್ಯಾರ್ಥಿಗಳು ಪ್ರಾರ್ಥನೆ ಮತ್ತು ನಾಡಗೀತೆ ಸಾದರಪಡಿಸಿದರು.