Advertisement

ಪರಿತ್ಯಕ್ತ ಮಕ್ಕಳ ರಕ್ಷಣೆಗೆ “ಮಮತೆಯ ತೊಟ್ಟಿಲು’ಉದ್ಘಾಟನೆ

07:00 AM Mar 23, 2018 | Team Udayavani |

ಉಡುಪಿ: ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಉಡುಪಿ ರೋಟರಿ ಪ್ರಾಯೋಜಕತ್ವದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಕಾರದೊಂದಿಗೆ ಉಡುಪಿಯ ಕೆ.ಎಂ. ಮಾರ್ಗದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ನೀಡಲಾಗಿರುವ ಮಮತೆಯ ತೊಟ್ಟಿಲನ್ನು ಮಾ. 22ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದ್ಘಾಟಿಸಿದರು.

Advertisement

ಅನಿವಾರ್ಯತೆ ಇನ್ನಿತರ ಕಾರಣಗಳಿಂದಾಗಿ ತಾಯಿಯು ಮಗುವನ್ನು ಬಿಟ್ಟು ಬಿಡುತ್ತಾಳೆ. ಆದರೆ ಮಾತೃ ವಾತ್ಸಲ್ಯ ಮರೆಯಾಗುವುದಿಲ್ಲ. ಮಗು ಕಸದ ತೊಟ್ಟಿ ಸೇರುವ ಬದಲು ಮಮತೆಯ ತೊಟ್ಟಿಲಿನಲ್ಲಿ ಸೇರಿದರೆ ಅದರ ಭವಿಷ್ಯವೂ ಎಲ್ಲರಂತಾಗಬಹುದು. ಮಗುವಿಗೆ ಇಂದು ಅತೀ ಹೆಚ್ಚು ಬೇಡಿಕೆ ಇದೆ ಎಂದು ಸಚಿವರು ಹೇಳಿದರು.

ಶಿಶುಗಳ ರಕ್ಷಣೆಗೆ ಮಮತೆಯ ತೊಟ್ಟಿಲು ಎನ್ನುವ ಕರಪತ್ರವನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಬಿಡುಗಡೆ ಮಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌, ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಚಯರ್‌ಮನ್‌ ಬಿ.ಕೆ. ನಾರಾಯಣ್‌, ಡಾ| ಬಿ.ಆರ್‌. ಶೆಟ್ಟಿ ಸರಕಾರಿ ಆಸ್ಪತ್ರೆಯ ಡಾ| ಜಗದೀಶ್‌ ಶರ್ಮಾ, ಡಾ| ಚಂದ್ರಶೇಖರ್‌ ಅಡಿಗ, ಶೇಖರ್‌ ಅಡಿಗ, ಡಾ| ವಿಜಯಾ ವೈ.ಬಿ. ಉಪಸ್ಥಿತರಿದ್ದರು.ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ಸುಬ್ರಹ್ಮಣ್ಯ ಕಾರಂತ್‌ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next