Advertisement
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬಿಳಿಗಿರಿರಂಗನಾಥಸಾವ್ವಿು ದೇಗುಲದ ನೆಲಹಾಸು ಹಾಗೂ ಮೆಟ್ಟಿಲುಗಳ ನಿರ್ಮಾಣ ಹಾಗೂ ಹೊಸ ರಥ ನಿರ್ಮಾಣದ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
Related Articles
Advertisement
ಜಿಲ್ಲೆಯ ರೇಷ್ಮೆ ಪುನಶ್ಚೇತನಕ್ಕೂ 7 ಕೋಟಿ ರೂ. ನೆರವು ನೀಡಿದೆ. ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೂ ಇಲಾಖೆಯ ವತಿಯಿಂದ ಹಣ ನೀಡಲಾಗುವುದು. ಇದಕ್ಕೂ ಮುನ್ನ ಸುತ್ತ ಖಾಸಗಿ ವ್ಯಕ್ತಿಗಳು ಅಕ್ರಮ ಒತ್ತುವರಿ ಮಾಡಿಕೊಂಡಿರುವ ಸ್ಥಳವನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಬಿಳಿಗಿರಿರಂಗನಬೆಟ್ಟ ಅಭಿವೃದ್ಧಿಯಾದರೆ ಇಡೀ ಗ್ರಾಮವೇ ಅಭಿವೃದ್ಧಿ ಆಗುತ್ತದೆ. ಇಲ್ಲಿರುವ ಆಸ್ತಿ ದೇಗುಲದ ಹೆಸರಿನಲ್ಲಿದೆ. ದೇವಸ್ಥಾನದ ಅಭಿವೃದ್ಧಿ ಕೆಲಸಗಳಲ್ಲಿ ಸ್ಥಳೀಯರು ಸಹಕರಿಸಬೇಕು ಎಂದು ಕೋರಿದರು. ಶಾಸಕ ಎನ್. ಮಹೇಶ್ ಮಾತನಾಡಿ, ಬಿಳಿಗಿರಿರಂಗನಬೆಟ್ಟದ ದೇಗುಲದ ಜೀರ್ಣೋದ್ಧಾರ ಕಾಮಗಾರಿ ತ್ವರಿತಗತಿಯಲ್ಲಿ ಆಗಬೇಕು. ಇದಕ್ಕೆ ಇನ್ನೂ 5 ಕೋಟಿ ರೂ. ಬೇಕಿದೆ. ಆದಷ್ಟು ಬೇಗ ಈ ಹಣವನ್ನು ಬಿಡುಗಡೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಸಚಿವರು, ಸಂಸದರು, ಶಾಸಕರಿಗೆ ಸನ್ಮಾನಿಸಲಾಯಿತು. ಮಾಜಿ ಶಾಸಕ ಎಸ್. ಬಾಲರಾಜು, ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ. ಯೋಗೇಶ್, ತಾಪಂ ಅಧ್ಯಕ್ಷ ನಿರಂಜನ್, ಗ್ರಾಪಂ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಎಸಿ ನಿಖೀತಾಚಿನ್ನಸ್ವಾಮಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಿ. ರಾಜಶೇಖರ್, ಸದಸ್ಯರಾದ ಪದ್ಮಾ, ಕಂದಹಳ್ಳಿ ಮಹೇಶ್, ಕೆಸ್ತೂರು ಪಿ. ಮರಿಸ್ವಾಮಿ, ಶಿವಮ್ಮ, ಎನ್. ರಾಜು, ದೇಗುಲದ ವೆಂಕಟೇಶ್ ಪ್ರಸಾದ್, ರವಿ, ನಾಗರಾಜಭಟ್, ಬಸವರಾಜು ಬಡೀಗೇರ್, ಶಿವಕುಮಾರ್, ಯಚ್ಚರೇಶ್ ಇತರರಿದ್ದರು.
ಜಿಲ್ಲೆ ಪುಣ್ಯಕ್ಷೇತ್ರಗಳ ನೆಲೆವೀಡು: ಚಾಮರಾಜನಗರ ಜಿಲ್ಲೆ ಪ್ರವಾಸಿ ತಾಣಗಳ ಅಗರವಾಗಿದೆ. ಜಿಲ್ಲೆ ಶೇ. 50 ಕ್ಕಿಂತಲೂ ಹೆಚ್ಚು ಕಾಡಿನಿಂದ ಆವೃತ್ತವಾಗಿದೆ. ನದಿಗಳು, ಜಲಪಾತ, ಪುರಾಣ, ಐತಿಹಾಸಿಕ ಪುಣ್ಯ ಕ್ಷೇತ್ರಗಳ ನೆಲೆವೀಡಾಗಿದೆ. ಇದರ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಬೇಕು.
ಅಲ್ಲದೇ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ, ಬಳೇಮಂಟಪ, ಗೌರೇಶ್ವರ ದೇಗುಲಗಳ ಸಮುತ್ಛಯ ಇಡೀ ಜಿಲ್ಲೆಯಲ್ಲಿ ವಿಶಿಷ್ಟವಾಗಿದ್ದು, ಇದರ ಅಭಿವೃದ್ಧಿಗೂ ಇಲಾಖೆ ವತಿಯಿಂದ ಕ್ರಮ ವಹಿಸಬೇಕು ಸಂಸದ ಆರ್. ಧ್ರುವನಾರಾಯಣ ಮನವಿ ಮಾಡಿದರು.