Advertisement

Parkನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ; ಕೇಂದ್ರ ವಿ.ವಿ.ಯ ವಿವಾದಿತ ಅಧ್ಯಾಪಕನ ಸೆರೆ

09:09 PM May 14, 2024 | Team Udayavani |

ಕಾಸರಗೋಡು: ಪೆರಿಯದ ಕೇರಳ ಕೇಂದ್ರ ವಿ.ವಿ.ಯ ಅಧ್ಯಾಪಕ ಡಾ| ಇಫ್ತಿಕರ್‌ ಅಹಮ್ಮದ್‌ (30)ನನ್ನು ಪಾರ್ಕ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆಯ ಹಿನ್ನೆಲೆಯಲ್ಲಿ ತಳಿಪರಂಬ ಪೊಲೀಸರು ಬಂಧಿಸಿದ್ದು, ಕಣ್ಣೂರು ಸೆಂಟ್ರಲ್‌ ಜೈಲಿನಲ್ಲಿ ರಿಮಾಂಡ್‌ನ‌ಲ್ಲಿರಿಸಲಾಗಿದೆ.

Advertisement

ಪಳೆಯಂಗಾಡಿ ಎರಿಪುರಂ ನಿವಾಸಿ ಡಾ| ಇಫ್ತಿಕರ್‌ ಅಹಮ್ಮದ್‌ ಪರಶ್ಶಿನ ಕಡವಿನ ವಾಟರ್‌ ಥೀಂ ಪಾರ್ಕ್‌ನ “ವೇವ್‌ಪೂಲ್‌’ನಲ್ಲಿ ಸ್ನಾನ ಮಾಡುತ್ತಿದ್ದ 22ರ ಹರೆಯದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಅಲ್ಲದೆ ಆಕೆಯನ್ನು ಬಿಗಿದಪ್ಪಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವತಿ ಬೊಬ್ಬೆ ಹಾಕಿದಾಗ ಪಾರ್ಕ್‌ನ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದರು. ತಳಿಪರಂಬ ಪೊಲೀಸರು ಆತನನ್ನು ಬಂಧಿಸಿದರು.

2016ರಲ್ಲಿ ಪೆರಿಯಾದಲ್ಲಿರುವ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ ವಿಭಾಗಕ್ಕೆ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ ಉದ್ಯೋಗಕ್ಕೆ ಸೇರಿದ್ದ. ಈ ಮೊದಲು ಅಮಾನತಿಗೊಳಗಾಗಿದ್ದು, ಹಲವು ವಿವಾದಗಳಲ್ಲಿ ಸಿಲುಕಿದ್ದ. ತರಗತಿಯಲ್ಲಿ ಕುಸಿದು ಬಿದ್ದ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಅಮಾನತು ಮಾಡಲಾಗಿತ್ತು. ಆ ಬಳಿಕ ಶೀಘ್ರದಲ್ಲೇ ಅಮಾನತು ರದ್ದುಗೊಳಿಸಲಾಗಿತ್ತು. ಇದರಿಂದ ಆತ ಸೇವೆಗೆ ಮರಳಿದ್ದ. ಇದರಿಂದ ವಿದ್ಯಾರ್ಥಿನಿಯರು ಚಳವಳಿಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಅಮಾನತು ಮುಂದುವರಿಸಲಾಗಿತ್ತು. ಅನಂತರ ಇತ್ತೀಚೆಗಷ್ಟೇ ಮರಳಿ ಸೇವೆಗೆ ಸೇರ್ಪಡೆಗೊಂಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next