Advertisement
ಇನ್ನಂಜೆ – ಶಂಕರಪುರ ರಸ್ತೆಯಲ್ಲಿ ಇನ್ನಂಜೆ ಸಿಎ ಬ್ಯಾಂಕ್ ಪ್ರಧಾನ ಕಚೇರಿ ಬಳಿಯ ಅಶ್ವಥಕಟ್ಟೆ ಪಕ್ಕದಲ್ಲಿರುವ ಖಾಸಗಿಯವರಿಗೆ ಸೇರಿದ ಗದ್ದೆಯ ಬದಿಯಲ್ಲಿರುವ ಬಾವಿಯ ದಂಡೆಯ ಒಂದು ಪಾರ್ಶ್ವ ಸಂಪೂರ್ಣ ಕುಸಿದಿದ್ದು, ದಂಡೆಯೊಂದಿಗೆ ಕಾಂಕ್ರೀಟ್ ರಸ್ತೆಯ ಬದಿಯೂ ಬಾವಿಯೊಳಗೆ ಕುಸಿದು ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ.
Related Articles
ಇನ್ನಂಜೆ – ಶಂಕರಪುರ ರಸ್ತೆಯ ಅಶ್ವತ್ಥಕಟ್ಟೆಯ ಬಳಿಯಲ್ಲಿ ರಸ್ತೆಯ ಒಂದು ಪಾರ್ಶ್ವ ಕುಸಿದಿರುವ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಇರಿಸಿ, ಸೂಚನೆ ನೀಡಲಾಗಿದೆ. ಬಾವಿ ಖಾಸಗಿಯವರಿಗೆ ಸೇರಿದ್ದು, ದಂಡೆ ಕುಸಿತದ ಬಗ್ಗೆ ಜಾಗದ ವಾರಸುದಾರರೊಂದಿಗೂ ಮಾತುಕತೆ ನಡೆಸಲಾಗಿದೆ. ಮರಳು ಗೋಣಿ ಚೀಲಗಳನ್ನು ಇಟ್ಟು ತಾತ್ಕಾಲಿಕ ತಡೆಗೋಡೆ ರಚಿಸಲು ಗ್ರಾ.ಪಂ. ಕ್ರಮ ಕೈಗೊಂಡಿದ್ದು, ಮಳೆಗಾಲ ಮುಗಿದ ಬಳಿಕ ಪಿಲ್ಲರ್ ಹಾಕಿ ಶಾಶ್ವತ ತಡೆಗೋಡೆ ರಚಿಸಲಾಗುವುದು.
-ಸುರೇಶ್ ಶೆಟ್ಟಿ, ಉಪಾಧ್ಯಕ್ಷರು, ಇನ್ನಂಜೆ ಗ್ರಾ.ಪಂ.,
Advertisement
ಪರಿಶೀಲನೆಜಿ.ಪಂ. ರಸ್ತೆ ಇದಾಗಿದ್ದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿದ್ದಾರೆ. ಪಂಚಾಯತ್ ನೇತೃತ್ವದಲ್ಲೂ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರೊಂದಿಗೆ ಪರಿಶೀಲನೆ ನಡೆಸಲಾಗಿದೆ. ಗ್ರಾ.ಪಂ.ನ ವರ್ಗ 1ರ ಅನುದಾನ ಬಳಸಿಕೊಂಡು ತಾತ್ಕಾಲಿಕ ತಡೆಗೋಡೆ ರಚಿಸಲಾಗುವುದು. ಮಳೆ ಕಡಿಮೆಯಾದ ಬಳಿಕ ಪಿಲ್ಲರ್ ಅಳವಡಿಸಿ, ಶಾಶ್ವತ ತಡೆಗೋಡೆ ಸಹಿತ ಕಾಮಗಾರಿ ನಡೆಸಲಾಗುವುದು.
-ಮಂಜುನಾಥ ಆಚಾರ್ಯ, ಪಿಡಿಒ, ಇನ್ನಂಜೆ ಗ್ರಾ.ಪಂ.