Advertisement

ಯುವಕರಲ್ಲಿದೆ ಅಸಾಧ್ಯವನ್ನೂ ಸಾಧ್ಯವಾಗಿಸುವ ಶಕ್ತಿ 

05:39 PM Aug 10, 2018 | |

ಹಾವೇರಿ: ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಅಸಾಧ್ಯವನ್ನೂ ಸಾಧ್ಯವಾಗಿಸುವ ಶಕ್ತಿ ಯುವಕರಿಗಿದೆ ಎಂದು ಧಾರವಾಡ ಸಿಡೋಕ್‌ನ ನಿರ್ದೇಶಕ ಮಾಲತೇಶ ಜೀವಣ್ಣವರ ಅಭಿಪ್ರಾಯಿಸಿದರು.

Advertisement

ನಗರದ ಜಿ.ಎಚ್‌. ಕಾಲೇಜಿನಲ್ಲಿ ನಡೆದ 2018-19ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಎಂತಹ ಪರಿಸ್ಥಿತಿಯಲ್ಲಿಯೂ ಸಮಾಜದ ಪರಿವರ್ತನೆಗೆ ಮುಂಚೂಣಿ ಕಾರ್ಯ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕಾಸಕ್ತಿಯನ್ನು ಮೂಡಿಸಿಕೊಂಡು ಉತ್ತಮ ಹಾದಿಯಲ್ಲಿ ನಡೆಯಬೇಕು ಎಂದರು.

ಸಾಧನೆ ಸುಲಭದ ಮಾತಲ್ಲ. ಪರಿಶ್ರಮ, ಪಕ್ವತೆ, ಪ್ರಬುದ್ಧತೆ, ಪ್ರಾಮಾಣಿಕತೆ ಇದ್ದರೆ ಸಾಧನೆ ಹಾದಿ ಸುಲಭ. ಒಮ್ಮೆ ಸಾಧಿಸಿದರೆ ಎಲ್ಲವೂ ಸಾಧಕನದಾಗುತ್ತದೆ. ವ್ಯಕ್ತಿ ಜೀವನದಲ್ಲಿ ನಿಸ್ವಾರ್ಥ ಮನೋಭಾವ, ಪರೋಪಕಾರ ಮತ್ತು ವಿಶಾಲ ಮನಸ್ಥಿತಿಯನ್ನು ಕಾಯ್ದುಕೊಂಡು ಬದುಕಬೇಕು ಎಂದರು.

ಪ್ರಸ್ತುತ ಕೈಗಾರಿಕೆಗಳ ಕುರಿತಾದ ಜಾಗೃತಿ ಮತ್ತು ಅರಿವು ಮೂಡಿಸುವ ಅಗತ್ಯವಿದೆ. ಕಾರಣ ಉದ್ಯಮಾಶೀಲರಾಗುವವರು ಸೂಕ್ತತೆಯ ನಿರ್ಧಾರ ಮತ್ತು ಅಭಿವೃದ್ಧಿಯ ಕಾರ್ಯೋನ್ನತಿಯನ್ನು ಬಯಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ಡಿ. ಶಿರೂರ ವಹಿಸಿದ್ದರು. ವೇದಿಕೆಯಲ್ಲಿ ಸದಸ್ಯರಾದ ಸಿ.ಬಿ. ಹಿರೇಮಠ, ಎಸ್‌.ಜೆ. ಹೆರೂರ,  ಸವರಾಜ ಮಾಸೂರ ಇದ್ದರು.

ಕಾರ್ಯಕ್ರಮದಲ್ಲಿ ಪಿಎಚ್‌ಡಿ, ನೆಟ್‌ -ಕೆಸೆಟ್‌ ಹಾಗೂ ರ್‍ಯಾಂಕ್‌ ಪಡೆದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಪ್ರೊ| ಎಸ್‌.ಬಿ. ನಾಡಗೌಡ ಸ್ವಾಗತಿಸಿದರು. ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರೊ| ಜಿ.ಎಂ. ಎಣ್ಣಿ ಪರಿಚಯಿಸಿದರು. ಪಪೂ ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ| ದೀಪಕ ಕೊಲ್ಲಾಪುರೆ ನಿರೂಪಿಸಿದರು. ಪ್ರಾಚಾರ್ಯ ಪ್ರೊ| ಜೆ.ಆರ್‌. ಸಿಂಧೆ ವಂದಿಸಿದರು. ಸಮಾರಂಭದಲ್ಲಿ ಪಾಲಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next