Advertisement

ರಾಹುಲ್‌ರನ್ನು ಯಾವ ಸ್ಥಾನದಲ್ಲಿ ಆಡಿಸುವುದು?

08:54 PM Jan 17, 2020 | Team Udayavani |

ಭಾರತ ಕ್ರಿಕೆಟ್‌ ತಂಡ ಒಂದು ಸಿಹಿಯಾದ ಒತ್ತಡ ಅನುಭವಿಸುತ್ತಿದೆ. ಎಷ್ಟೇ ಸಿಹಿಯಾದರೂ ಒತ್ತಡ ಒತ್ತಡವೇ. ಕೆಲವೊಮ್ಮೆ ಅತಿಪ್ರೀತಿಯೂ ಬಾಧಕವಾಗಬಹುದು. ಸದ್ಯ ಅಂತಹ ಪರಿಸ್ಥಿತಿಯಿದೆ. ಕೆಲವು ವರ್ಷಗಳ ಹಿಂದೆ ಭಾರತ ತಂಡ ಪ್ರವೇಶಿಸಿದ ಕೆ.ಎಲ್‌.ರಾಹುಲ್‌ ಆರಂಭದಲ್ಲಿ, ಅಮೋಘವಾಗಿ ಆಡಿ ಮಿಂಚಿದರು. ಅವರು ಮೂರೂ ಮಾದರಿಯ ತಂಡದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರೆನಿಸಿಕೊಂಡರು.

Advertisement

ಕಳೆದ ಒಂದು ವರ್ಷದಿಂದ ಕುಗ್ಗಲಾರಂಭಿಸಿದ ಅವರು, ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಏಕದಿನ, ಟಿ20ಯಲ್ಲಿ ಸ್ಥಾನವುಳಿಸಿಕೊಂಡಿದ್ದರೂ, ಸ್ಥಾನ ಪಡೆಯಲೇ ಒಂದೆರಡು ತಿಂಗಳ ಹಿಂದೆ ಪರದಾಡಿದ್ದರು. ಅವರ ಅದೃಷ್ಟ ಖುಲಾಯಿಸಿದ್ದು ವೆಸ್ಟ್‌ ಇಂಡೀಸ್‌, ಬಾಂಗ್ಲಾ ವಿರುದ್ಧ ಮಿಂಚಿದ ನಂತರ. ಈಗ ಮತ್ತೆ ಭಾರತ ತಂಡದಲ್ಲಿ ಅವರ ಸ್ಥಾನ ಭದ್ರವಾಗಿದೆ. ಇಕ್ಕಟ್ಟು ಸೃಷ್ಟಿಯಾಗಿರುವುದು ಇಲ್ಲೇ. ಅವರು ಆರಂಭಿಕ ಬ್ಯಾಟ್ಸ್‌ಮನ್‌.

ಸೀಮಿತ ಓವರ್‌ಗಳ ತಂಡದಲ್ಲಿ ಆರಂಭಿಕರಾಗಿ ಶಿಖರ್‌ ಧವನ್‌, ರೋಹಿತ್‌ ಶರ್ಮ ಈಗಾಗಲೇ ಅಂಟು ಹಾಕಿಕೊಂಡಿದ್ದಾರೆ. ಈಗ ರಾಹುಲ್‌ರನ್ನು ಏನು ಮಾಡುವುದು? ಮಧ್ಯಮಕ್ರಮಾಂಕದಲ್ಲೂ ಯಾವುದೇ ಸ್ಥಾನ ಖಾಲಿಯಿಲ್ಲ. ನಾಯಕ ಕೊಹ್ಲಿ ದೊಡ್ಡ ಮನಸ್ಸು ಮಾಡಿ ಬಿಟ್ಟುಕೊಟ್ಟರೆ, 3ನೇ ಕ್ರಮಾಂಕ ರಾಹುಲ್‌ಗೆ ಸಿಗುತ್ತದೆ. ತಾನಿದಕ್ಕೆ ಸಿದ್ಧ ಎಂದೂ ಕೊಹ್ಲಿ ಹೇಳಿದ್ದಾರೆ.

ಆದರೆ…ಕೊಹ್ಲಿಯಂತಹ ವಿಶ್ವವಿಖ್ಯಾತ ಬ್ಯಾಟ್ಸ್‌ಮನ್‌ ಬಹಳ ಕೆಳಕ್ರಮಾಂಕದಲ್ಲಿ ಬರುವುದು ಅಷ್ಟು ಸೂಕ್ತವಾಗುವುದಿಲ್ಲ. ಅಭಿಮಾನಿಗಳು, ತಂಡದ ವ್ಯವಸ್ಥಾಪಕರಿಗೆ ಅದು ಬೇಕಿಲ್ಲ. ಈಗ ಯಾರನ್ನು ತೆಗೆಯುವುದು, ಯಾರನ್ನು ಸೇರಿಸಿಕೊಳ್ಳುವುದು? ಇದೇ ವೇಳೆ ಧವನ್‌ರನ್ನು ಕೈಬಿಡಿ, ಆ ಜಾಗಕ್ಕೆ ರಾಹುಲ್‌ರನ್ನು ಹಾಕಿಕೊಳ್ಳಿ ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಪರಿಣಾಮ ಧವನ್‌ ಒತ್ತಡಕ್ಕೊಳಗಾಗಿದ್ದಾರೆ. ಅವರಿನ್ನು ಪ್ರತೀ ಪಂದ್ಯದಲ್ಲೂ ಆಡಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next