Advertisement
ಯಾವುದೇ ಬಗೆಯ ತರಕಾರಿಯಾದರೂ ಈ ಗ್ರಾಮದಲ್ಲಿ ಲಭ್ಯ. ಇಲ್ಲಿನ ಹೆಚ್ಚಿನ ಕುಟುಂಬಗಳು ತರಕಾರಿಯನ್ನೇ ಜೀವನಾಧಾರವಾಗಿ ಅವಲಂಬಿಸಿವೆ. ಕೆಲವರು ಉಪ ಉತ್ಪನ್ನವಾಗಿ, ಇನ್ನು ಕೆಲವರು ತರಕಾರಿಯನ್ನೇ ಕಸುಬಾಗಿ ಮಾಡಿಕೊಂಡವರಿದ್ದಾರೆ. ಜಾಗ ಕಡಿಮೆ ಇದ್ದವರೂ ಬೇರೆಲ್ಲಿಯೋ ಜಾಗವನ್ನು ಗೇಣಿಗೆ ಪಡೆದುಕೊಂಡು ತರಕಾರಿ ಬೆಳೆಸಿದವರಿದ್ದಾರೆ.
ವರ್ಷಕ್ಕೆ ಎರಡು ಬಾರಿ ಇಳುವರಿ ತೆಗೆಯಲಾಗುತ್ತದೆ. ಮೇ- ಜೂನ್‌ನಲ್ಲಿ ಬೀಜ ಹಾಕಿದರೆ ಸೆಪ್ಟಂಬರ್‌ನಲ್ಲಿ ಕೊಯ್ಲು ನಡೆಯುತ್ತದೆ. ನವೆಂಬರ್- ಡಿಸೆಂಬರ್‌ನಲ್ಲಿ ಮತ್ತೂಮ್ಮೆ ಬೀಜ ಬಿತ್ತಿದರೆ, ಮಾರ್ಚ್- ಎಪ್ರಿಲ್ ವೇಳೆಗೆ ಮತ್ತೂಂದು ಹಂತದ ಫಸಲು ಸಿದ್ಧ. ವರ್ಷದ ಒಂಬತ್ತು ತಿಂಗಳು ಇಲ್ಲಿನ ಕೃಷಿಕರು ತರಕಾರಿ ಮಾರಾಟದಲ್ಲಿ ತೊಡಗಿಕೊಂಡಿರುತ್ತಾರೆ. ಮೇ, ಜೂನ್, ಜುಲೈ ತಿಂಗಳಲ್ಲಿ ತರಕಾರಿ ಮಾರಾಟ ಕಡಿಮೆ. ಸದ್ಯ ಮೊದಲ ಹಂತದ ಕೊಯ್ಲಿಗೆ ಸಿದ್ಧತೆ ನಡೆಯುತ್ತಿದೆ. ತರಕಾರಿ ಪ್ರಮಾಣ ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಇಳುವರಿ ಕುಸಿಯುತ್ತಿರುವುದರ ಬಗ್ಗೆ ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸುತ್ತಾರೆ.
Related Articles
ಎರಡು ವರ್ಷಗಳ ಹಿಂದೆ ದಿನಕ್ಕೆ ಎರಡು ಪಿಕಪ್‌ಗಿಂತ ಹೆಚ್ಚು ತರಕಾರಿ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು. ಈಗ ತರಕಾರಿ ಕಡಿಮೆಯಾಗುತ್ತಾ ಬಂದಿದ್ದು, ಒಂದು ಪಿಕಪ್ ಮಾತ್ರ ಮಂಗಳೂರಿಗೆ ಹೋಗುತ್ತಿದೆ. ಇದರಲ್ಲಿ ಸುಮಾರು 22 ಕ್ವಿಂಟಾಲ್ ತರಕಾರಿ ಹಿಡಿಯುತ್ತದೆ. ಆದ್ದರಿಂದ ಸ್ವಂತ ದುಡಿಮೆ ಯೊಂದೇ ಜೀವನಕ್ಕೆ ದಾರಿ ಎಂಬುದನ್ನು ಕಂಡುಕೊಂಡಿದ್ದಾರೆ.
Advertisement
ಘಟ್ಟದ ತರಕಾರಿ ಪೈಪೋಟಿಊರ ಬೆಳೆ ಎಂಬ ಕಾರಣಕ್ಕೆ ದೊಡ್ಡ ಲಾಭವೇನೂ ಕೃಷಿಕರ ಕೈಗೆ ಇನ್ನೂ ಎಟುಕಿಲ್ಲ. ಘಟ್ಟ ಪ್ರದೇಶದಿಂದ ಬರುವ ತರಕಾರಿ ಮುಂದೆ ಸಿಕ್ಕಿದ ದರಕ್ಕೆ ಊರ ತರಕಾರಿಯನ್ನು ಮಾರಾಟ ಮಾಡಬೇಕು. ಇನ್ನೂ ಕೆಲವು ಸಲ ಹೋಲ್ ಸೇಲ್ ದರಕ್ಕೆ ಮಾರಾಟ ಮಾಡಿದ್ದು ಇದೆ. ಜನರು ದರವನ್ನು ಮಾತ್ರ ನೋಡುತ್ತಾರೆ. ಗುಣಮಟ್ಟ ಕೇಳುವವರಿಲ್ಲ ಎನ್ನುತ್ತಾರೆ ಕೃಷಿಕರು. ಹವಾಮಾನ ವೈಪರೀತ್ಯಕ್ಕೆ ಈ ವರ್ಷ ಫಸಲು ಕಡಿಮೆ ಇದೆ. ಧಾರಣೆ ಎಷ್ಟರಲ್ಲಿ ನಿಲ್ಲುತ್ತದೆ ಎಂಬ ಬಗ್ಗೆಯೂ ಆತಂಕವೂ ಇದೆ. ನೆಚ್ಚಿ ಕೊಂಡಿದ್ದೇನೆ
ಸುಮಾರು 5 ಎಕರೆ ಜಾಗದಲ್ಲಿ ತರಕಾರಿ ಬೆಳೆಯುತ್ತಿದ್ದೇನೆ. ಹಲವು ಬಗೆಯ ತರಕಾರಿಗಳಿವೆ. ನೀರಿಗಾಗಿ ಬಳಿಯಲ್ಲೇ ಹರಿಯುವ ಕುಮಾರಧಾರಾ ನದಿಯಿದೆ. ವರ್ಷಪೂರ್ತಿ ಶ್ರಮ ಪಟ್ಟು ದುಡಿದರೆ, ಜೀವನ ನಿರ್ವಹಣೆಗೆ ಸಮಸ್ಯೆಯಿಲ್ಲ. ಇದರ ಜತೆಗೆ ಅಡಿಕೆಯೂ ಇರುವುದರಿಂದ, ಅಲ್ಪಾವಧಿ ಬೆಳೆಯಾಗಿ ತರಕಾರಿಯನ್ನು ನೆಚ್ಚಿಕೊಂಡಿದ್ದೇನೆ. ಅಡಿಕೆ ವರ್ಷಕ್ಕೆ ಒಂದು ಬಾರಿ ಮಾತ್ರ ಆದಾಯ ನೀಡುತ್ತದೆ. ಆದರೆ ತರಕಾರಿ ದಿನನಿತ್ಯದ ಖರ್ಚಿಗೂ ಹಣ ಒದಗಿಸುತ್ತದೆ.
ಗಂಗಾಧರ ಜತ್ತೋಡಿ, ಕೃಷಿಕ ಚಾರ್ವಾಕ ಗಣೇಶ್ ಎನ್. ಕಲ್ಲರ್ಪೆ