Advertisement

ಪಶ್ಚಿಮ ಘಟ್ಟಗಳಲ್ಲಿ 12 ಹೊಸ ಪ್ರಭೇದದ ಹಲ್ಲಿಗಳು ಪತ್ತೆ

04:44 PM Oct 04, 2021 | Team Udayavani |

ಪಶ್ಚಿಮ ಘಟ್ಟಗಳಲ್ಲಿ ಅನಾದಿ ಕಾಲದಿಂದ ಜೀವಿಸುತ್ತಿರುವ ಸುಮಾರು 12 ಜಾತಿಯ ಹಲ್ಲಿಗಳನ್ನು ಬೆಂಗಳೂರು ಹಾಗೂ ಮುಂಬಯಿಯ ಜೀವ ವಿಜ್ಞಾನ ತಜ್ಞರ ತಂಡವೊಂದು ಪತ್ತೆ ಹಚ್ಚಿದೆ. ಸಾಮಾನ್ಯ ಹಲ್ಲಿಗಳಿಂದ ಹೆಚ್ಚು ಬಲಿಷ್ಠವಾದ, ಮಿಂಚಿನ ವೇಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಬಲ್ಲಂಥ ಹಲ್ಲಿಗಳು ಇವಾಗಿದ್ದು, ಪಶ್ಚಿಮ ಘಟ್ಟಗಳಲ್ಲಿ ಇನ್ನೂ 18 ಹಲ್ಲಿಗಳು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

ಬೆಂಗಳೂರಿನ ಎರಡು ಸಂಸ್ಥೆ ಭಾಗಿ
ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನ (ಐಐಎಸ್ಸಿ) ಅಧೀನದಲ್ಲಿರುವ ಸೆಂಟರ್‌ ಫಾರ್‌ ಎಕಾಲಜಿಕಲ್‌ ಸೈನ್ಸಸ್‌ (ಸಿಇಎಸ್‌), ನ್ಯಾಶನಲ್‌ ಸೆಂಟರ್‌ ಫಾರ್‌ ಬಯೋಲಾಜಿಕಲ್‌ ಸೈನ್ಸಸ್‌ (ಎನ್‌ಸಿಬಿಎಸ್‌) ಹಾಗೂ ಮುಂಬಯಿಯ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್‌) ಸಂಸ್ಥೆಯ ತಜ್ಞರ ತಂಡ 2009ರಿಂದ 2014ರವರೆಗೆ ನಡೆಸಲಾಗಿದ್ದ ಸಂಶೋಧನೆ ವೇಳೆ ಈ ಪ್ರಭೇದ ಗಳನ್ನು ಪತ್ತೆ ಹಚ್ಚಿದ್ದಾಗಿ ತಿಳಿಸಿದೆ.

6 ಕೋಟಿ ವರ್ಷಗಳ ಇತಿಹಾಸ
ಇವು ಆಫ್ರಿಕಾ, ಭಾರತ-ಶ್ರೀಲಂಕಾ ಹಾಗೂ ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಂಡುಬರುವಂಥ ಪ್ರಾಣಿಗಳು. ಭಾರತದಲ್ಲಿ ಸುಮಾರು 6 ಕೋಟಿ ವರ್ಷಗಳಿಂದ ಜೀವಿಸುತ್ತಿರುವ ಇವು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳು, ಈಶಾನ್ಯ ವಲಯ ಹಾಗೂ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹ ಗಳಲ್ಲಿ ಕಂಡುಬರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ:ಕಳೆದ ಐದು ವರ್ಷಗಳಲ್ಲಿ 813 ಹೊಸ ರೈಲು

ಹೊಸ ಪ್ರಭೇದಗಳ ವಿಶೇಷ
ಇದು ರಾತ್ರಿ ವೇಳೆ ಹೆಚ್ಚು ಚಟುವಟಿಕೆಯಿಂದಿರುವ ಪ್ರಾಣಿ. ಪಾದಗಳಲ್ಲಿ ಅಂಟಿನ ಅಂಶವಿದ್ದು ಅದರ ಸಹಾಯದಿಂದ ಅತೀ ಎತ್ತರದ ಪರ್ವತಗಳನ್ನೂ ಏರಬಲ್ಲದು. ಕ್ಷಣಾರ್ಧದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಚಲಿಸಬಲ್ಲ ಇದು, ಒಂದು ಕಡೆ ಕುಳಿತಿರದೆ ಚುರುಕಾಗಿ ಓಡಾಡುತ್ತಿರುವಂಥದ್ದು. ಇಡೀ ಮೈ ಮೇಲೆ ಬಣ್ಣ ಬಣ್ಣದ ಚಿತ್ತಾರಗಳಿರುತ್ತವೆ.

Advertisement

ಹೊಸ ಪ್ರಭೇದಕ್ಕೆ ಜಾಕಿಚಾನ್‌ ಹೆಸರು!
ಜಗದ್ವಿಖ್ಯಾತ ನಟರಾದ ಜಾಕಿಚಾನ್‌, ತಮ್ಮ ಸಿನೆಮಾಗಳಲ್ಲಿ ತಾವೇ ಖುದ್ದಾಗಿ ಮಾಡುವ ಸ್ಟಂಟ್‌ಗಳನ್ನು ಅತ್ಯಂತ ಚುರುಕಾಗಿ ನಿಭಾಯಿಸು ತ್ತಾರೆ. ಕ್ಷಣಾರ್ಧದಲ್ಲಿ ದೊಡ್ಡ ಕಟ್ಟಡಗಳನ್ನು ಏರಿ, ಕ್ಷಣಾರ್ಧಲ್ಲಿ ಇಳಿಯಬಲ್ಲಂಥ ವಿಶೇಷ ಪ್ರತಿಭೆಯುಳ್ಳವರು ಅವರು. ಹೊಸದಾಗಿ ಪತ್ತೆಯಾಗಿರುವ 12 ಪ್ರಭೇದಗಳ ಹಲ್ಲಿಗಳು ಚಾಕಿಚಾನ್‌ರಂತೆಯೇ ವರ್ತಿಸುವುದರಿಂದ ಅವುಗಳಿಗೆ ಸಂಶೋಧಕರು ಸಿನೆಮಾಪ್ಸಿಸ್‌ ಜಾಕೇಲಿ ಅಥವಾ ಜಾಕೀಸ್‌ ಡೇ ಗಿಕೋ ಎಂದು ನಾಮಕರಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next