ಉಡುಪಿ: ಕರಾವಳಿಗರಿಗೆ ಸ್ಥಳೀಯ ಕುಚ್ಚಲು ಅಕ್ಕಿಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಸಾರ್ವಜನಿಕ ವ್ಯವಹಾರ ಇಲಾಖೆಯ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಪಿಡಿಎಸ್) ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಸ್ಥಳೀಯವಾಗಿ ಉತ್ಪದಾನೆ ಹೆಚ್ಚಿದೇ ಕುಚ್ಚಲು ಅಕ್ಕಿ ವಿತರಣೆ ಸಾಧ್ಯವಿಲ್ಲ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ತಿಂಗಳಿಗೆ ಪಿಡಿಎಸ್ ಅಡಿ ವಿತರಣೆಗೆ ಸರಿ ಸುಮಾರಿ 1 ಲಕ್ಷ ಕ್ವಿಂಟಾಲ್ ಅಕ್ಕಿಯ ಅವಶ್ಯಕತೆ ಯಿದೆ. ಅಂದರೆ ಸರಿಸುಮಾರು 1.40 ಲಕ್ಷ ಕ್ವಿಂಟಾಲ್ ಭತ್ತ ಬೇಕಾಗುತ್ತದೆ. ಸ್ಥಳೀಯ ವಾಗಿ ಬೆಳೆಯುವ ಭತ್ತಗಳು ಕೊçಲಿಗೂ ಮೊದಲೇ ಖಾಸಗಿ ಮಿಲ್‌ಗಳಿಗೆ ಬುಕ್ಕಿಂಗ್ ಆಗಿರುತ್ತದೆ. ಬಿತ್ತನೆ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆಯಾಗುತ್ತಿದ್ದರೂ ಭತ್ತ ಸ್ಥಳೀಯವಾಗಿ ಖರೀದಿಗೆ ಸಿಗುತ್ತಿಲ್ಲ.
ಸರಕಾರ ಕೊçಲು ಆರಂಭ ವಾಗುತ್ತಿದ್ದಂತೆ ಬೆಂಬಲ ಬೆಲೆ ಯಡಿ ಭತ್ತ ಖರೀದಿ ಕೇಂದ್ರ ಆರಂಭಿಸಿತ್ತು. ದ.ಕ. ಜಿಲ್ಲೆಯಿಂದ ಯಾರು ಕೂಡ ಭತ್ತ ನೀಡಲು ನೋಂದಣಿ ಮಾಡಿಕೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ 42 ಮಂದಿ ರೈತರು ನೋಂದಾಣಿ ಮಾಡಿಕೊಂಡಿದ್ದರು. ಅದರಲ್ಲಿ ಅಕ್ಕಿ ನೀಡಿದವರು ಓರ್ವ ರೈತ ಮಾತ್ರ. ಅದು ಕೂಡ 31 ಕ್ವಿಂಟಾಲ್ ಮಾತ್ರ.
ಸ್ಥಳೀಯವಾಗಿ ಕುಚ್ಚಲು ಅಕ್ಕಿ ನೀಡಲು ಬೇಕಾದಷ್ಟು ಭತ್ತದ ಉತ್ಪಾದನೆಯನ್ನು ಜಿಲ್ಲೆಯಲ್ಲೇ ಮಾಡುವ ನಿಟ್ಟಿನಲ್ಲಿ ಭತ್ತದ ಕೃಷಿಗೆ ಸರಕಾರ ಇನ್ನಷ್ಟು ಉತ್ತೇಜನ ನೀಡುವ ಜತೆಗೆ ರೈತರ ಭತ್ತ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂಬ ಆಗ್ರಹ ರೈತಾಪಿ ವರ್ಗದ್ದಾಗಿದೆ.
ಸದ್ಯ ಆಂಧ್ರಪ್ರದೇಶ ಸಹಿತ ಬೇರೆ ರಾಜ್ಯ ಗಳ ಕುಚ್ಚಲು ಅಕ್ಕಿಯನ್ನು ಕರಾವಳಿಯಲ್ಲಿ ವಿತರಿಸಲಾಗುತ್ತದೆ. ಆಹಾರ ನಿಗಮಕ್ಕೆ ಜಿಲ್ಲೆ ಯಿಂದ ನೀಡುವ ಬೇಡಿಕೆಯ ಅನುಸಾರ ಅಕ್ಕಿ ಪೂರೈಕೆ ಮಾಡಲಾಗುತ್ತದೆ. ಕೆಲವರು ಬೆಳ್ತಿಗೆ ಅಕ್ಕಿಯನ್ನು ಪಡೆಯುತ್ತಾರೆ. ಸದ್ಯ ಕುಚ್ಚಲು ಅಕ್ಕಿ ಬೇಡಿಕೆಯಷ್ಟು ಬರುತ್ತಿದ್ದರೂ ಸ್ಥಳೀಯವಾಗಿ ಯಾರು ಕೂಡ ಅದನ್ನು ಬಳಕೆ ಮಾಡುತ್ತಿಲ್ಲ ಎಂಬ ಆರೋಪವೂ ಇದೆ.
ಸಮಸ್ಯೆಗೆ ಪರಿಹಾರ ಏನು
ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಉತ್ಪಾದನೆ ಹೆಚ್ಚಳದ ಜತೆಗೆ ತಾಂತ್ರಿಕವಾಗಿ ಇರುವ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಪ್ರತಿ ವರ್ಷ ಕೊçಲಿನ ಸಂದರ್ಭ ದಲ್ಲಿಯೇ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಇದು ವಿಳಂಬವಾದಷ್ಟು ರೈತರು ಖಾಸಗಿ ಮಿಲ್‌ಗಳನ್ನು ಅವಲಂಬಿಸಬೇಕಾಗುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸ್ಥಳೀಯರು ಹೆಚ್ಚು ಬಳಕೆ ಮಾಡುವ ಎಂಒ4, ಕಜೆ, ಜಯ, ಪಂಚಮುಖೀ, ಸಹ್ಯಾದ್ರಿ, ಉಮಾ ಮತ್ತು ಜ್ಯೋತಿ ತಳಿಯ ಭತ್ತವನ್ನು ಬೆಳೆಯಲು ಹೆಚ್ಚು ಉತ್ತೇಜನ ನೀಡಬೇಕು.