ಗುವಾಹಟಿ : ನಗ-ನಗದು ಕದಿಯಲು ಮನೆಗೆ ನುಗ್ಗಿದ್ದ ಕಳ್ಳನೊಬ್ಬ ಆರಾಮವಾಗಿ ಖಿಚಡಿ ತಯಾರಿಸಿ ತಿನ್ನುವ ವೇಳೆ ಪೋಲೀಸರ ಕೈಗೆ ಸಿಕ್ಕಿ ಬಿದ್ದ ಕುತೂಹಲಕರ ಮತ್ತು ವಿಚಿತ್ರ ಘಟನೆ ನಡೆದಿದೆ.
ಗುವಾಹಟಿ ನಗರದ ದಿಸ್ಪುರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಗುವಾಹಟಿ ನಗರ ಪೊಲೀಸ್ ಕಮಿಷನರ್ ಹರ್ಮೀತ್ ಸಿಂಗ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಫೋನ್ ಮೂಲಕ ತಿಳಿಸಿದ್ದಾರೆ.
ಗುವಾಹಟಿ ನಗರ ಪೊಲೀಸರ ಪ್ರಕಾರ, ಕಳ್ಳನು ಹೆಂಗರಾಬರಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿ ಅಡುಗೆಮನೆಯೊಳಗೆ ಕಿಚಡಿ ಬೇಯಿಸಲು ಪ್ರಾರಂಭಿಸಿದ್ದ, ಆಗ ಸ್ಥಳೀಯರು ಪೊಲೀಸರನ್ನು ಸಂಪರ್ಕಿಸಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಹಕರಿಸಿದ್ದು, ಬಳಿಕ ಕಳ್ಳನನ್ನು ಬಂಧಿಸಲಾಗಿದೆ.
ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಅಸ್ಸಾಂ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಖಾತೆಯ ಹಾಸ್ಯದ ಕಮೆಂಟ್ ನೊಂದಿಗೆ ಬಂಧನವನ್ನು ಪ್ರಕಟಿಸಿದ್ದಾರೆ.
ಅಸ್ಸಾಂ ಪೊಲೀಸರು ಟ್ವೀಟ್ ಮಾಡಿದ್ದು “ಧಾನ್ಯ ಕಳ್ಳನ ಕುತೂಹಲಕಾರಿ ಪ್ರಕರಣ! ಅನೇಕ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಕಳ್ಳತನದ ಪ್ರಯತ್ನದ ಸಮಯದಲ್ಲಿ ಖಿಚಡಿಯನ್ನು ಬೇಯಿಸುವುದು ನಿಮ್ಮ ಯೋಗಕ್ಷೇಮಕ್ಕೆ ಹಾನಿಯನ್ನುಂಟುಮಾಡುತ್ತದೆ. ಕಳ್ಳನನ್ನು ಬಂಧಿಸಲಾಗಿದೆ ಮತ್ತು ಗುವಾಹಟಿ ಪೊಲೀಸರು ಈಗ ಅವನಿಗೆ ಬಿಸಿ ಊಟವನ್ನು ನೀಡುತ್ತಿದ್ದಾರೆ. ಎಂದು ಹಾಸ್ಯಮಯವಾಗಿ ಬರೆದಿದ್ದಾರೆ.