Advertisement
“ಏನ್ ಜೋಳಾ ರೀ. ಎಂಥ ಎತ್ರ ಬೆಳದೈತ್ರೀ ….ನಾವು ಇಷ್ಟ ಎತ್ರ ಬೆಳೆದಿದ್ದ ಜೋಳನಾ ನೋಡ್ಯಾ ಇಲಿÅà. ಮಳಿ ಇಲ್ದಾಗುನ ಇಂತಹ ಬೆಳೆ ಬಂದೈತ್ರಲ್ಲಾ’
Related Articles
ಸಾಮಾನ್ಯವಾಗಿ ಮಳೆಯಾಶ್ರಿತ ಭೂಮಿಯಲ್ಲಿ ಹಿಂಗಾರು ಬೆಳೆಯಾಗಿ, ಬಿಳಿಜೋಳ ಬಿತ್ತುವುದು ವಾಡಿಕೆ. ಆದರೆ ಕಳೆದ ವರ್ಷ ಮಳೆ ಇಲ್ಲದ ಬೆಳೆ ಸಂಪೂರ್ಣ ಒಣಗಿ ಹೋಯಿತು. ಈ ಕಾರಣದಿಂದಲೇ ಹೊಟ್ಟೆಗೆ ಹಿಟ್ಟು ಹಾಗೂ ಜಾನುವಾರುಗಳಿಗೆ ಮೇವು ದೊರಕೀತು ಎಂಬ ಆಸೆಯಿಂದ ಬಹುತೇಕ ರೈತರು ಪುನಃ ನೀರಾವರಿಯಾಶ್ರಿತ ಜಮೀನುಗಳಲ್ಲಿ ಬಿಳಿ ಜೋಳದ ಬೀಜಗಳನ್ನು ಬಿತ್ತಿದ್ದರು. ಅದರಂತೆ, ಕಡೆಕೋಪ್ಪ ಗ್ರಾಮದ ಮಲ್ಲಯ್ಯ ನಿಡಗುಂದಿಮಠ ಅವರು ಮೂರು ಎಕರೆ ಜಮೀನಲ್ಲಿ ಮಿಶ್ರ ಬೆಳೆಯಾಗಿ ಕಬ್ಬು, ಗೋಧಿ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಲ್ಲಿ ಒಂದು ಎಕರೆ ಭೂಮಿಯಲ್ಲಿ ಬಿಳಿಜೋಳ ಬಿತ್ತನೆ ಮಾಡಿದರು. ಆ ಜೋಳವೇ ಇಂದು ಇವರ ಬದುಕಿಗೆ ಆಸರೆಯಾಗಿದೆ. ಜಾನುವಾರುಗಳಿಗೆ ಮೇವು ದೊರಕಿಸಿಕೊಟ್ಟಿದೆ.
Advertisement
ಬಂಪರ್ ಬೆಳೆಕೇವಲ ಮೂರು ಎಕರೆ ಜಮೀನು ಹೊಂದಿರುವ ಮಲ್ಲಯ್ಯ, ಎಂಥ ಸಂದರ್ಭದಲ್ಲೂ ಜೋಳ ಬಿತ್ತುವುದನ್ನು ನಿಲ್ಲಿಸಿಲ್ಲ. ಪ್ರತಿ ವರ್ಷ ಜಮೀನಿಗೆ ಸಾವಯವ ಗೊಬ್ಬರವನ್ನು ಬಳಸುತ್ತಾರೆ. ಎರಡು ಬಾರಿ ನೀರಿನ ಜೊತೆ ಸಗಣಿ ಗೊಬ್ಬರ ಮಿಶ್ರಣ ಮಾಡಿ ಹಾಯಿಸಿದ್ದಾರೆ. ಈ ಬಾರಿ ಬಿತ್ತನೆ ಮಾಡಿದ ಬಿಳಿಜೋಳ ಸುಮಾರು 8 ರಿಂದ 9 ಅಡಿ ಎತ್ತರ ಬೆಳೆದು, ಎಕರೆಗೆ 10-15 ಕ್ವಿಂಟಾಲ್ ಫಸಲು ದೊರೆತಿದೆ. ಜೋಳ ಬಿತ್ತನಗೆ 1000-1500 ರೂ.ನ ಬಿತ್ತನೆ ಬೀಜವನ್ನು ಖರೀದಿಸಿ ನಾಟಿ ಮಾಡಿದ್ದಾರೆ. ಇತರ ಎಲ್ಲಾ ಖರ್ಚುಗಳನ್ನು ಸೇರಿಸಿದರೆ ಒಟ್ಟು 7,000-8000 ರೂ ಆಗಬಹುದು. ಮಾರುಕಟ್ಟೆಯಲ್ಲಿ ಸದ್ಯ ಒಂದು ಕಿಂಟಲ್ ಬಿಳಿ ಜೋಳಕ್ಕೆ 3,400 ರಿಂದ 3500 ವರಗೆ ಇದೆ. ಒಂದೂವರಿ ಎಕರೆ ಭೂಮಿಯಲ್ಲಿ ಸುಮಾರು 10-15 ಕ್ವಿಂಟಾಲ್ ಜೋಳ ಬಂದರೇ 50-60 ಸಾವಿರ ರೂ. ಆದಾಯ. ಹಿಂದೇಟು, ಜೋಳದ ಬೆಳೆಗೆ ಕೋಕ್
ಹಿಂದೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಜೋಳದ ಕಣಜವೆನಿಸಿಕೊಂಡಿದ್ದವು. ಆದರೆ, ಈಗ ಕೈ ತುಂಬ ಹಣವಿರುವ ವಾಣಿಜ್ಯ ಬೆಳೆಗಳನ್ನು ಬೆಳೆಯುವಲ್ಲಿ ತೋರುವ ಆಸಕ್ತಿಯನ್ನು ರೈತರು ಜೋಳ ಬೆಳೆಯುವಲ್ಲಿ ತೋರುತ್ತಿಲ್ಲ. ಹೀಗಾಗಿ, ಜೋಳದ ಬೆಳೆ ಅಷ್ಟೊಂದು ಬಿತ್ತನೆಯಾಗಿಲ್ಲ. ಆರಕ್ಕೇರದ ಮೂರಕ್ಕಿಳಿಯದ ಬೆಳೆ ಎಂದು ಮೂಗು ಮುರಿಯುತ್ತಿದ್ದ ರೈತರು, ಈ ಬಾರಿ ಬಿತ್ತಿದ ನಿಡಗುಂದಿ ಮಠರ ಜಮೀನಿನಲ್ಲಿ ಬೆಳೆದು ನಿಂತಿರುವ ಭಾರೀ ಪ್ರಮಾಣದ ಜೋಳವನ್ನು ಕಂಡು ಬೆರಗಾಗಿದ್ದಾರೆ. ತಾವೂ ಬೆಳೆಯಬೇಕೆಂಬ ನಿರ್ಧಾರಕ್ಕೂ ಬಂದಿದ್ದಾರೆ. – ಮಲ್ಲಿಕಾರ್ಜುನ ಮೆದಿಕೇರಿ