Advertisement

ಲಾಯರ್ ಭಾಷೆಯ ಲವ್ ಸಾಂಗ್‍ನಲ್ಲಿ “ಅನಂತು v/s ನುಸ್ರತ್’: Watch

03:59 PM Oct 05, 2018 | |

ವಿನಯ್ ರಾಜಕುಮಾರ್ ಅಭಿನಯದ “ಅನಂತು v/s ನುಸ್ರತ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಸದ್ದು ಮಾಡಿತ್ತು. ಇದೀಗ ಚಿತ್ರದ ಲಾಯರ್ ಭಾಷೆಯ ಲವ್ ಸಾಂಗ್​ ಬಿಡುಗಡೆಯಾಗಿದ್ದು, ಹಾಡಿಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಹೌದು! “ಈಗ ತಾನೇ ಜಾರಿಯಾಗಿದೆ’ ಎಂಬ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ.

Advertisement

ನವ ಸಂಗೀತ ನಿರ್ದೇಶಕ ಸುನಾದ್​ ಗೌತಮ್​​ ಮ್ಯೂಸಿಕ್​ ಕಂಪೊಸ್​ ಮಾಡಿರೋ ಈ ಹಾಡಿಗೆ ಸಿದ್ದು ಕೋಡಿಪುರ ಲಾಯರ್ ಭಾಷೆಯನ್ನೇ ಬಳಸಿ ಸಾಹಿತ್ಯ ರಚಿಸಿದ್ದಾರೆ. ಅಲ್ಲದೇ ವಿಜಯ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿ ಬಂದಿದ್ದು, ಕೇಳೋಕೆ ಮುದನೀಡುತ್ತದೆ. ಇನ್ನು ಸ್ಯಾಂಡಲ್​ವುಡ್​ನಲ್ಲಿ ಒಂದು ಸೂಪರ್​ ಹಿಟ್​ನ ನಿರೀಕ್ಷೆಯಲ್ಲಿರುವ ವಿನಯ್ ಈ ಬಾರಿ ಕರಿ ಕೋಟು ಧರಿಸಿ ವಕೀಲನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ವಕೀಲ ಅನಂತ ಕೃಷ್ಣ ಎಂಬ ಪಾತ್ರದಲ್ಲಿ ಅಭಿನಯಿಸಿರುವ ವಿನಯ್​ಗೆ ಲತಾ ಹೆಗ್ಡೆ ನಾಯಕಿಯಾಗಿದ್ದಾರೆ. ವಿನಯ್ ಇಲ್ಲಿ ಸಾಮಾನ್ಯ ವಕೀಲನಾದರೆ ಲತಾ ಹೆಗ್ಡೆ ಜಡ್ಜ್ ಪಾತ್ರಧಾರಿ ನುಸ್ರತ್ ಫಾತಿಮಾ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಮಿಶ್ರಿತ ನವಿರಾದ ಪ್ರೇಮಕಥೆಯಾಗಿದ್ದು, ಜಡ್ಜ್​ಗೆ ಮನಸೋತಿರುವ ವಕೀಲನ ಕಥೆ ಈ ಚಿತ್ರದಲ್ಲಿರಲಿದೆ.

ಈ ಸಿನಿಮಾವನ್ನು ಸುಧೀರ್ ಶಾನುಭೋಗ್ ನಿರ್ದೇಶಿಸಿದ್ದು, ಈಗಾಗಲೇ “ಕೋರ್ಟ್​ಗೆ ಬಂದವಳು ಹಾರ್ಟ್​ಗೆ ಬರ್ಬಾದು ಅಂತ ಏನಾದರೂ ಕಾನೂನಿದೆಯಾ…’ ಎಂಬ ಡೈಲಾಗ್​ ಸಖತ್ತಾಗೆ ವರ್ಕೌಟ್ ಆದಂತಿದೆ. ಮಾಣಿಕ್ಯ ಪ್ರೊಡಕ್ಷನ್ ನಿರ್ಮಿಸಿರುವ ಈ ಚಿತ್ರದಲ್ಲಿ ರವಿಶಂಕರ್, ಗುರು ಪ್ರಸಾದ್, ಅಶೋಕ್ ಸೇರಿದಂತೆ ಬಹುತಾರಗಣವಿದ್ದು, ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ತಾರಾಗಣದಲ್ಲಿ ರವಿಶಂಕರ್, ಬಿ ಸುರೇಶ್, ಗುರು ಪ್ರಸಾದ್, ಸುಚೀಂದ್ರ ಪ್ರಸಾದ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next