Advertisement

ಮತದಾರರ ಕೈಯಲ್ಲಿದೆ ಸುಭದ್ರ ಪ್ರಜಾಪ್ರಭುತ್ವ

11:30 AM Jan 26, 2022 | Team Udayavani |

ಕಲಬುರಗಿ: ಮತದಾನದ ಬಗ್ಗೆ ಅರಿವು ಮೂಡಿಸುವಂತ ಕರ್ತವ್ಯವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ. ಯಾವ ರೀತಿ ನಮ್ಮ ಹಕ್ಕುಗಳನ್ನು ಚಲಾಯಿಸುತ್ತೇವೆಯೋ ಅದೇ ರೀತಿ ಕರ್ತವ್ಯವನ್ನು ಮಾಡಬೇಕಾಗುತ್ತದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧಿಧೀಶ ಸುಶಾಂತ ಚೌಗಲೆ ಹೇಳಿದರು.

Advertisement

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಮತದಾನ ಈಗಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಯೋಚಿಸಬೇಕು. ಎಲ್ಲರೂ ಕೂಡ ಸುಭದ್ರ ಪ್ರಜಾಪ್ರಭುತ್ವವನ್ನು ಕಟ್ಟಲು ಮತ ಚಲಾಯಿಸಬೇಕು. ಅಮೂಲ್ಯವಾದ ಮತದಾನವನ್ನು ಸರಿಯಾದ ವ್ಯಕ್ತಿಗೆ ನೀಡಿ ದೇಶವನ್ನು ಕಟ್ಟುವುದರಲ್ಲಿ ಸಕ್ರಿಯವಾಗಿ ಭಾಗವಾಗಿಯಾಗೋಣ ಎಂದರು.

ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ನಾ ಮಾತನಾಡಿ, ನಾವು ಲಕ್ಷ್ಯ ವಹಿಸಬೇಕಾದ್ದು ಯುವ ಮತದಾರರತ್ತ. ಮೊದಲನೇ ಬಾರಿಗೆ ಮತದಾನ ಮಾಡುವ ಯುವ ಜನತೆಗೆ ಮಹತ್ವದ ಹಕ್ಕನ್ನು ಹೇಗೆ ಚಲಾಯಿಸಬೇಕು ಎನ್ನುವ ಅರಿವು ಮೂಡಿಸಬೇಕು. ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಸಂವಿಧಾನದ ಪೀಠಿಕೆಯಿಂದ ಶುರು ಮಾಡಬೇಕು. ನಿಯಮಗಳನ್ನು ತಿಳಿಯಬೇಕು ಎಂದು ಹೇಳಿದರು.

ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಇದೆಲ್ಲವನ್ನು ಎತ್ತಿ ಹಿಡಿಯುವವರು, ಪ್ರಾಮುಖ್ಯತೆ ಕೊಡುವವರು ಹಾಗೂ ದೇಶದ ಒಳ್ಳೆಯ ನಾಯಕರಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕಾಗುತ್ತದೆ. ಸಮಾನತೆ ಎಂದರೆ ಒಬ್ಬರಿಗೆ ಮಾತ್ರವಲ್ಲ ಎಲ್ಲರೂ ಸಮಾನರು ಮತ್ತು ಸಮಾನತೆಯಿಂದ ಇರುವುದಾಗಿದೆ ಎಂದರು. ಇದೇ ಸಂದರ್ಭದಲ್ಲಿ 18ರಿಂದ 19 ವರ್ಷದ ಯುವ ಮತದಾರರಿಗೆ ಮತಚಲಾವಣೆ ಮಾಡುವವರಿಗೆ ಗುರುತಿನ ಚೀಟಿ ವಿತಸಲಾಯಿತು.

ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಭಾಷಣ, ಚರ್ಚಾ, ರಂಗೋಲಿ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜತೆಗೆ ಎಲ್ಲ ಅಧಿಕಾರಿಗಳು ಸಹಿ ಹಾಕುವ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಯಿತು.

Advertisement

ಜಿಲ್ಲಾ ಪಂಚಾಯಿತಿ ಸಿಇಒ ದಿಲೀಷ ಸಸಿ, ಡಿಸಿಪಿ ಅಡ್ಮೂರ ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ, ಸಹಾಯಕ ಆಯುಕ್ತೆ ಮೋನಾರೂಟ್‌, ತಹಶೀಲ್ದಾರ ಪ್ರಕಾಶ ಕುದರಿ, ವಿಶೇಷ ಭೂಸ್ವಾಧಿಧೀನ ಅಧಿಕಾರಿ ಸುರೇಖಾ, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ಜಿ.ನಾಡಗಿರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next