ಬೆಳ್ತಂಗಡಿ: ಉಜಿರೆಯಲ್ಲಿ ಪ್ರಾಥಮಿಕದಿಂದ ಸ್ನಾತಕೋತ್ತರದವರೆಗೆ ಶಿಕ್ಷಣ ನೀಡುವ ಅನೇಕ ಸಂಸ್ಥೆಗಳಿದ್ದರೂ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಮಹಿಳೆಯರಿಗಾಗಿಯೇ ಮೀಸಲಾದ ಐ.ಟಿ.ಐ. ಸ್ಥಾಪನೆಯಿಂದ ಮಹಿಳೆಯರಿಗೂ ತಮ್ಮ ಕನಸುಗಳನ್ನು ಸಾಕಾರಗೊಳಿಸುವ ಸುವರ್ಣಾ ವಕಾಶವೊದಗಿ ಬಂದಿದೆ.
2006ರಲ್ಲಿ ಆರಂಭವಾದ ಉಜಿರೆ ಎಸ್‌ಡಿಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ 12 ವರ್ಷಗಳನ್ನು ಪೂರೈಸಿದೆ. ಈ ಸಂಸ್ಥೆಯಲ್ಲಿ ಕೋಪ (ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್) ಮತ್ತು ಸೀವಿಂಗ್ ಟೆಕ್ನಾಲಜಿ (ಹೊಲಿಗೆ ತಂತ್ರಜ್ಞಾನ) ಎರಡು ವಿಷಯಗಳಲ್ಲಿ ಒಂದೊಂದು ವರ್ಷದ ತರಬೇತಿಯನ್ನು ನೀಡಲಾಗುತ್ತದೆ.
ಉಜಿರೆಯ ಬೆಳಾಲು ರಸ್ತೆ ಮಂಜುಶ್ರೀ ಕಟ್ಟಡದಲ್ಲಿರುವ ಈ ಸಂಸ್ಥೆಯಲ್ಲಿ ಆಧುನಿಕ ಉಪಕರಣಗಳಿರುವ ಸುಸಜ್ಜಿತ ಪ್ರಯೋಗಾಲಯಗಳು, ಉತ್ತಮ ವಾಚನಾಲಯ ಹಾಗೂ ಅನುಭವೀ ಬೋಧಕ ವರ್ಗವಿದ್ದು, ಈ ಸಂಸ್ಥೆಯಲ್ಲಿ ಕಂಪ್ಯೂಟರ್ ಎರಡು ವಿಭಾಗದಲ್ಲಿ 52 ಮಂದಿಗ ಹಾಗೂ ಹೊಲಿಗೆ ಒಂದು ವಿಭಾಗದಲ್ಲಿ 21 ಮಂದಿಗೆ ಅಧ್ಯಯನಾವಕಾಶವಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಈ ಸಂಸ್ಥೆಗೆ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮತ್ತು ಪ್ರೊ| ಎಸ್. ಪ್ರಭಾಕರ್, ಕಾರ್ಯದರ್ಶಿಗಳಾದ ಡಿ. ಹರ್ಷೇನ್ದ್ರ ಕುಮಾರ್ ಮತ್ತು ಡಾ| ಬಿ. ಯಶೋವರ್ಮ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ. ಶಶಿಧರ ಶೆಟ್ಟಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಸಂಸ್ಥೆಯು ಉತ್ತಮ ಶಿಕ್ಷಣ ಸೌಲಭ್ಯಗಳೊಂದಿಗೆ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ಸರಕಾರಿ/ ಸಂಸ್ಥೆಯ ಹಾಸ್ಟೆಲ್ ವ್ಯವಸ್ಥೆ ಮತ್ತು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಶುಲ್ಕದಲ್ಲಿ ರಿಯಾಯಿತಿ ಹಾಗೂ ಸರಕಾರದಿಂದ ನೀಡುವ ಉಚಿತ ಬರೆಯುವ/ ಓದುವ ಪುಸ್ತಕಗಳು, ಲೇಖನ ಸಾಮಾಗ್ರಿಗಳು, ಯುನಿಫಾರಂ, ಶೂ ನೀಡುವುದರ ಜೊತೆಗೆ ಆಯ್ದ ವಿದ್ಯಾರ್ಥಿಗಳಿಗೆ OBC/ zindal/ Sujnana/ Minority ಮುಂತಾದ ಕಡೆಗಳಿಂದ scolarship ವ್ಯವಸ್ಥೆ ಮಾಡಿಕೊಡಲಾಗುವುದು. ಈವರೆಗೆ ಇಲ್ಲಿ 363 ವಿದ್ಯಾರ್ಥಿ ನಿಯರು ತರಬೇತಿ ಮುಗಿಸಿದ್ದು ಶೇ.90 ರಷ್ಟು ಮಂದಿ ಸ್ವ ಉದ್ಯೋಗದ ಜೊತೆಗೆ ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗಾವಕಾಶಗಳನ್ನು ಗಳಿಸಿದ್ದಾರೆ. ಕಂಪ್ಯೂಟರ್ ಮತ್ತು ಹೊಲಿಗೆ- ತಂತ್ರಜ್ಞಾನದಲ್ಲಿ ಪರಿಣತಿಯೊಂದಿಗೆ ವ್ಯಕ್ತಿತ್ವ
ವಿಕಸನ, ಯೋಗ, ಕ್ರೀಡೆ, ಭಿತ್ತಿ ಪತ್ರಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶ ಒದಗಿಸಲಾಗುತ್ತಿದೆ.
ಮಾನ್ಯತೆ
2008ರಲ್ಲಿ ಸಂಸ್ಥೆಯು ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನವದೆಹಲಿ ಇಲ್ಲಿಂದ ಮಾನ್ಯತೆಯನ್ನು ಪಡೆದಿದೆ. 2015ರಲ್ಲಿ ಕ್ಯು.ಸಿ.ಐ. (ರಾಷ್ಟ್ರೀಯ ಗುಣಮಟ್ಟ ನಿಯಂತ್ರಣ ಮಂಡಳಿ) ಮುಖಾಂತರ ದ್ವಿತೀಯ ಬಾರಿಗೆ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನವದೆಹಲಿಯಿಂದ ಮಾನ್ಯತೆಯನ್ನು ಪಡೆದಿದೆ. 2018 ರಲ್ಲಿ ನಡೆಸಿದ ಗುಣಮಟ್ಟದ ಸಮೀಕ್ಷೆಯಲ್ಲಿ ಈ ಸಂಸ್ಥೆಗೆ 5ರಲ್ಲಿ 2.84 ಕೃಪಾಂಕವನ್ನು ನೀಡಿರುತ್ತಾರೆ. ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರು/ ಮಹಿಳೆಯರು ಶಿಕ್ಷಣ ಪಡೆಯಬಹುದಾಗಿದೆ.