Advertisement

ಜಿಲ್ಲೆಯ 4 ತಾಲೂಕುಗಳಲ್ಲಿ ಗ್ರಾ.ಪಂ. ಚುನಾವಣೆ: ಸಿದ್ಧತೆ ಸಂಪೂರ್ಣ: ಇಂದು ಪ್ರಥಮ ಹಂತದ ಮತದಾನ

10:33 PM Dec 21, 2020 | mahesh |

ಉಡುಪಿ: ಉಡುಪಿ ಜಿಲ್ಲಾದ್ಯಂತ ಒಂದನೇ ಹಂತದ ಮತದಾನಕ್ಕೆ ಎಲ್ಲ ರೀತಿಯ ಸಕಲ ಸಿದ್ಧತೆಗಳು ನಡೆದಿವೆ. ಮಂಗಳವಾರ 67 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ.

Advertisement

2,349 ಅಭ್ಯರ್ಥಿಗಳು
ಮೊದಲ ಚುನಾವಣೆ ನಡೆಯಲಿರುವ ನಾಲ್ಕು ತಾಲೂಕುಗಳಲ್ಲಿ 1,241 ಸಾಮಾನ್ಯ ಮತ್ತು 1,108 ಮಹಿಳೆಯರು ಸೇರಿದಂತೆ 2,349 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಲ್ಕೂ ತಾಲೂಕುಗಳ 67 ಗ್ರಾ.ಪಂ.ಗಳಲ್ಲಿ 1,122 ಸ್ಥಾನಗಳಿದ್ದು ಇದರಲ್ಲಿ 63 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 1,047 ಸ್ಥಾನಗಳಿಗೆ ಚುನಾವಣೆ ನಡೆಯ ಲಿದೆ. 12 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.

3.77 ಲಕ್ಷ ಮತದಾರರು
ಉಡುಪಿ ತಾಲೂಕಿನಲ್ಲಿ 53,159 ಪುರುಷ ಮತ್ತು 57,281 ಮಹಿಳಾ ಮತದಾರರು, ಬ್ರಹ್ಮಾವರದಲ್ಲಿ 66,684 ಪುರುಷ, 71,970 ಮಹಿಳಾ ಮತದಾರರು, ಬೈಂದೂರಿನಲ್ಲಿ 42,910 ಪುರುಷ, 44,822 ಮಹಿಳಾ ಮತದಾರರು, ಹೆಬ್ರಿಯಲ್ಲಿ 19,654 ಪುರುಷ, 20,621 ಮಹಿಳಾ ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,82,407 ಪುರುಷ, 1,94,694 ಮಹಿಳಾ ಮತ್ತು 6 ಇತರ ಮತದಾರರು ಸೇರಿದಂತೆ ಒಟ್ಟು 3,77,107 ಮಂದಿ ಮತದಾರರಿದ್ದಾರೆ.

ಮತಗಟ್ಟೆಗಳಿಗೆ ತೆರಳಿದ ಸಿಬಂದಿ
ಸೋಮವಾರ ಮಧ್ಯಾಹ್ನ ತಾಲೂಕು ಮಸ್ಟರಿಂಗ್‌ ಕೇಂದ್ರಗಳಿಂದ ತಯಾರಿ ಪೂರ್ಣಗೊಳಿಸಿ ಚುನಾವಣೆ ಅಧಿಕಾರಿಗಳು, ಸಿಬಂದಿ ಮತದಾನ ಕರ್ತವ್ಯಕ್ಕೆ ತಮ್ಮ ತಮ್ಮ ಮತಗಟ್ಟೆಗೆ ತೆರಳಿದರು. ಉಡುಪಿ ಬ್ರಹ್ಮಗಿರಿಯಲ್ಲಿರುವ ಸಂತ ಸಿಸಿಲೀಸ್‌ ವಿದ್ಯಾಸಂಸ್ಥೆ ಮಸ್ಟರಿಂಗ್‌ ಕೇಂದ್ರವಾಗಿದ್ದು, ಜಿಲ್ಲಾ ಚುನಾವಣ ವೀಕ್ಷಕ ಜಿ.ಟಿ. ದಿನೇಶ್‌ ಕುಮಾರ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಸ್ಥಳದಲ್ಲಿದ್ದರು. ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್‌ ಕೇಂದ್ರಕ್ಕೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬೈಂದೂರು, ಬ್ರಹ್ಮಾವರದ ಮಸ್ಟರಿಂಗ್‌ ಕೇಂದ್ರದಿಂದ ಸಿಬಂದಿ ಮತಗಟ್ಟೆಗೆ ತೆರಳಿದರು. ಬೆಳಗ್ಗೆ 9 ಗಂಟೆಗೆ ಮಸ್ಟರಿಂಗ್‌ ಕೇಂದ್ರಕ್ಕೆ ಆಗಮಿಸಿದ ಸಿಬಂದಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಮಧ್ಯಾಹ್ನದ ವೇಳೆಗೆ ತೆರಳಿದರು. ಚುನಾವಣ ಆಯೋಗದಿಂದ ಅಧಿಕಾರಿ ಮತ್ತು ಸಿಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಉಡುಪಿ ತಾಲೂಕು ಮಸ್ಟರಿಂಗ್‌ ಕೇಂದ್ರದಿಂದ 22 ಕೆಎಸ್‌ಆರ್‌ಟಿಸಿ ಬಸ್‌, 3 ಮ್ಯಾಕ್ಸಿಕ್ಯಾಬ್‌, 4 ಜೀಪ್‌ಗ್ಳಿಂದ ವಿವಿಧ ಮತಗಟ್ಟೆಗಳಿಗೆ 1,350ಕ್ಕೂ ಅಧಿಕ ಮಂದಿ ಸಿಬಂದಿ ತೆರಳಿದರು.

370 ಹೊರ ಜಿಲ್ಲೆ ಪೊಲೀಸ್‌ ಸಿಬಂದಿ
ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ 370 ಸಿಬಂದಿ ಕರೆಸಿಕೊಳ್ಳಲಾಗಿದೆ. 4 ಕೆಎಸ್‌ಆರ್‌ಪಿ ತುಕಡಿ, 8 ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ.
– ಕುಮಾರಚಂದ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ

Advertisement

ಪ್ರಕ್ರಿಯೆ
ಮಂಗಳವಾರ ನಡೆಯಲಿರುವ ಪ್ರಥಮ ಹಂತದ ಚುನಾವಣೆಗೆ 556 ಮತಗಟ್ಟೆಗಳಿದ್ದು, ಒಟ್ಟು 68 ನಾವಣಾಧಿಕಾರಿಗಳನ್ನು, 73 ಸಹಾಯಕ ಚುನಾವಣಾಧಿಕಾರಿಗಳನ್ನು ಹಾಗೂ 4 ನೋಡಲ್‌ ಅಧಿಕಾರಿಗಳನ್ನು ಚುನಾವಣೆ ಪ್ರಕ್ರಿಯೆಗಾಗಿ ನೇಮಿಸಲಾಗಿದೆ. ಚುನಾವಣೆಗೆ ಬೇಕಿರುವ ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿದೆ.
– ಜಿ. ಜಗದೀಶ್‌, ಜಿಲ್ಲಾಧಿಕಾರಿ

ಊಟ, ತಿಂಡಿಗೆ ಟಿಎ, ಡಿಎ
ಉಡುಪಿ ತಾಲೂಕಿನಲ್ಲಿ 133 ಸಾಮಾನ್ಯ, 20 ಸೂಕ್ಷ್ಮ, 8 ಅತೀಸೂಕ್ಷ್ಮ ಮತಗಟ್ಟೆಗಳಿವೆ. ಕೋವಿಡ್‌ ಕಾರಣದಿಂದಾಗಿ ಈ ಬಾರಿ ಮತಗಟ್ಟೆ ಅಧಿಕಾರಿ, ಸಿಬಂದಿಗೆ ಆಯೋಗದಿಂದ ಟಿಎ, ಡಿಎ ನೀಡಲಾಗುತ್ತಿದೆ. ಮತಗಟ್ಟೆ ಸಮೀಪದ ಹೊಟೇಲ್‌, ಕ್ಯಾಂಟೀನ್‌ಗಳಿಂದ ಊಟ, ಉಪಾ‌ಹಾರ ತರಿಸಿಕೊಂಡು ಸೇವಿಸಲಿದ್ದಾರೆ ಎಂದು ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next