Advertisement

ವಘೇಲಾ ಎಫೆಕ್ಟ್: ಮೂವರು ಶಾಸಕರು ಬಿಜೆಪಿ ಸೇರ್ಪಡೆ

09:45 AM Jul 28, 2017 | Karthik A |

ಅಹಮದಾಬಾದ್‌: ಬಿಹಾರದಲ್ಲಿ ಮಹಾ ಮೈತ್ರಿ ಕೂಟ ಮುರಿತದ ಆಘಾತದ ನಡುವೆಯೇ ಗುಜರಾತ್‌ನಲ್ಲಿ ಭಾರೀ ಆಘಾತ ಎದುರಿಸಿದೆ ಕಾಂಗ್ರೆಸ್‌. ಕೇಂದ್ರದ ಮಾಜಿ ಸಚಿವ ಶಂಕರ್‌ ಸಿಂಗ್‌ ವಘೇಲಾರ ಬೆಂಬಲಿಗ ಮೂವರು ಶಾಸಕರು ಕಾಂಗ್ರೆಸ್‌ಗೆ ಗುರುವಾರ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Advertisement

ಬುಧವಾರವಷ್ಟೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ಗೆ ಎದುರಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ ತತ್‌ಕ್ಷಣವೇ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಬಲ್ವಂತ್‌ ಸಿಂಗ್‌ ರಜಪೂತ್‌, ತೇಜಶ್ರೀಬೆನ್‌ ಪಟೇಲ್‌ ಹಾಗೂ ಪ್ರಲ್ಹಾದ್‌ ಪಟೇಲ್‌ ರಾಜೀನಾಮೆ ನೀಡಿದ ಶಾಸಕರು. ಹೀಗಾಗಿ, 182 ಸದಸ್ಯರ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬಲ ಈಗ 54ಕ್ಕೆ ಕುಸಿದಿದೆ. ಇದರಿಂದಾಗಿ ಪಟೇಲ್‌ ರಾಜ್ಯಸಭೆ ಪ್ರವೇಶಕ್ಕೂ ಸಂಕಷ್ಟ ಉಂಟಾಗಿದೆ. ಅವರಿಗೆ ಒಟ್ಟು 47 ಶಾಸಕರ ಬೆಂಬಲ ಬೇಕು. ಈ ಬೆಳವಣಿಗೆ ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next