Advertisement
ಬರೀ ಎರಡು ದಶಕಗಳ ಹಿಂದೆ ಕೃಷಿ ವಿಜಾnನಿಗಳು ಮಂತ್ರದಂತೆ ರಸವಿಷಗಳ ಹೆಸರುಗಳನ್ನು ಯಾವುದೇ ಮುಜುಗರ ಇಲ್ಲದಂತೆ ಜಪಿಸುತ್ತಿದ್ದುದನ್ನು ನೆನಪಿಸಿಕೊಳ್ಳಿ. ಅವು ಪರಿಸರ ಹಾಗೂ ಆರೋಗ್ಯದ ಮೇಲೆ ಎಂಥ ಮಾರಕ ಪರಿಣಾಮ ಬೀರುತ್ತವೆ ಎಂಬುದು ಗೊತ್ತಿದ್ದರೂ ದರಾಚೆದಿನ ಪರಿಣಾಮಗಳ ಬಗ್ಗೆ ಆಧುನಿಕ ಕೃಷಿ ವಿಜಾnನ ಹೆಚ್ಚು ಯೋಚನೆ ಮಾಡಿರಲಿಲ್ಲ (ಈಗಲೂ ಕೃಷಿಯಲ್ಲಿ ಏನಾದರೂ ಸಮಸ್ಯೆ ಎದುರಾದರೆ ಒಂದಷ್ಟು ವಿಜಾnನಿಗಳು, ರಾಸಾಯನಿಕಗಳನ್ನುಬಿಟ್ಟು ಬೇರೆ ಏನನ್ನೂ ಹೇಳುವುದಿಲ್ಲ, ಆ ಮಾತು ಬೇರೆ).
ವರ್ಲ್ಡ್ ಕಾಂಗ್ರೆಸ್-2017) ಸಾವಯವ ಆಂದೋಲನಕ್ಕೆ ಗಟ್ಟಿತನವನ್ನು ನೀಡುವ ಆಶಾವಾದ ಇದೆ. ಸಾವಯವ ಕೃಷಿಯು ಭಾರತಕ್ಕೆ ಹೊಸದೇನಲ್ಲ. ಇಲ್ಲಿ ಸಾವಿರಾರು ವರ್ಷಗಳಿಂದ ನಡೆಯುತ್ತಿದ್ದುದು ಇದೇ ವ್ಯವಸಾಯ. ಹರಪ್ಪ- ಮೆಹೇಂಜೊದಾರೊ ಕಾಲದಲ್ಲೂ ಸುಸ್ಥಿರ ಕೃಷಿಯ ಕುರುಹುಗಳು ಸಿಕ್ಕಿವೆ. ಸಸ್ಯಗಳಿಗೆ ದಾಳಿ ಮಾಡುವ ಕೀಟ ಹಾಗೂ ರೋಗವನ್ನು ಪರಿಸರಕ್ಕೆ ಧಕ್ಕೆಯಾಗದಂತೆ ನಿಯಂತ್ರಿಸುತ್ತಿದ್ದ ವಿಧಾನಗಳು ಹಳೆಯ ಗ್ರಂಥಗಳಲ್ಲಿವೆ. ಅಷ್ಟಕ್ಕೂ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿದ್ದ ಸಾಂಪ್ರದಾಯಿಕ ತಳಿಗಳು ರೋಗ-ಕೀಟನಿರೋಧಕ ಶಕ್ತಿಯನ್ನೇ ಪಡೆದಿದ್ದವು.
Related Articles
Advertisement
ಜಗತ್ತಿನಲ್ಲಿ ಸಾವಯವ ಚಳವಳಿಯು ತನ್ನ ರೆಂಬೆ-ಕೊಂಬೆ ಚಾಚಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿಯೇ “ಜಾಗತಿಕ ಸಾವಯವ ಸಮಾವೇಶ’ ನಡೆಯುತ್ತಿದೆ. 120 ದೇಶಗಳ 815 ಸಂಘ-ಸಂಸ್ಥೆಗಳೊಂದಿಗೆ ಸಾವಯವ ಚಳವಳಿಯನ್ನು ಬಲಿಷ್ಠಗೊಳಿಸುವ ಕೆಲಸದಲ್ಲಿ ತೊಡಗಿರುವ “ಸಾವಯವ ಕೃಷಿ ಚಳವಳಿಯ ಅಂತರರಾಷ್ಟ್ರೀಯ ಒಕ್ಕೂಟ’ದ (ಐಫೋಮ್)ನೇತೃತ್ವದಲ್ಲಿ ಮೂರು ವರ್ಷಗಳಿಗೊಮ್ಮೆ ಈ ಸಮಾವೇಶ ಆಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ ಸಮಾವೇಶದ ಉಸ್ತುವಾರಿಯನ್ನು ಭಾರತೀಯ ಸಾವಯವ ಕೃಷಿ ಸಂಸ್ಥೆ (ಒಫಾಯ್) ವಹಿಸಿಕೊಂಡಿದೆ. ವಿವಿಧ ದೇಶಗಳಿಂದ ನಾಲ್ಕು ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೃಷಿ ವಿಜಾnನಿಗಳು, ರೈತರು, ಸಂಘಟನೆಗಳ ಪ್ರತಿನಿಧಿಗಳು, ಉದ್ದಿಮೆದಾರರು ಭಾಗವಹಿಸುವ ಸಮಾವೇಶದಲ್ಲಿ ಅನುಭವ ಹಂಚಿಕೆ, ಅನುಶೋಧನೆ, ಶುದಟಛಿ ಆಹಾರ ಹಾಗೂ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಹಲವು ಗೋಷ್ಠಿಗಳು ಇರಲಿವೆ. ಜಗತ್ತಿನ ವಿವಿಧ ಭಾಗಗಳಿಂದ ಆಯ್ದ ರೈತರು ತಮ್ಮ ಯಶಸ್ವಿ ಕೃಷಿ ವಿಧಾನವನ್ನು ಹಂಚಿಕೊಳ್ಳುವ ಗೋಷ್ಠಿಗಳು ಸಮಾವೇಶದ ಪ್ರಮುಖ ಆಕರ್ಷಣೆ. ಕರ್ನಾಟಕದಿಂದ ಸುಮಾರು ಇಪ್ಪತ್ತು ಕೃಷಿಕರು ಭಾಗವಹಿಸಲಿರುವುದೂ ವಿಶೇಷ. ‘ಕೃಷಿಯೇ ಮೂಲವಾಗಿರುವ ಭಾರತದಲ್ಲಿ ಈಗ ಆ ಕಸುಬು ದಿಕ್ಕೆಟ್ಟು ನಿಂತಿದೆ. ಆಹಾರ ವಿಷಮಯವಾಗಿದೆ; ರೈತನ ಬದುಕು ಹೀನಾಯ ಸ್ಥಿತಿ ತಲುಪಿದೆ. ಸಾವಯವ ವಿಧಾನವೇ ಇದಕ್ಕೆ ಪರಿಹಾರ’ ಎನ್ನುವ “ಒಫಾಯ್’ ನಿರ್ದೇಶಕ ಹಾಗೂ ಪರಿಸರವಾದಿ ಡಾ. ಕ್ಲಾಡ್ ಅಲ್ವಾರಿಸ್, ನಿಧಾನವಾಗಿಯಾದರೂ ಸಾವಯವ ಆಂದೋಲನದ ವ್ಯಾಪ್ತಿ ವಿಸ್ತಾರವಾಗುತ್ತಿದೆ ಎಂದು ಸಂತಸದಿಂದ ಹೇಳುತ್ತಾರೆ.
“ಸಾವಯವ ಭಾರತದ ಮೂಲಕ ಸಾವಯವ ಜಗತ್ತು’ ಎಂಬ ಧ್ಯೇಯವಾಕ್ಯ ಈ ಬಾರಿಯ ಸಮಾವೇಶದ್ದು. ಹಸಿರು ಕ್ರಾಂತಿಯ ಬಳಿಕ ನಿರ್ಲಕ್ಷ್ಯಕ್ಕೆ ಈಡಾಗಿದ್ದ ಸಾವಯವ ಕೃಷಿಗೆ ಸರ್ಕಾರಗಳ ಬೆಂಬಲವಂತೂ ದೂರದ ಮಾತೇ ಆಗಿತ್ತು. ಹಾಗಿದ್ದರೂ ಪ್ರಜಾnವಂತ ರೈತರು ಹಾಗೂ ರೈತಪರ ಸಂಘಟನೆಗಳ ಬಲದೊಂದಿಗೆ ಸಾವಯವ ಕೃಷಿ ವಿಧಾನ ಕ್ರಮೇಣ ಮುಖ್ಯವಾಹಿನಿಗೆ ಬಂದಿತು. ‘ವಿಷಮಯವಾದ ಪರಿಸರ ಹಾಗೂ ಆಹಾರವನ್ನು ಮತ್ತೆ ಸರಿದಾರಿಗೆ ತರಲು ಸಾವಯವ ಕೃಷಿ ವಿಧಾನವೇ ಸೂಕ್ತ’ ಎಂಬ ಮಾಹಿತಿಗೆ ಈಗ ಸಹಮತ ಸಿಗುತ್ತಿದೆ.ವಿವರಗಳಿಗೆ:https://owc.ifoam.bio/2017 – ಆನಂದತೀರ್ಥ ಪ್ಯಾಟಿ