Advertisement

ಉತ್ತರ ಪ್ರದೇಶದಲ್ಲಿ 6,400 ಆಮೆಗಳು ವಶ; ಕಿಂಗ್‌ಪಿನ್‌ ಅರೆಸ್ಟ್‌

04:17 PM Jan 11, 2017 | Team Udayavani |

ಲಕ್ನೋ : ದೇಶದಲ್ಲೇ ಅತೀ ದೊಡ್ಡ ವಶೀಕರಣ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶ ಎಸ್‌ಟಿಎಫ್ ಸಿಬಂದಿಗಳು ಅಮೇಠಿಯಲ್ಲಿ 6,400 ಆಮೆಗಳನ್ನು ವಶಪಡಿಸಿಕೊಂಡು ಇವುಗಳ ಅಂತಾರಾಜ್ಯ ಕಳ್ಳಸಾಗಣೆ ಜಾಲದ ಕಿಂಗ್‌ಪಿನ್‌ ಖದೀಮನ್ನು ಬಂಧಿಸಿದ್ದಾರೆ.

Advertisement

ವಶಪಡಿಸಿಕೊಳ್ಳಲಾದ ಆಮೆಗಳು 440 ಕ್ವಿಂಟಲ್‌ ತೂಕದ್ದಾಗಿವೆ. ಇವುಗಳನ್ನು ಗೋಣಿ ಚೀಲದಲ್ಲಿ ತುರುಕಿ ತುಂಬಲಾಗಿತ್ತು. ಗೌರೀಗಂಜ್‌ ಪಟ್ಟಣದಲ್ಲಿನ ಆರೋಪಿಯ ಮನೆಯಂಗಳದ ತುಂಬೆಲ್ಲ ಹಲವು ಆಮೆಗಳು ಹರಿದಾಡುತ್ತಿದ್ದವು ಎಂದು ಎಸ್‌ಟಿಎಫ್ ವಕ್ತಾರರೋರ್ವರು ತಿಳಿಸಿದ್ದಾರೆ.

ಗ್ಯಾಂಗ್‌ಪಿನ್‌ ಖದೀಮನನ್ನು ರಾಜ್‌ ಬಹಾದ್ದೂರ್‌ ಸಿಂಗ್‌ ಎಂದು ಗುರುತಿಸಲಾಗಿದ್ದು ಆತನೀಗ ಪೊಲೀಸರ ವಶದಲ್ಲಿದ್ದಾನೆ. ಈತನ ಬಳಿ ಇದ್ದ ಮೆದು ಕೋಶದ ಭಾರತೀಯ ಆಮೆಗಳನ್ನು ಕೂಡ ಎಸ್‌ಟಿಎಫ್ ವಶಪಡಿಸಿಕೊಂಡಿದೆ. 

ಆಮೆ ಕಳ್ಳಸಾಗಣೆ ಜಾಲದಲ್ಲಿ ಶಾಮೀಲಾಗಿರುವ ಉತ್ತರ ಪ್ರದೇಶ, ಪಶ್ಚಿಮ ಬಂಗಾಲ ಮತ್ತು ಒಡಿಶಾದಲ್ಲಿನ ಖದೀಮರ ಹೆಸರುಗಳನ್ನು ಸಿಂಗ್‌ ತನಿಖೆಯಲ್ಲಿ ಬಹಿರಂಗಪಡಿಸಿದ್ದಾನೆ. ಈ ಆಮೆಗಳನ್ನು ಬಾಂಗ್ಲಾದೇಶ, ಮ್ಯಾನ್‌ಮಾರ್‌, ಚೀನ, ಥಾಯ್ಲಂಡ್‌, ಹಾಂಕಾಂಗ್‌ ಮತ್ತು ಇತರ ಆಗ್ನೇಯ ದೇಶಗಳಿಗೆ ಕಳ್ಳಸಾಗಣೆ ಮಾಡಲು ಉದ್ದೇಶಿಸಲಾಗಿತ್ತು ಎಂದು ಸಿಂಗ್‌ ಬಾಯಿ ಬಿಟ್ಟಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next