Advertisement

ಪ್ರಧಾನಮಂತ್ರಿ ಆವಾಸ್‌ ಯೋಜನೆಯಿಂದ ಎಲ್ಲರಿಗೂ ಸೂರು

05:17 PM Jul 20, 2018 | Team Udayavani |

ಮುಂಡರಗಿ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಿಂದ ದೇಶದ ಎಲ್ಲರಿಗೂ ಸೂರು ದೊರಕಲಿದೆ ಎಂದು ರೋಣ ಕ್ಷೇತ್ರದ ಶಾಸಕ ಕಳಕಪ್ಪ ಜಿ. ಬಂಡಿ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮತ್ತು ಕುಡಿಯುವ ನೀರಿನ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಮುಂಡರಗಿ ತಾಲೂಕಿನಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ 12 ಸಾವಿರ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಯೋಜನೆಯಲ್ಲಿ ಎಷ್ಟು ಜನ ಫಲಾನುಭವಿಗಳು ಆದರೂ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಜು.30ರೊಳಗೆ ಸಮರೋಪಾದಿಯಲ್ಲಿ ಫಲಾನುಭವಿಗಳಿಂದ ಮನೆ-ಮನೆಗೆ ತೆರಳಿ ಅರ್ಜಿ ಸ್ವೀಕರಿಸಬೇಕು. ಪ್ರತಿ ಗ್ರಾಮದಲ್ಲಿ ಡಂಗೂರ ಸಾರಿಸಿ ಪ್ರಧಾನಮಂತ್ರಿ ಆವಾಸ್‌ ಯೋಜನೆ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಜಾತಿ, ಪಕ್ಷ ನೋಡದೇ ಬೇಧಭಾವ ಮಾಡದೇ ಅರ್ಜಿ ಪಡೆಯಬೇಕು. ಜತೆಗೆ ಫಲಾನುಭವಿಗಳು ಅರ್ಜಿ ಜತೆಯಲ್ಲಿ ಆಧಾರ್‌ ಕಾರ್ಡ್‌ ನೀಡಿದರೇ ಸಾಕು. ಗ್ರಾಮ ಪಂಚಾಯಿತಿಯವರು ಆನ್‌ಲೈನ್‌ ಮೂಲಕ ಅರ್ಜಿ ಅಪ್‌ಲೋಡ್ ಮಾಡುತ್ತಾರೆ. ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೇ ಶಿಸ್ತಿನ ಕ್ರಮ ಕೈಕೊಳ್ಳಲಾಗುವುದು. ಜನಪ್ರತಿನಿಧಿಗಳು ಕೂಡ ಅಭಿವೃದ್ಧಿ ಅಧಿಕಾರಿಗಳಿಗೆ ಸಹಕಾರ ನೀಡಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಸಾಕಾರಗೊಳಿಸಲು ಮುಂದಾಗಬೇಕು ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್‌ ಇಲಾಖೆ ಅಧಿಕಾರಿಗಳು ಪರಿಹರಿಸುವರು. ಬಹುಗ್ರಾಮ ಸಮಗ್ರ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಕಳೆದ ವರ್ಷದ ಅಂತ್ಯಕ್ಕೆ ಪೂರ್ಣಗೊಳಿಸಬೇಕಾಗಿತ್ತು ಎಂದು ಬಂಡಿ ಹೇಳಿದರು. ಚರ್ಚೆಯಲ್ಲಿ ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ, ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ, ಗ್ರಾಪಂ ಅಧ್ಯಕ್ಷ ಬಸವರಾಜ ಗಂಗಾವತಿ, ಮಾರುತಿ ಹೊಸಮನಿ, ತಾಪಂ ಸದಸ್ಯರಾದ ರುದ್ರಗೌಡ ಪಾಟೀಲ, ಕುಸುಮಾ ಮೇಟಿ, ಪುಷ್ಪಾ ಪಾಟೀಲ, ಭರಮಪ್ಪ ನಾಗನೂರು, ಅಭಿಯಂತರ ಆಕಾಶ ಪಾಲ್ಗೊಂಡಿದ್ದರು. ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪ್ರಧಾನಮಂತ್ರಿ ಆವಾಸ್‌ ಯೋಜನೆ ಮತ್ತು ಕುಡಿಯುವ ನೀರಿನ ಬಗ್ಗೆ ಉಭಯ ಶಾಸಕರಿಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಜಿಪಂ ಸದಸ್ಯರಾದ ಶಕುಂತಲಾ ಚವ್ಹಾಣ, ಶೋಭಾ ಮೇಟಿ, ತಾಪಂ ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ವೆಂಕಪ್ಪ ಬಳ್ಳಾರಿ ಇದ್ದರು. ತಾಪಂ ಸಿ.ಆರ್‌. ಮುಂಡರಗಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next