Advertisement

29 ವರ್ಷಗಳಿಂದ ಪೊಲೀಸ್‌ ಕಸ್ಟಡಿಯಲ್ಲಿದ್ದ ಆಂಜನೇಯ ವಿಗ್ರಹ ಬಿಡುಗಡೆ: ಅದ್ಧೂರಿ ಮೆರವಣಿಗೆ

02:00 PM Mar 29, 2023 | Team Udayavani |

ಪಾಟ್ನಾ: ಕಳವಾಗಿ, ಪತ್ತೆಯಾದ ಬಳಿಕ ಪೊಲೀಸ್‌ ಕಸ್ಟಡಿಯಲ್ಲಿದ್ದ ಆಂಜನೇಯ ವಿಗ್ರಹವನ್ನು 29 ವರ್ಷಗಳ ಬಳಿಕ ಕೋರ್ಟಿನ ಆದೇಶದ ಮೇರೆಗೆ ದೇವಸ್ಥಾನಕ್ಕೆ ತಂದು ಪುನಃ ಸ್ಥಾಪಿಸಲಾಗಿರುವ ಘಟನೆ ಬಿಹಾರದ ಭೋಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.

Advertisement

ಮೇ.29,1994 ರಂದು ಅಷ್ಟಧಾತುವಿನಿಂದ ಮಾಡಿದ ಆಂಜನೇಯ ವಿಗ್ರಹವನ್ನು ಬರ್ಹರಾ ಬ್ಲಾಕ್‌ನ ಗುಂಡಿ ಗ್ರಾಮದಲ್ಲಿನ ಶ್ರೀರಂಗನಾಥ ದೇವಾಲಯದಿಂದ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಅಂದಿನ ದೇವಾಲಯದ ಅರ್ಚಕ ಜನೇಶ್ವರ್ ದ್ವಿವೇದಿ ಅವರು ವಿಗ್ರಹ ಕಳ್ಳತನದ ಆರೋಪದ ಮೇಲೆ ಅಪರಿಚಿತ ಕಳ್ಳರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ತನಿಖೆಯ ನಂತರ ಪೊಲೀಸರು ಕಳ್ಳತನವಾದ ವಿಗ್ರಹಗಳನ್ನು ಬಾವಿಯಲ್ಲಿ ಪತ್ತೆ ಹಚ್ಚಿ ಠಾಣೆಯ ಸ್ಟ್ರಾಂಗ್‌ ರೂಮ್‌ ನಲ್ಲಿಟ್ಟಿದ್ದರು.

ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಬೋರ್ಡ್ (BSRTB) ಕೂಡ ಈ ಬಗ್ಗೆ ಪಾಟ್ನಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿ, ಎಲ್ಲಾ ವಶಪಡಿಸಿಕೊಂಡ ವಿಗ್ರಹಗಳನ್ನು ಟ್ರಸ್ಟ್‌ಗೆ ಹಿಂದಿರುಗಿಸಲು ಹೇಳಿತ್ತು.

ಇದನ್ನೂ ಓದಿ: ಹೈಕೋರ್ಟ್ ತಡೆ; NCP ಸಂಸದ ಫೈಜಲ್ ಅನರ್ಹತೆ ರದ್ದುಪಡಿಸಿದ ಲೋಕಸಭೆ ಸೆಕ್ರೆಟರಿಯೇಟ್

29 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಬಿಹಾರ ಕೋರ್ಟ್‌ ವಿಗ್ರಹಗಳನ್ನು ದೇವಸ್ಥಾನಕ್ಕೆ ಹಸ್ತಾಂತರ ಮಾಡಿ ಎಂದು ಆದೇಶ ನೀಡಿದ ಬಳಿಕ ಬಳಿಕ ಪೊಲೀಸರು ವಿಗ್ರಹಗಳನ್ನು ಹಸ್ತಾಂತರ ಮಾಡಿದ್ದಾರೆ.

Advertisement

ಅರ್ರಾ ಸಿವಿಲ್ ನ್ಯಾಯಾಲಯದ ಎಡಿಜೆ-3 ಸತೇಂದ್ರ ಸಿಂಗ್ ಅವರು ಬಿಡುಗಡೆ ಆದೇಶ ಹೊರಡಿಸಿದ ನಂತರ, ಭಕ್ತರು ಪೊಲೀಸ್ ಠಾಣೆಯಿಂದ ವಿಗ್ರಹಗಳನ್ನು ತೆಗೆದುಕೊಂಡು ಹೋಗಲು ಭವ್ಯವಾದ ಮೆರವಣಿಗೆಯನ್ನು ನಡೆಸಿದ್ದಾರೆ. ಶ್ರೀರಂಗನಾಥ ದೇವಾಲಯದಲ್ಲಿ ಅಷ್ಟಧಾತುವಿನಿಂದ ಮಾಡಿದ ಎರಡೂ ವಿಗ್ರಹಗಳನ್ನು ಪುನಃ ಸ್ಥಾಪಿಸಲಾಗುತ್ತದೆ ಎಂದು ಭಕ್ತರು ಹೇಳಿದ್ದಾರೆ.

ಬಿಎಸ್‌ಆರ್‌ಟಿಬಿಯ ಮಾಜಿ ಅಧ್ಯಕ್ಷ ಆಚಾರ್ಯ ಕಿಶೋರ್ ಕುನಾಲ್ ಮತ್ತು ಅರ್ರಾ ಸಿವಿಲ್ ಕೋರ್ಟ್‌ನ ವಕೀಲ ಅಜಿತ್ ಕುಮಾರ್ ದುಬೆ ವಿಗ್ರಹಗಳ ಬಿಡುಗಡೆಗಾಗಿ ಹೋರಾಟ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next