ಲಾಹೋರ್: ಸ್ವಾತಂತ್ರ್ಯಪೂರ್ವದಲ್ಲೇ ಭಾರತ - ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಬೇಕು ಎಂಬ ಕಲ್ಪನೆ
ವಿ.ಡಿ. ಸಾವರ್ಕರ್‌ರದ್ದು. ಹೀಗೆಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ ಅಯ್ಯರ್ ಹೇಳಿದ್ದಾರೆ.
ಅಲಿಗಡ ಮುಸ್ಲಿಂ ವಿವಿಯಲ್ಲಿ ಮೊಹ ಮ್ಮದ್ ಆಲಿ ಜಿನ್ನಾರ ಫೋಟೋ ಪ್ರದರ್ಶಿಸಿದ ವಿಚಾರದಲ್ಲಿ ವಿವಾದ ಉಂಟಾಗಿರುವ ವೇಳೆಯೇ ಅಯ್ಯರ್ ಪಾಕ್‌ಲ್ಲಿ ಈ ಮಾತು ಗಳನ್ನಾಡಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಎರಡೂ ದೇಶಗಳ ಸಂಬಂಧ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾ ಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಚರ್ಚೆಗೆ ಕಾರಣವಾಗಿರುವ “ಹಿಂದುತ್ವ’ ಕಲ್ಪನೆಯನ್ನು ಹುಟ್ಟು ಹಾಕಿದ್ದೂ ಅವರೇ ಎಂದು ಹೇಳಿದ್ದಾರೆ.
“ಭಾರತದಲ್ಲಿನ ಸದ್ಯದ ಪರಿಸ್ಥಿತಿ ವಿಭಜನೆಯ ಹಾದಿಯಲ್ಲಿದೆ. 1923ರಲ್ಲಿ ವಿ.ಡಿ.ಸಾವರ್ಕರ್ ಎಂಬ ವ್ಯಕ್ತಿ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖ ಇಲ್ಲದಿರುವ ಹಿಂದುತ್ವ ಎಂಬ ಪದ ಪುಂಜ ಹುಟ್ಟು ಹಾಕಿದ್ದರು. ಈ ಮೂಲಕ ಎರಡು ರಾಷ್ಟ್ರಗಳ ರಚನೆಯಾಗ ಬೇಕು ಎಂಬ ಚಿಂತನೆಯನ್ನು ಸದ್ಯ ಅಧಿಕಾರ ದಲ್ಲಿರುವ (ಬಿಜೆಪಿ) ಮಂದಿಯ ಗುರುವೇ ಹರಿಬಿಟ್ಟಿದ್ದರು’ ಎಂದು ಅಯ್ಯರ್ ಹೇಳಿದ್ದಾರೆ.
ಮೋದಿ ಸೋಲು ಖಚಿತ: ಇದೇ ವೇಳೆ, 2019ರ ಚುನಾವಣೆಯಲ್ಲಿ ನರೇಂದ್ರ ಮೋದಿ ಸೋಲು ಅನುಭವಿಸಲಿದ್ದಾರೆ. 2014ರಲ್ಲಿ ಶೇ.70 ಮಂದಿ ತಮ್ಮಲ್ಲಿಯೇ ವಿಭಜನೆಗೊಂಡಿದ್ದರಿಂದ ಅವರು ಜಯ ಗಳಿದ್ದರು. ಮುಂದಿನ ಚುನಾವಣೆಯಲ್ಲಿ ಅವರು ಸೋಲಲಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದಿದ್ದಾರೆ ಅಯ್ಯರ್.