Advertisement

ಅಮೆರಿಕದಲ್ಲಿ ಹಿಂದೂ ದೇವಾಲಯ ಭಗ್ನ, ಗೋಡೆ ಮೇಲೆ ಅವಹೇಳನಕಾರಿ ಸಂದೇಶ

09:34 AM Jan 31, 2019 | Sharanya Alva |

ವಾಷಿಂಗ್ಟನ್: ಅಮೆರಿಕದಲ್ಲಿ ಜನಾಂಗೀಯ ದ್ವೇಷ ಮತ್ತೆ ಗರಿಗೆದರಿದ್ದು, ಇಲ್ಲಿನ ಕೆಂಟುಕಿಯಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಈ ಘಟನೆ ಭಾನುವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗಿನ ಸಮಯದಲ್ಲಿ ನಡೆದಿದ್ದು, ಕೆಂಟುಕಿ ರಾಜ್ಯದಲ್ಲಿರುವ ಸ್ವಾಮಿನಾರಾಯಣ ದೇವಾಲಯದ ಮೂರ್ತಿಗೆ ಕಪ್ಪು ಬಣ್ಣ ಹಚ್ಚಿ, ಹಾಲ್ ನಲ್ಲಿರುವ ಕುರ್ಚಿಗಳನ್ನು ಚೂರಿಯಿಂದ ಹರಿದು ಹಾಕಿರುವುದಾಗಿ ವರದಿ ವಿವರಿಸಿದೆ.

ದೇವರ ವಿಗ್ರಹಕ್ಕೆ ಕಪ್ಪು ಬಣ್ಣ ಬಳಿದು, ಕಿಟಕಿಗಳನ್ನು ಒಡೆದು ಹಾಕಿ, ಗೋಡೆಯ ಮೇಲೆ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮದ ವರದಿ ತಿಳಿಸಿದೆ.  ಈ ಘಟನೆಯಿಂದಾಗಿ ಕೆಂಟುಕಿ, ಲೂಯಿಸ್ ವಿಲ್ಲೆಯಲ್ಲಿರುವ ಭಾರತೀಯ ಮೂಲದವರು ಆಘಾತ, ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next