Advertisement

ತನಿಖೆಗೆ ಸರ್ವ ಸಹಕಾರ : ದಿಲ್ಲಿ ಪೊಲೀಸರಿಗೆ ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್‌ ಪತ್ರ

03:31 AM Apr 20, 2020 | Hari Prasad |

ನವದೆಹಲಿ : ಸರಕಾರದ ಸೂಚನೆಗಳನ್ನು ಉಲ್ಲಂಘಿಸಿ ಬೃಹತ್ ಧಾರ್ಮಿಕ ಸಮಾವೇಶವನ್ನು ನಡೆಸುವ ಮೂಲಕ ಒಂದು ಬೃಹತ್ ಸಮೂಹವನ್ನೇ ಆರೋಗ್ಯದ ಅಪಾಯಕ್ಕೆ ತಳ್ಳಿದ್ದ ತಬ್ಲಿಘಿ ಜಮಾತ್ ಮುಖ್ಯಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲುಗೊಂಡ ಬಳಿಕ ತಬ್ಲೀಘಿ  -ಎ-ಜಮಾತ್‌ ಮುಖ್ಯಸ್ಥ ಮೌಲಾನಾ ಸಾದ್‌ ಖಂಧಾಲ್ವಿ ಮೆತ್ತಗಾದಂತೆ ತೋರುತ್ತಿದೆ.

Advertisement

ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೌಲಾನಾ ಸಾದ್‌, ತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ದಿಲ್ಲಿಯ ಕ್ರೈಂ ಬ್ರಾಂಚ್‌ಗೆ ಪತ್ರ ಬರೆದಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ತಾವೂ ಕೈ ಜೋಡಿಸಿದ್ದಾಗಿ  ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜತೆಗೆ, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್‌ನಲ್ಲಿ ಯಾವುದಾದರೂ ಹೊಸ ಆರೋಪಗಳು ಸೇರ್ಪಡೆಯಾಗಿದ್ದರೆ, ಆ ಎಫ್ಐಆರ್‌ ಪ್ರತಿಯನ್ನು ತಮಗೆ ಕಳುಹಿಸಿಕೊಡಬೇಕು ಎಂದು ಕೋರಿದ್ದಾರೆ.  ಎ. 1 ಹಾಗೂ 2ರಂದು ತಮಗೆ ಕಳುಹಿಸಲಾಗಿದ್ದ ಎರಡು ನೋಟಿಸ್‌ಗಳಿಗೆ ತಾನು ಈಗಾಗಲೇ ಉತ್ತರ ನೀಡಿದ್ದು, ಆ ಮೂಲಕ ತಾವು ತನಿಖೆಗೆ ಸಹಕರಿಸುತ್ತಿರುವುದಾಗಿ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next