Advertisement

ದೇಶದಲ್ಲಿ 8000 ಬ್ಲ್ಯಾಕ್‌ ಫಂಗಸ್ ಪ್ರಕರಣ: ಕರ್ನಾಟಕದಲ್ಲಿ 200ಕ್ಕಿಂತ ಅಧಿಕ ರೋಗಿಗಳಿಗೆ ದೃಢ

01:21 AM May 23, 2021 | Team Udayavani |

ಹೊಸದಿಲ್ಲಿ/ಬೆಂಗಳೂರು: ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿವೆ; ಆದರೆ ಬ್ಲ್ಯಾಕ್‌ ಫ‌ಂಗಸ್‌ ಕಾಟ ಹೆಚ್ಚಿದೆ. ಇದುವರೆಗೆ 13 ರಾಜ್ಯಗಳ ಸುಮಾರು 8,000 ಸಾವಿರ ಮಂದಿಯಲ್ಲಿ ಈ ಶಿಲೀಂಧ್ರ ಸೋಂಕು ಪತ್ತೆ ಆಗಿದೆ. 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

Advertisement

ಸದ್ಯ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ಹರಿಯಾಣ, ದಿಲ್ಲಿ, ಉತ್ತರ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ ಮತ್ತು ತೆಲಂಗಾಣಗಳಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಂಡಿವೆ. ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದು, ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲು ಸೂಚನೆ ನೀಡಿದೆ.

ವಿರಳಾತಿ ವಿರಳ ಪ್ರಕರಣ

ಬ್ಲ್ಯಾಕ್‌ ಫ‌ಂಗಸ್‌ ನಲ್ಲಿಯೇ ಎರಡು ವಿರಳಾತಿ ವಿರಳ ಪ್ರಕರಣಗಳು ದಿಲ್ಲಿಯಲ್ಲಿ ಪತ್ತೆಯಾಗಿವೆ. ಸಾಮಾನ್ಯವಾಗಿ ಬ್ಲ್ಯಾಕ್‌ ಫ‌ಂಗಸ್‌ ಶ್ವಾಸಕೋಶ, ಕಣ್ಣು, ಮೆದುಳಿಗೆ ಹಾನಿ ಮಾಡುತ್ತದೆ. ಆದರೆ ಇಲ್ಲಿ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಈ ರೋಗಿಗಳಿಗೆ ಗಂಗಾರಾಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ವೈಟ್‌ ಫಂಗಸ್‌

Advertisement

ರಾಯಚೂರು ಜಿಲ್ಲೆಯಲ್ಲಿ ವೈಟ್‌ ಫಂಗಸ್‌ ಲಕ್ಷಣವುಳ್ಳ ಕ್ಯಾಂಡಿಡಾ ಫಂಗಸ್‌ ಸೋಂಕು ಕಂಡುಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣವಾದ ಆರು ಮಂದಿಯಲ್ಲಿ ಇದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇವರು ಮನೆಯಲ್ಲೇ ಚೇರಿಸಿಕೊಳ್ಳುತ್ತಿದ್ದಾರೆ. ಇದು ಭಯಾನಕ ಕಾಯಿಲೆಯಲ್ಲ. 14 ದಿನ ಸೂಕ್ತ ಔಷಧ ಪಡೆದರೆ ಗುಣವಾಗುತ್ತಾರೆ ಎಂದು ಚಿಕಿತ್ಸೆ ನೀಡಿದ ಎಂಡೋಸ್ಕೋಪಿ ತಜ್ಞ ಡಾ| ಮಂಜುನಾಥ್‌ ಹೇಳಿದ್ದಾರೆ.

ಕರ್ನಾಟಕಕ್ಕೆ 1,270 ವಯಲ್‌ ಔಷಧ

ಬ್ಲ್ಯಾಕ್‌ ಫ‌ಂಗಸ್‌ಗೆ ನೀಡಲಾಗುವ ಆಂಪೋಟೆರಿಸಿನ್‌-ಬಿ ಔಷಧ ವಯಲ್‌ಗ‌ಳನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಒಟ್ಟು 20 ಸಾವಿರ ವಯಲ್‌ ನೀಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ 1,270 ವಯಲ್‌ ಗಳು ಬಂದಿವೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ಹೇಳಿದ್ದಾರೆ. ರಾಜ್ಯಗಳಲ್ಲಿ ಇರುವ ಪ್ರಕರಣಗಳನ್ನು ಗಮನದಲ್ಲಿ ಇರಿಸಿಕೊಂಡು ವಯಲ್‌ ನೀಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next