Advertisement

ಇನ್ ಫೋಕಸ್: ಬೋರಾಪುರದ ಸುಶಿಕ್ಷಿತ ಹೆಣ್ಣು!

09:27 AM Aug 04, 2017 | |

ಈ ಹುಡುಗಿಯನ್ನು ಖಂಡಿತಾ ನೀವು ಸಿನಿಮಾದಲ್ಲಿ ಇದುವರೆಗೆ ನೋಡಿರಲಿಕ್ಕಿಲ್ಲ. ಮುಂದೆ ನೋಡಬಹುದಷ್ಟೇ. ಏಕೆಂದರೆ ಈಗಷ್ಟೇ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ನಾಯಕಿ ಈಕೆ. ಹೆಸರು ಅಮಿತಾ ರಂಗನಾಥ್‌. ಯಾವ ಅಮಿತಾ ರಂಗನಾಥ್‌ ಎಂದರೆ ಸದ್ಯಕ್ಕೆ “ಡೇಸ್‌ ಆಫ್ ಬೋರಾಪುರ’ ಚಿತ್ರದ ಒನ್‌ ಆಫ್ ದಿ ನಾಯಕಿ ಎನ್ನಬೇಕು. ಹೌದು, “ಡೇಸ್‌ ಆಫ್ ಬೋರಾಪುರ’ ಎಂಬ ಚಿತ್ರವೊಂದು ಬರುತ್ತಿರುವುದು ನಿಮಗೆ ಗೊತ್ತಿರಬಹುದು. ಆ ಚಿತ್ರದ ಇಬ್ಬರು ನಾಯಕಿಯರಲ್ಲಿ ಅಮಿತಾ ಕೂಡಾ ಒಬ್ಬರು. ಅಮಿತಾಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾ. ಆದರೆ, ತೆಲುಗು ಹಾಗೂ ತಮಿಳಿನಲ್ಲಿ ಈಗಾಗಲೇ ಒಂದೊಂದು ಸಿನಿಮಾ ಮಾಡಿದ್ದಾರೆ ಅಮಿತಾ. ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂದು ಅಮಿತಾ ಎದುರು ನೋಡುತ್ತಿದ್ದಾಗ ಸಿಕ್ಕಿದ್ದು “ಡೇಸ್‌ ಆಫ್ ಬೋರಾಪುರ’. ಹಳ್ಳಿ ಉದ್ಧಾರ ಮಾಡಬೇಕೆಂದುಕೊಂಡು ಬರುವ ಎಜುಕೇಟೆಡ್‌ ಹುಡುಗಿಯ ಪಾತ್ರವಂತೆ. ಮೊದಲ ಕನ್ನಡ ಸಿನಿಮಾದಲ್ಲೇ ಒಳ್ಳೆಯ ಪಾತ್ರ ಸಿಕ್ಕ ಖುಷಿ ಅಮಿತಾಗಿದೆ. 

Advertisement

ಸಿನಿಮಾಕ್ಕೆ ಬರುವ ಮುನ್ನ ನಟನೆ ಕಲಿಯಬೇಕೆಂಬ ಕಾರಣಕ್ಕೆ ಅಮಿತಾ ಅಭಿನಯ ತರಂಗದಲ್ಲಿ ತರಬೇತಿ ಕೂಡಾ ಪಡೆದಿದ್ದಾರೆ. ಸದ್ಯ “ಡೇಸ್‌ ಆಫ್ ಬೋರಾಪುರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈಗಾಗಲೇ ಅಮಿತಾಗೆ ಒಂದಷ್ಟು ಅವಕಾಶಗಳು ಬರುತ್ತಿವೆ. ಮುಂದಿನ ಸಿನಿಮಾಕ್ಕಾಗಿ ಅಮಿತಾ ಮಾರ್ಷಲ್‌ ಆರ್ಟ್ಸ್, ಕರಾಟೆ ಕೂಡಾ ಕಲಿಯುತ್ತಿದ್ದಾರಂತೆ. “ನನಗೆ ಚಿತ್ರರಂಗದಲ್ಲೇ ನೆಲೆ ನಿಲ್ಲುವ ಆಸೆ ಇದೆ. ಯಾವುದೇ ಒಂದು ಪಾತ್ರಕ್ಕೆ ಅಂಟಿಕೊಳ್ಳದೇ ಎಲ್ಲಾ ರೀತಿಯ ಪಾತ್ರ ಮಾಡಬೇಕು’ ಎನ್ನುವುದು ಅಮಿತಾ ಮಾತು.

ರ‌ವಿ ರೈ

Advertisement

Udayavani is now on Telegram. Click here to join our channel and stay updated with the latest news.

Next