Advertisement

ಚೀನ ಮುಚ್ಚಿಟ್ಟಿದ್ದ ಸೋಂಕಿತರ ಸಂಖ್ಯೆ ಬಹಿರಂಗ

08:37 AM May 18, 2020 | Hari Prasad |

ಹೊಸದಿಲ್ಲಿ: ಕೋವಿಡ್ ಸಾವು – ನೋವುಗಳ ಸಂಖ್ಯೆಯನ್ನು ಚೀನ ಮುಚ್ಚಿಟ್ಟಿದೆ ಎನ್ನುವುದು ಜಗತ್ತಿನ ಎಲ್ಲರೊಳಗೂ ಇರುವ ಶಂಕೆ.

Advertisement

ಈ ಸತ್ಯವೀಗ ಚೀನದ ಮಿಲಿಟರಿ ನಡೆಸುವ ವಿವಿಯಿಂದಲೇ ಸೋರಿಕೆಯಾಗಿದೆ.

4,682ರ ಸಾವು, 84,029 ಸೋಂಕಿತರು- ಇದು ಚೀನ ಸರಕಾರ ಹೇಳುತ್ತಾ ಬಂದಿದ್ದ ಅಂಕಿ- ಅಂಶ.

ಆದರೆ, ಚಾಂಗ್ಸಾ ಸಿಟಿಯ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿವಿಯ ದತ್ತಾಂಶಗಳಲ್ಲಿ, ಚೀನಾದಲ್ಲಿ 6,40,000 ಸೋಂಕು ಪ್ರಕಣಗಳು ದಾಖಲಾಗಿವೆ.

ಚೀನಾದ ಸುಮಾರು 230 ನಗರಗಳಲ್ಲಿ ಈ ಕೋವಿಡ್ ಮಹಾಮಾರಿ ಅಟ್ಟಹಾಸವನ್ನು ಮೆರೆದಿದೆ ಎಂಬ ಅಂಶವೂ ಇದೀಗ ಬಹಿರಂಗಗೊಂಡಿರುವ ಈ ವರದಿಯಲ್ಲಿದೆ.

Advertisement

ವಿವಿಯಿಂದ ಸೋರಿಕೆಯಾದ ಈ ದತ್ತಾಂಶವನ್ನು ‘ಫಾರಿನ್‌ ಪಾಲಿಸಿ’ ಜಾಲತಾಣ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next