Advertisement

ನಿಲ್ಲಲ್ಲೂ  ಸ್ಥಳವಿಲ್ಲದ ನಿಲ್ದಾಣ

04:36 PM Oct 28, 2018 | |

ಅಂಕೋಲಾ: ಹೈಟೆಕ್‌ ಬಸ್‌ ನಿಲ್ದಾಣ ಮಾಡುವ ತರಾತುರಿಯಲ್ಲಿ ಇದ್ದ ನಿಲ್ದಾಣವನ್ನು ನೆಲಸಮ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಇಲ್ಲದೆ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹೈಟೆಕ್‌ ಬಸ್‌ನಿಲ್ದಾಣದ ಕಾಮಗಾರಿ ಚುನಾವಣಾ ಪೂರ್ವದಲ್ಲಿಯೆ ಆರಂಭವಾಗಿತ್ತು. ಪೆಬ್ರವರಿ ತಿಂಗಳಿನಲ್ಲಿ ಈ ಅಂಕೋಲಾ ಬಸ್‌ ನಿಲ್ದಾಣಕ್ಕೆ ಹೈಟೆಕ್‌ ಟಚ್‌ ನೀಡಲು 3.85ಕೋಟಿ ರೂ ಅನುದಾನದಲ್ಲಿ ಇಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಈ ಕಾಮಗಾರಿಯು ಅನೇಕ ಅಡೆತಡೆಗಳ ನಡುವೆಯು ಕುಂಟುತ್ತಾ ಸಾಗಿದ್ದು ಕಂಡು ಬಂದಿದೆ. ಆದಾಗ್ಯ ಕಾಮಗಾರಿ ಕಳಪೆ ಮಟ್ಟದ್ದೆಂದು ಸಾರ್ವಜನಿಕರು ದೂರಿದ್ದರು. ಚುನಾವಣಾ ಮುಗಿದ ಬಳಿಕ ಶಾಸಕಿ ರೂಪಾಲಿ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಗುತ್ತೆದಾರ ಬಸ್‌ ನಿಲ್ದಾಣದ ಕಾಮಗಾರಿ ಗುಣಮಟ್ಟದ್ದಾಗಿದೆ ಎಂದು ಲಿಖಿತವಾಗಿ ಶಾಸಕರಿಗೆ ನೀಡಿದ್ದಾರೆ.

ಇಲ್ಲಿ ನಡೆದಿರುವ ಬಸ್‌ ನಿಲ್ದಾಣದ ಹೊಸ ಕಟ್ಟಡ ಕಾಮಗಾರಿಯು ಸಮರ್ಪಕವಾಗಿ ಆಗದಿದ್ದರು ಪ್ರಯಾಣಿಕರಿಗೆ ಯಾವುದೆ ಬದಲಿ ವ್ಯವಸ್ಥೆ ಕಲ್ಪಿಸದೆ, ಇರುವ ಕಟ್ಟಡವನ್ನು ನೆಲಸಮ ಮಾಡುತ್ತಿದ್ದಾರೆ. ಬಸ್‌ಗಳ ನಿಲುಗಡೆಗೂ ಸರಿಯಾದ ವ್ಯವಸ್ಥೆ ಇಲ್ಲ. ಇದರಿಂದಾಗಿ ನಿಲ್ದಾಣದ ಹೊರಬಾಗದಲ್ಲಿ ಬಸ್‌ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಟ್ರಾಪಿಕ್‌ ಸಮಸ್ಯೆ ಮತ್ತು ಯಾವ ಬಸ್‌ ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ತಿಳಿಯದ ಪ್ರಯಾಣಿಕರು ಗೊಂದಲದಲ್ಲಿ ಸಿಲುಕಿದ್ದಾರೆ.

ಶೌಚಾಲಯಕ್ಕೆ ಬೀಗ: ಕೆಳೆದ 10 ದಿನಗಳಿಂದ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದ್ದು ಪ್ರಯಾಣಿಕರ ಪರದಾಟ ಹೇಳತಿರದು. ದೂರದ ಪ್ರಯಾಣಿಕರು ಶೌಚಾಲಯಕ್ಕೆ ಹೊಗುವುದಾದರೆ ಇಲ್ಲಿಯ ಶೌಚ ಗ್ರಹಕ್ಕೆ ಗೃಹಣ ಹಿಡಿದಿರುವುದನ್ನು ಗಮನಿಸಿ ಸಂಬಂಧಿಸಿದ ಅದಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಪುರಸಭೆ ಶೌಚಾಲಯವು ನಿರ್ವಹಣೆಯಿಲ್ಲದೆ ಮುಚ್ಚಲ್ಪಟ್ಟಿದೆ.

ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನಾವು ತಾತ್ಕಾಲಿಕವಾಗಿ ಸೌಕರ್ಯ ಕಲ್ಪಿಸುತ್ತೇವೆ. ಒಂದೆರಡು ದಿನದಲ್ಲಿ ಶೌಚಾಲಯವನ್ನೂ ಪ್ರಯಾಣಿಕರ ಬಳಕೆಗೆ ನೀಡುತ್ತೇವೆ. ಪ್ರಯಾಣಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೂ ಸೂಚಿಸಲಾಗಿದೆ.
 ಎ.ಎಸ್‌. ಆಡಳಿಮಠ,
ಘಟಕ ವ್ಯವಸ್ಥಾಪಕ ಅಂಕೋಲಾ

Advertisement

ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸ್ಥಳೀಯ ಅಧಿಕಾರಿ ವರ್ಗ ಪ್ರಯಾಣಿಕರಿಗೆ ಯಾವುದೇ ಮೂಲಭೂತ ವ್ಯವಸ್ಥೆ ಕಲ್ಪಿಸದೆ ಹಳೆ ಕಟ್ಟಡ ನೆಲಸಮ ಮಾಡುತ್ತಿದ್ದಾರೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತದೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಗೆ ದೂರು ನೀಡಲಾಗುವುದು.
 ಉಮೇಶ ನಾಯ್ಕ
 ನ್ಯಾಯವಾದಿ

„ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next