ರಾಯಪುರ: ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯ ಘೊಟಿಯ ಹಳ್ಳಿಯ ಸಮೀಪವಿರುವ ಪರ್ವಾತರಣ್ಯ ಪ್ರದೇಶದಲ್ಲಿ ಗ್ರೆನೇಡ್ ಹಾರಿಸಬಲ್ಲ ಸಾಧನವೊಂದು ದೊರೆತಿದೆ. ಇದನ್ನು ನೋಡಿ ಸ್ವತಃ ಭದ್ರತಾಪಡೆಗಳು ಅಚ್ಚರಿಪಟ್ಟಿವೆ.
ಇಲ್ಲಿ ಗ್ರೆನೇಡ್ ಹಾರಿಸುವ ಸಾಧನವೊಂದು ಪತ್ತೆಯಾಗಿದ್ದು ಇದೇ ಮೊದಲು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಘೊಟಿಯ ಸಮೀಪದ ಪರ್ವತದಲ್ಲಿ ಮಾವೋವಾದಿಗಳು ಅವಿತು ಕುಳಿತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ; ಅರೆಸೇನಾಪಡೆ, ವಿಶೇಷ ಕಾರ್ಯಪಡೆ, ಜಿಲ್ಲಾ ಮೀಸಲು ಪೇದೆಗಳು ಅಡಗುತಾಣದತ್ತ ಧಾವಿಸಿದರು. ಪೊಲೀಸರು ಹತ್ತಿರಬಂದಿದ್ದು ಗೊತ್ತಾದ ಕೂಡಲೇ ಮಾವೋವಾದಿಗಳು ಯದ್ವಾತದ್ವಾ ಗುಂಡು ಹಾರಿಸಿ, ಪರಾರಿಯಾಗಿದ್ದಾರೆ.
ಶೋಧ ಮುಂದುವರಿಸಿದ ಪೊಲೀಸರಿಗೆ ಈ ಗ್ರೆನೇಡ್ ಲಾಂಚರ್ ಸಿಕ್ಕಿದೆ.
ಇದನ್ನೂ ಓದಿ :ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ 54 ಭಾರತೀಯ ಮೀನುಗಾರರ ಬಿಡುಗಡೆ