Advertisement

ಸಾವಿರ ಮತಗಳ ಸೋಲು-ಗೆಲುವಿನ ಅಂತರ ಸಾಮಾನ್ಯ; 50 ಮತಗಳ ಸೋಲೂ ಬಿಹಾರ ರಾಜಕೀಯ ಇತಿಹಾಸದಲ್ಲಿದೆ!

06:15 PM Oct 09, 2020 | Karthik A |

ಮಣಿಪಾಲ: 2008ರಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಹಲವು ಕುತೂಹಲಕ್ಕೆ ಸಾಕ್ಷಿಯಾಗಿತ್ತು. ಇಲ್ಲಿನ ಪ್ರಸಿದ್ಧ ಮತ್ತು ಪ್ರತಿಷ್ಠಿತ ನಾಥ್ವಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಿಪಿ ಜೋಶಿ ಅವರನ್ನು ಮತ್ತು ಬಿಜೆಪಿಯು ಕಲ್ಯಾಣ್ ಸಿಂಗ್ ಚೌಹಾಣ್‌ ಅವರನ್ನು ಕಣಕ್ಕಿಳಿಸಿತ್ತು. ಈ ಎರಡೂ ನಾಯಕರು ಬಲಾಢ್ಯರೇ. ಈ ಉಭಯ ನಾಯಕರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಇದು ದೇಶಾದ್ಯಂತ ಹೆಚ್ಚು ಕುತೂಹಲದ ಕ್ಷೇತ್ರವಾಗಿ ಬದಲಾಗಿತ್ತು.

Advertisement

ನಾಲ್ಕು ಬಾರಿ ಶಾಸಕರಾಗಿ ಅನುಭವ ಹೊಂದಿದ್ದ ಸಿಪಿ ಜೋಶಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಆದರೆ ಅವರು ಒಂದು ಮತಗಳಿಂದ ಸೋಲು ಕಂಡಿದ್ದರು. ಜೋಶಿ 62,215 ಮತಗಳನ್ನು ಪಡೆದರೆ ಅವರ ಎದುರಾಳಿ ಕಲ್ಯಾಣ್ ಸಿಂಗ್ 62,216 ಮತಗಳನ್ನು ಪಡೆದಿದ್ದರು.

ಸಿಪಿ ಜೋಶಿ ಅವರ ಸೋಲಿನ ಹಿಂದಿನ ಕಾರಣವೂ ಬಹಳ ಕುತೂಹಲಕಾರಿಯಾಗಿದೆ. ಇಲ್ಲಿ ಸಿಪಿ ಜೋಶಿ ಅವರ ಸೋಲಿಗೆ ಅವರ ಕುಟುಂಬವೇ ಕಾರಣವಾಗಿತ್ತು. ವಾಸ್ತವವಾಗಿ ಮತದಾನದ ದಿನ ಅವರ ಪತ್ನಿ ಮತ್ತು ಮಗಳು ದೇವಸ್ಥಾನಕ್ಕೆ ಹೋಗಿದ್ದರು. ಹೀಗಾಗಿ ಅವರಿಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ಸಿಪಿ ಜೋಶಿ ಅವರೇ ಈ ಬಗ್ಗೆ ಹೇಳಿದ್ದರು. 2008ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಯಿತು, ಆದರೆ ಸಿಪಿ ಜೋಶಿ ಅವರು ಸೋಲು ಅನುಭವಿಸಿದ ಕಾರಣ ಅಶೋಕ್ ಗೆಹ್ಲೋಟ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ದಾರಿ ಮಾಡಿಕೊಟ್ಟಿತು.

ಅದಕ್ಕಿಂತ ಪೂರ್ವದಲ್ಲಿನ ಮತ್ತೊಂದು ಉದಾಹರಣೆ ಇದೆ. 2004ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಜಾತ್ಯತೀತ ಜನತಾದಳ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರು ಸಾಂತೇಮರಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ಸಿನ ಧ್ರುವನಾರಾಯಣ್ ಆರ್. ಅವರ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಕೃಷ್ಣಮೂರ್ತಿ ಅವರು ಕೇವಲ ಒಂದು ಮತದಿಂದ ಸೋತರು. ಇದಕ್ಕೆ ಅವರ ಚಾಲಕನ ಮತ ಚಲಾವಣೆಯಾಗದೇ ಉಳಿಯಿತು ಎಂದು ಹೇಳಲಾಗಿತ್ತು.

ಬಿಹಾರದಲ್ಲಿ ಚುನಾವಣೆ ಇದ್ದರೂ ಬೇರೆ ರಾಜ್ಯದ ಮಾಹಿತಿಗಳನ್ನು ನೀಡಲಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಬಂದಿರಬಹುದು. ಇಲ್ಲಿ ನಮ್ಮ ಒಂದು ಮತದ ಪ್ರಾಮುಖ್ಯವನ್ನು ತಿಳಿಯುವ ಉದ್ದೇಶದಿಂದ ಈ ಉದಾಹರಣೆಗಳನ್ನು ನೀಡಲಾಗಿದೆ. ಪ್ರತಿ ಚುನಾವಣೆಯಲ್ಲಿ ತಲಾ ಒಂದು ಮತಗಳ ಪ್ರಾಮುಖ್ಯತೆ ಇದೆ.

Advertisement

ಬಿಹಾರದಲ್ಲಿ ಅಭ್ಯರ್ಥಿಯು ಒಂದು ಮತದಿಂದ ಸೋತಾಗ ರಾಷ್ಟ್ರೀಯ ಸುದ್ದಿವಾಹಿನಿಗಳು ಕರ್ನಾಟಕ ಮತ್ತು ರಾಜಸ್ಥಾನದ ಉದಾಹರಣೆಗಳನ್ನು ಹೇಳುತ್ತವೆ. ಆದರೆ ಬಿಹಾರದ ಚುನಾವಣಾ ಇತಿಹಾಸದಲ್ಲಿ ಅಭ್ಯರ್ಥಿಗಳು ಕಡಿಮೆ ಮತಗಳಿಂದ ಗೆಲುವು ಸಾಧಿಸುವುದು ಮಾಮೂಲಿಯಾಗಿದೆ. ಹಲವು ಉದಾಹರಣೆಗಳಲ್ಲಿ ಗೆಲುವಿನ ಅಂತರವು 50ಕ್ಕಿಂತ ಕಡಿಮೆಯಿದ್ದಾಗ ಈ ಉದಾಹರಣೆಗಳು ನೆನಪಾಗುತ್ತವೆ.

ಕಳೆದ ಕೆಲವು ಚುನಾವಣೆಯಲ್ಲಿ ಬಿಹಾರದಲ್ಲಿ ಬಹುತೇಕ ಕ್ಷೇತ್ರಗಳ ಸೋಲು-ಗೆಲುವುಗಳ ಅಂತರ 1000 ಮತಗಳಿಗಿಂತ ಕಡಿಮೆ. ಕಳೆದ 10 ಚುನಾವಣೆಗಳಲ್ಲಿ ಅಭ್ಯರ್ಥಿಗಳು 50ಕ್ಕಿಂತ ಕಡಿಮೆ ಅಂತರದಿಂದ ಗೆದ್ದವರು ಇದ್ದಾರೆ. 2015ರಲ್ಲಿ 8 ಮಂದಿ ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು.ದೇಶದಲ್ಲಿ ಇಂತಹ ನೇರಾ ನೇರಾ ಪೈಪೋಟಿ ದಾಖಲಾಗುತ್ತಿರುವುದು ಬಿಹಾರದಲ್ಲಿ ಮಾತ್ರ.

 

 

 

 

Advertisement

Udayavani is now on Telegram. Click here to join our channel and stay updated with the latest news.

Next