Advertisement
ಚುನಾವಣೆಗೆ ವಾರಗಳಿರುವಂತೆ ಎಲ್‌ಜೆಪಿ ನಾಯಕ ರಾಮ್‌ವಿಲಾಸ್ ಪಾಸ್ವಾನ್ ಅವರು ನಿಧನ ಹೊಂದಿದ್ದು, ಈ ನಿಟ್ಟಿನಲ್ಲಿ ಎಲ್‌ಜೆಪಿ ನಡೆ ಬದಲಾದ ಕುರಿತು ಯಾವುದೇ ಸುಳಿವು ಇಲ್ಲ. ದಿ. ರಾಮ್‌ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಈ ಬಾರಿಯ ಚುನಾವಣೆಯನ್ನು ನೋಡಿಕೊಳ್ಳಲಿದ್ದಾರೆ.
Related Articles
Advertisement
ಆದರೆ 2015ರ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಹವಾ ಚೆನ್ನಾಗಿತ್ತು. 2014ರಲ್ಲಿ ಲೋಕ ಸಭಾ ಚುನಾವಣೆ ನಡೆದು ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಹಾರದಲ್ಲಿಯೂ ಜನರು ಬಿಜೆಪಿ ಕಡೆ ಒಲವು ತೋರಿದಂತೆ ಕಂಡುಬಂದಿತ್ತು. ಆದರೆ ಸೀಟುಗಳು ಹೆಚ್ಚಾಗಲಿಲ್ಲ. ಅಂದರೆ ಅತಿ ಹೆಚ್ಚು ಶೇ.25 ಮತಗಳನ್ನು ಹೊಂದಿದ್ದರೂ ಕೇವಲ 53 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 2010ಕ್ಕೆ ಹೋಲಿಸಿದರೆ ಬಿಜೆಪಿಯ ಮತ ಪಾಲು ಶೇ. 8 ಹೆಚ್ಚಾಗಿದೆ. ಆದರೆ ಈ ಹಿಂದಿಗಿಂತ ಕಡಿಮೆ ಸೀಟುಗಳನ್ನು ಪಡೆದಿತ್ತು. 2010ರಲ್ಲಿ ಬಿಜೆಪಿ ಶೇ. 16.5 ಮತಗಳೊಂದಿಗೆ 91 ಸ್ಥಾನಗಳನ್ನು ಗೆದ್ದಿತ್ತು. 2015ರಲ್ಲಿ ಶೇಕಡಾವಾರು ಮತಗಳು ಹೆಚ್ಚಾದರೂ ಸೀಟುಗಳ ಗಳಿಕೆ ಮಾತ್ರ ಕಡಿಮೆಯಾಗಿತ್ತು ಎಂಬುದು ಉಲ್ಲೇಖನೀಯ.
ನಿತೀಶ್ ಅವರ ಜೆಡಿಯು ಮಹಾಮೈತ್ರಿಯ ಪರಿಣಾಮವೋ ಏನೋ ಎಂಬಂತೆ ದೊಡ್ಡ ಹೊಡೆತವನ್ನು ಸಹಿಸಿಕೊಳ್ಳಬೇಕಾಯಿತು. ಏಕೆಂದರೆ 2010ಕ್ಕೆ ಹೋಲಿಸಿದರೆ ಜೆಡಿಯು 2015ರಲ್ಲಿ ಪಡೆದ ಮತ ಪಾಲು ತುಂಬಾ ಕಡಿಮೆ. ಮಾತ್ರವಲ್ಲದೆ ಸ್ಥಾನಗಳನ್ನು ಕಡಿಮೆ ಗಳಿಸಿತ್ತು. 2010ರ ಚುನಾವಣೆಯಲ್ಲಿ ಜೆಡಿಯು ಶೇ. 22.6 ಮತ ಹಂಚಿಕೆಯೊಂದಿಗೆ 115 ಸ್ಥಾನಗಳನ್ನು ಗೆದ್ದಿದ್ದರೆ, 2015ರಲ್ಲಿ ಶೇ. 17.3 ಮತ ಹಂಚಿಕೆಯೊಂದಿಗೆ ಕೇವಲ 71 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಪ್ರಸ್ತುತ ಎನ್‌ಡಿಎಗೆ ಬಿಹಾರ ವಿಧಾನಸಭೆಯಲ್ಲಿ 130 ಸ್ಥಾನಗಳಿವೆ. ಅಂದರೆ ಬಹುಮತಕ್ಕಿಂತ 8 ಹೆಚ್ಚು. ಅವುಗಳಲ್ಲಿ ಜೆಡಿಯು ಗರಿಷ್ಠ 69 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ 54 ಸ್ಥಾನಗಳನ್ನು ಹೊಂದಿದೆ. ಇದನ್ನು 2020ರ ವಿಧಾನ ಸಭಾಚುನಾವಣೆಯಲ್ಲಿ ಉಳಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.