ಹೊಸದಿಲ್ಲಿ: 2014ರಲ್ಲಿ ದೇಶವಾಸಿಗಳಲ್ಲಿ ಬಹು ತೇಕರಿಗೆ ಗೊತ್ತೇ ಇರಲಿಲ್ಲ. ಆದರೂ, ದೇಶದ ಜನ ನನ್ನನ್ನು ಗೆಲ್ಲಿಸಿದ್ದರು. ಈಗ 10 ವರ್ಷಗಳ ಕಾಲ ಆಡಳಿತದಲ್ಲಿದ್ದೇನೆ, ಸಾಕಷುc ಅಭಿ ವೃದ್ಧಿ ಕಾರ್ಯವನ್ನೂ ಮಾಡಿದ್ದೇನೆ. ಹೀಗಾಗಿ 2024ರಲ್ಲಿಯೂ ನಾನೇ ಗೆಲ್ಲುತ್ತೇನೆ…
ಇದು ಪ್ರಧಾನಿ ನರೇಂದ್ರ ಮೋದಿ ಅವರ ನುಡಿಗಳು. ಮನಿ ಕಂಟ್ರೋಲ್ ವೆಬ್‌ಸೈಟ್‌ಗೆ ಸಂದರ್ಶನ ನೀಡಿರುವ ಅವರು, 2024ರ ಲೋಕಸಭೆ ಚುನಾವಣೆ, ಜಿ20 ಸೇರಿದಂತೆ ಹಲವಾರು ಅಂಶಗಳ ಬಗ್ಗೆ ಮಾತನಾಡಿದ್ದಾರೆ.
2014ರಲ್ಲಿ ಮೋದಿ ಬಗ್ಗೆ ತುಂಬಾ ಕಡಿಮೆ ಜನಕ್ಕೆ ಗೊತ್ತಿತ್ತು. ಆದರೂ ಜನ ದೊಡ್ಡ ಬಹುಮತ ನೀಡಿದರು. ಈಗ 10 ವರ್ಷಗಳಿಂದ ಅಧಿಕಾರದಲ್ಲಿದ್ದು, ಎಲ್ಲ ಕಡೆಯೂ ನನ್ನ ಬಗ್ಗೆ ಗೊತ್ತಿದೆ. ಈಗ ಮೋದಿ ಎಲ್ಲ ಕಡೆಯೂ ಇದ್ದಾರೆ. ಚಂದ್ರಯಾನ ಮಿಷನ್‌ನಿಂದಾಗಿ, ಅಮೆರಿಕ ಪ್ರವಾಸದ ವೇಳೆಯೂ ಮೋದಿ ಬಗ್ಗೆ ಗೊತ್ತಾ ಗಿದೆ. ಈಗಲೂ ಜನ ಸರಿಯಾದ ನಿರ್ಧಾರ ತೆಗೆದು ಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಮೋದಿ ಹೇಳಿದ್ದಾರೆ.
ಸ್ಥಿರ ಸರಕಾರಕ್ಕೆ ಮನ್ನಣೆ: ಜನ ಸ್ಥಿರ ಸರಕಾರಕ್ಕೆ ಮನ್ನಣೆ ಕೊಡುತ್ತಾರೆ ಎಂಬುದಕ್ಕೆ ಕಳೆದ ಎರಡು ಬಾರಿಯ ಫಲಿತಾಂಶವೇ ಉದಾಹರಣೆ. ಸ್ಥಿರ ಸರಕಾರದಿಂದ ದೇಶದ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯ. ಮೊದಲ ಬಾರಿಗೆ ನಾವು ನೀಡಿದ ಭರವಸೆಯಿಂದಾಗಿ ಮತ ಹಾಕಿದರೆ, ಎರಡನೇ ಬಾರಿಗೆ ನಮ್ಮ ಕೆಲಸ ನೋಡಿ ಮತ ಹಾಕಿದರು ಎಂದು ಮೋದಿ ಹೇಳಿದರು.
ದಿಲ್ಲಿ ಎಂದರೆ ಹಿಂದೂಸ್ಥಾನವಲ್ಲ: ಇಂದಿಗೂ ಬಹಳಷ್ಟು ಮಂದಿ ದಿಲ್ಲಿ ಎಂದರೆ ಹಿಂದೂಸ್ಥಾನ ಎಂದೇ ತಿಳಿದುಕೊಂಡಿದ್ದಾರೆ. ಆದರೆ ದಿಲ್ಲಿ ಎಂದರೆ ಹಿಂದೂಸ್ಥಾನವಲ್ಲ. ನನ್ನ ಅವಧಿಯಲ್ಲಿ ದೇಶಾದ್ಯಂತ ಸುತ್ತಿದ್ದೇನೆ. ವಿದೇಶಿ ಗಣ್ಯರು ಬಂದಾಗ, ಬೇರೆ ಬೇರೆ ಸ್ಥಳಗಳಲ್ಲಿ ಅವರನ್ನು ಭೇಟಿ ಮಾಡಿದ್ದೇನೆ. ಭಾರತವೆಂದರೆ, ದಿಲ್ಲಿಯಾಚೆಗೂ ಇದೆ ಎಂಬುದನ್ನು ತೋರಿಸಿದ್ದೇನೆ ಎಂದು ಮೋದಿ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಜರ್ಮನಿಯ ಛಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರನ್ನು ಬೆಂಗಳೂರಿಗೆ ಕರೆ ತಂದಿದ್ದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾವಿಸಿದರು.